ಕಿಚ್ಚನ ಮಗಳು ಸಂಗೀತ ಲೋಕದ ಹೊಸ ತಾರೆ: ಸಾನ್ವಿ ಸುದೀಪ್ ಫಸ್ಟ್ ಸಾಂಗ್ ಟ್ರೆಂಡಿಂಗ್‌ನಲ್ಲಿ No 1!

Published : Dec 19, 2025, 06:26 PM IST
Sanvi Sudeep

ಸಾರಾಂಶ

ಅಪ್ಪ ಸೂಪರ್​ ಸ್ಟಾರ್.. ಶ್ರೀಮಂತ ನಟ. ಬೇಕಾಗಿದ್ದೆಲ್ಲಾ ಕಣ್ ಮುಂದೆಯೇ ಇರುತ್ತೆ. ಮನೆ ಫ್ರೆಂಡ್ಸ್​ ಆಂತ ಓಡಾಡ್ಕೊಂಡು ಎಂಜಾಯ್ ಮಾಡ್ಕೊಂಡು ಇರಬಹುದು.. ಆದ್ರೆ ಬಾದ್ ಷಾ ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಹಾಗಲ್ಲ.

ಅಪ್ಪ ಸೂಪರ್​ ಸ್ಟಾರ್.. ಶ್ರೀಮಂತ ನಟ. ಬೇಕಾಗಿದ್ದೆಲ್ಲಾ ಕಣ್ ಮುಂದೆಯೇ ಇರುತ್ತೆ. ಮನೆ ಫ್ರೆಂಡ್ಸ್​ ಆಂತ ಓಡಾಡ್ಕೊಂಡು ಎಂಜಾಯ್ ಮಾಡ್ಕೊಂಡು ಇರಬಹುದು.. ಆದ್ರೆ ಬಾದ್ ಷಾ ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಹಾಗಲ್ಲ. ಅಪ್ಪನಂತೆ ನನ್ನಲ್ಲಿರೋ ಟ್ಯಾಲೆಂಟ್ ಅನ್ನ ಇಡೀ ಪ್ರಪಂಚಕ್ಕೆ ತೋರಿಸಿದ್ದಾರೆ. ಅದಕ್ಕೆ ಏಣಿಯಾಗಿ ನಿಂತ ಸುದೀಪ್​ ಮಗಳ ಕನಸು ನನಸು ಮಾಡಿದ್ದಾರೆ. ಸಂಗೀತ ಲೋಕಕ್ಕೆ ಹೊಸ ಸಿಂಗರ್​ ಅನ್ನ ಪರಿಚಯಿಸಿದ್ದಾರೆ. ಈಗ ಎಲ್ಲೆಲ್ಲೂ ಸಾನ್ವಿ ಸುದೀಪ್​ರ ಕಂಠದ್ದೆ ಗುಣಗಾನ ನಡೀತಿದೆ. ಯೆಸ್, ಸಾನ್ವಿ ಸುದೀಪ್ ಕನಸು ನನಸಾಗಿದೆ. ಇಷ್ಟು ದಿನ ಒಂದೊಳ್ಳೆ ಹಾಡಿನ ಮೂಲಕ ಸಂಗೀತ ಸಾಮ್ರಾಜ್ಯದಲ್ಲಿ ಬೆಳಗಬೇಕು.

