ಹೊಸಬರ ಚಿತ್ರಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್ ಈಗ ’ವಿಕ್ಟೋರಿಯಾ ಮಾನ್ಸನ್’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.
ಹೊಸಬರ ಚಿತ್ರಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್ ಈಗ ’ವಿಕ್ಟೋರಿಯಾ ಮಾನ್ಸನ್’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ನಂತರ ಮಾತನಾಡುತ್ತಾ, ಚಿತ್ರರಂಗಕ್ಕೆ ನವ ಪ್ರತಿಭೆಗಳು ಬರಬೇಕು. ಆವಾಗಲೇ ವಿನೂತನ ಕಥೆಗಳು ಬರುತ್ತದೆ. ತುಣುಕುಗಳು ಚೆನ್ನಾಗಿ ಬಂದಿದೆ. ಹೊಸಬರದು ಅನಿಸುವುದಿಲ್ಲ. ನಿಮ್ಮಗಳ ಪ್ರಯತ್ನ ನಿರಂತರವಾಗಿ ಸಾಗಲಿ. ಸಿನಿಮಾ ತೆರೆಕಂಡು ಯಶಸ್ಸು ಗಳಿಸಲಿ ಎಂದರು. ಈ ಸಂದರ್ಭದಲ್ಲಿ ಆರ್.ಚಂದ್ರು ಉಪಸ್ತಿತಿ ಇತ್ತು.
ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಚಿತ್ರಗಳಿಗೆ ಡಿಜಿಟಲ್ ಪ್ರಚಾರ ಮಾಡಿರುವ ಹಾಗೂ ಸ್ಟಾರ್ ನಿರ್ದೇಶಕ ಮತ್ತು ನಿರ್ಮಾಪಕ ಆರ್.ಚಂದ್ರು ಸಿನಿಮಾಗಳಿಗೂ ಕೆಲಸ ಮಾಡುತ್ತಿರುವ ಕಿರಿ ವಯಸ್ಸಿನ ಉಮೇಶ್.ಕೆ.ಎನ್ ಅವರು ಶ್ರೀ ಪದ್ಮಾವತಿ ಪ್ರೊಡಕ್ಷನ್ ಮೂವೀ ಬ್ಯಾನರ್‌ದಲ್ಲಿ ಬಂಡವಾಳ ಹೂಡುತ್ತಿದ್ದಾರೆ. ರಾಜೇಶ್‌ಬಲಿಪ ನಿರ್ದೇಶನ ಜತೆಗೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.
ಹೇಮಂತ್ ಪೂರ್ತಿ ಪಫ್ಸ್ ತಿನ್ನಲು ಬಿಡಲಿಲ್ಲ, ರಕ್ಷಿತ್ ಎಂಟು ತಿಂದ್ರು; ದುಃಖ ತೋಡಿಕೊಂಡ ರುಕ್ಮಿಣಿ ವಸಂತ್!
ಕಥೆಯ ಕುರಿತು ಹೇಳುವುದಾದರೆ 1900ನೇ ಇಸವಿಯಲ್ಲಿ ಹನುಮಗಿರಿ ಎಂಬ ಪುಟ್ಟ ಗ್ರಾಮದಲ್ಲಿ ಭೀಕರ ಘಟನೆಗಳು ನಡೆಯುತ್ತಿರುತ್ತವೆ. ಅಲ್ಲಿ ಪಾಲಿಸುತ್ತಿದ್ದ ವಿಚಿತ್ರ ಆಚರಣೆಗಳು ಎಷ್ಟೋ ಶತಮಾನಗಳಿಂದ ಉಳಿದ ನಿಗೂಢ ರಹಸ್ಯಗಳನ್ನು ಆರ್ಕಾಲಜಿ ಇಲಾಖೆಯು ಹೇಗೆ ಭೇದಿಸುತ್ತದೆ ಎಂಬುದನ್ನು ಥ್ರಿಲ್ಲರ್ ಮೂಲಕ ತೋರಿಸಲಾಗುತ್ತಿದೆ.
ಸಿಕ್ಕಸಿಕ್ಕಲ್ಲಿ ಪ್ರಭಾಸ್ ಕೆನ್ನೆ ಗಿಂಡುವ ಲೇಡಿ ಫ್ಯಾನ್ಸ್; ಅಂಥ ಹುಡುಗಿಯರ ಲವ್-ಕ್ರಶ್ ಬಗ್ಗೆ ಪ್ರಭಾಸ್ ಹೇಳಿದ್ದೇನು?
ರಾಜೇಶ್ ನಾಯಕ, ಕಾಶೀಮ ನಾಯಕಿ. ಇವರೊಂದಿಗೆ ಮಿಮಿಕ್ರಿಗೋಪಿ, ಮಠಕೊಪ್ಪಳ, ಶ್ರೀಧರ್, ಬಲರಾಜವಾಡಿ, ಗುರುದೇವ್‌ನಾಗರಾಜ್, ಉಮೇಶ್, ಮದನ್, ಅಂಜಿ, ಹಿತೇಶ್, ಪಲ್ಟಿಗೋವಿಂದ್, ಶೈಲಜ, ಕೀರ್ತನ ಮುಂತಾದವರು ನಟಿಸುತ್ತಿದ್ದಾರೆ. ಸಂಗೀತ ಕಿರಣ್‌ರವೀಂದ್ರನಾಥ್, ಛಾಯಾಗ್ರಹಣ ವೀರೇಶ್‌ಬುಗುಡೆ, ಸಂಕಲನ ನಾನಿ ಕೃಷ್ಣ, ಸಾಹಸ ಅಶೋಕ್ ಅವರದಾಗಿದೆ. ಬೆಂಗಳೂರು, ಮಂಗಳೂರು, ಮೂಡಬಿದ್ರಿ, ಚಿಕ್ಕಮಗಳೂರು, ಬೇಲೂರು ಸುಂದರ ತಾಣಗಳಲ್ಲಿ ಶೇಕಡ 90ರಷ್ಟು ಚಿತ್ರೀಕರಣ ಮುಗಿಸಿಕೊಂಡು, ಸದ್ಯದಲ್ಲೆ ಕುಂಬಳಕಾಯಿ ಒಡೆಯಲು ತಂಡವು ಯೋಜನೆ ರೂಪಿಸಿಕೊಂಡಿದೆ.
ಮಾಡೋದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ; ಚೈತ್ರಾ ಆಚಾರ್ ಮಾತಿಗೆ ಕಂಗಾಲಾದ್ರು ಆ್ಯಂಕರ್!