ಹೊಳಿಬೇಕು ಅಂತ ಹಠ ಹೊತ್ತಿದ್ದ ಸಾನ್ವಿ ಮೊದಲ ಹೆಜ್ಜೆಯಲ್ಲೇ ಇಡೀ ಸಂಗೀತ ಲೋಕವೇ ಒಮ್ಮೆ ತಿರುಗಿ ನೋಡುವಂತೆ ಮಾಡಿದ್ದಾರೆ. ಅದಕ್ಕೆ ಕಾರಣ ಬಾದ್ ಷಾ ಕಿಚ್ಚ ಸುದೀಪ್​​ರ ಮಾರ್ಕ್​ನ ಮಸ್ತ್​ ಮಲೈಕಾ ಸಾಂಗ್.. ಈ ಹಾಡಿಗೆ ಫಿಮೇಲ್ ವರ್ಷನ್​​​ ಧ್ವನಿ ಕೊಟ್ಟಿರೋದು ಕಿಚ್ಚನ ಮುದ್ದಿನ ಮಗಳು ಸಾನ್ವಿ. ಇದೀಗ ಈ ಸಾಂಗ್ ಟ್ರೆಂಡಿಂಗ್​​​ನಲ್ಲಿ ನಂಬರ್​ ಒನ್ ಸ್ಥಾನಕ್ಕೆ ಬಂದಿದೆ. ಸುದೀಪ್​​ ಸಿನಿಮಾ ರಂಗದಲ್ಲಿ ಅಭಿನಯ ಚಕ್ರವರ್ತಿ.. ಕಿಚ್ಚನ ಮಗಳು ಸಾನ್ವಿ ಸಂಗೀತ ಲೋಕದ ಗಾಯನ ಚತುರೆ. ಸಿನಿಮಾ ಜಗತ್ತಿನ ಪರಿಯಚ ಸಾನ್ವಿಗೆ ಹುಟ್ಟಿನಿಂದಲೇ ಇದೆ. ಆದ್ರೆ ಸಾನ್ವಿ ಸಂಗೀತ ಲೋಕದಲ್ಲಿ ತನ್ನ ಟ್ಯಾಲೆಂಟ್​ ಬೆಳೆಸಿಕೊಂಡಿದ್ದಾರೆ.

ಸಾನ್ವಿ ಮ್ಯೂಸಿಕ್​ ಲವರ್​. ಮಗಳ ಮನಸ್ಸನ್ನ ಅರ್ಥ ಮಾಡಿಕೊಂಡ ಕಿಚ್ಚ ಅದೇ ಹಾದಿಯಲ್ಲೇ ಮಗಳನ್ನ ಬಿಟ್ಟಿದ್ದಾರೆ. ಇದೇ ಕಾರಣ ಇವತ್ತು ಒಂದೇ ಒಂದು ಹಾಡಿನಿಂದ ಸಾನ್ವಿ ಟಾಪ್​ ಸಿಂಗರ್​ ಅನ್ನೋ ಹೆಗ್ಗಳಿಕೆ ಪಡೆಯುತ್ತಿದ್ದಾರೆ. ಸಾನ್ವಿಗೆ ಸಿಂಗರ್ ಆಗಬೇಕು ಅನ್ನೋ ಆಸೆ ಚಿಕ್ಕ ವಯಸ್ಸಿನಿಂದಲೇ ಇತ್ತು. ಹೀಗಾಗಿ 8ನೇ ತರಗತಿ ಓದುವಾಗ ಶಾಲೆಯಲ್ಲಿ ಹಾಡಿನ ಕಾಂಪಿಟೇಷನ್​​ನಲ್ಲಿ ಭಾಗಿ ಆಗಿದ್ದ ಸಾನ್ವಿ ಅಂದೇ ಅಪ್ಪನಿಗೆ ತನ್ನ ಸಿಂಗಿಂಗ್ ಪ್ರತಿಭೆ ತೋರಿಸಿ ಬೆನ್ನು ತಟ್ಟಿಸಿಕೊಂಡಿದ್ರು. ಅಂದಿನಿಂದ ಸಂಗೀತ ಲೋಕದ ಜ್ನಾನ ಬೆಳೆಸಿಕೊಳ್ಳೋಕೆ ಶುರು ಮಾಡಿದ್ದ ಸಾನ್ವಿ ಇಂದು ಸಿಂಗರ್​ ಅಂತ ಪ್ರ್ಯೂ ಮಾಡಿದ್ದಾರೆ. ಸಾನ್ವಿಯ ಸಿಂಗಿಂಗ್ ಟ್ಯಾಲೆಂಟ್​ ಎಂಥಾದ್ದು ಗೊತ್ತಾ.? ಇಂಗ್ಲೀಷ್​ ಹಾಡುಗಳನ್ನ ಅದ್ಭುತವಾಗಿ ಹಾಡಿ ಸೈ ಎನಿಸಿಕೊಂಡವರು.

ಟ್ರೆಂಡಿಂಗ್​ನಲ್ಲಿ ಮಸ್ತ್​ ಮಲೈಕಾ

ಮ್ಯಾಕ್ಸ್​ ಸಿನಿಮಾದ ದೃಶ್ಯದಲ್ಲಿ ಬರೋ ಬ್ರ್ಯಾಕ್​ಗ್ರೌಂಡ್​​ ಮ್ಯೂಸಿಕ್​ಗೆ ಇಂಗ್ಲೀಷ್​​ನಲ್ಲಿ ತನ್ನ ಧ್ವನಿ ಕೊಟ್ಟಿದ್ರು. ಅಷ್ಟೆ ಅಲ್ಲ ಕಿಚ್ಚನ ಅಕ್ಕನ ಮಗ ಸಂಚಿತ್​ರ ಜಿಮ್ಮಿ ಸಿನಿಮಾದ ಕ್ಯಾರೆಕ್ಟರ್ ಟೀಸರ್​​ಗೆ ಸಾನ್ವಿವೇ ಸಿಂಗರ್. ಕಿಚ್ಚನ ಸೂಪರ್ ಹಿಟ್ ಸಾಂಗ್ ರಾ ರಾ ರಕ್ಕಮ್ಮ ಮೈನಸ್​ ಟ್ರ್ಯಾಕ್ ಸಾಂಗ್ ಹಾಡಿದ್ದು ಸಾನ್ವಿ. ಅಷ್ಟೆ ಅಲ್ಲ ಸರಿಗಮಪ ವೇದಿಕೆ ಮೇಲೆ ಸಾನ್ವಿ ಅಪ್ಪನಿಗೆ ಹಾಡು ಹಾಡಿ ರಂಜಿಸಿದ್ರು. ಮಾರ್ಕ್​​ನ ಮಸ್ತ್​ ಮಲೈಕಾ ಹಾಡು ಕನ್ನಡದಲ್ಲಿ ಸಾನ್ವಿಗೆ ಮೊದಲ ಸಾಂಗ್.. ಇದಕ್ಕೂ ಮೊದಲು ತೆಲುಗುನಲ್ಲಿ ನಾನಿ ನಟಿಸಿರೋ 'ಹಿಟ್ 3' ಸಿನಿಮಾದ ಥೀಮ್ ಸಾಂಗ್ ಹಾಡಿದ್ದಾರೆ. ಹೀಗೆ ಸಂಗೀತದಲ್ಲಿ ನಿಧಾನಕ್ಕೆ ಮೋಲ್ಡ್ ಆಗುತ್ತಾ ಬಂದಿರೋ ಸಾನ್ವಿ ಇಂದು ಮಾರ್ಕ್​​​​ ಮಸ್ತ್​ ಮಲೈಕಾಗೆ ಮಸ್ತ್​​ ಧ್ವನಿ ಕೊಟ್ಟು ಟ್ರೆಂಡಿಂಗ್​ನಲ್ಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡೆವಿಲ್ ಮಾಡಲಿಲ್ಲ ಆ ಸಾಹಸ: ಡಿಜಿಪಿ ಅಲೋಕ್ ಕುಮಾರ್ ಮುಂದೆ ನಡೆಯಲ್ಲ ದರ್ಶನ್ ಆಟ
ನಿನ್ನ ಗಂಡ ಮೊದಲು ರೇ*ಪ್​ ಮಾಡಿದ್ದು ನನ್ನನ್ನು: ನಟ ಚರಣ್ ರಾಜ್​ ಪತ್ನಿಯನ್ನು ತಬ್ಬಿಬ್ಬು ಮಾಡಿದ್ದ ನಟಿ ವಿಜಯಶಾಂತಿ!