ಕ್ಯಾನ್ಸರ್ ಜೊತೆ ಸೆಣೆಸುತ್ತಲೇ ಶೂಟಿಂಗ್! ಸಾವು ಗೆದ್ದ ಶಿವಣ್ಣನ ಹೋರಾಟದ ಜರ್ನಿ ಕಥೆಯೇ ‘ಸರ್ವೈವರ್’!

Published : Jan 27, 2026, 05:49 PM IST
shivarajkumar

ಸಾರಾಂಶ

ನಟ ಶಿವರಾಜ್‌ ಕುಮಾರ್ ಅವರು ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ. ಅವರ ಈ ಸ್ಪೂರ್ತಿದಾಯಕ ಹೋರಾಟದ ಪಯಣವು ಈಗ 'ಸರ್ವೈವರ್' ಎಂಬ ಸಾಕ್ಷಚಿತ್ರವಾಗಿ ತೆರೆಗೆ ಬರಲು ಸಿದ್ಧವಾಗಿದ್ದು, ಇದು ಲಕ್ಷಾಂತರ ಕ್ಯಾನ್ಸರ್ ರೋಗಿಗಳಿಗೆ ಸ್ಫೂರ್ತಿ ತುಂಬುವ ಗುರಿ ಹೊಂದಿದೆ.

ಬೆಂಗಳೂರು: ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್ ಶಿವರಾಜ್‌ ಕುಮಾರ್ ಕಳೆದ ವರ್ಷ ಕ್ಯಾನ್ಸರ್ ಜೊತೆ ಸೆಣೆಸಿ ಗೆದ್ದು ಬಂದಿದ್ರು. ಅಮೇರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಕ್ಯಾನ್ಸರ್ ತಕ್ಕ ಆ್ಯನ್ಸರ್ ಕೊಟ್ಟು ಬಂದ ಶಿವಣ್ಣ, ಮತ್ತೆ ಅದೇ ಎನರ್ಜಿಯೊಂದಿಗೆ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಸದ್ಯ ಶಿವಣ್ಣನ ಈ ಹೋರಾಟದ ಜರ್ನಿ ಸಾಕ್ಷಚಿತ್ರ ರೂಪದಲ್ಲಿ ಬರ್ತಾ ಇದೆ. ಅದೆಷ್ಟೋ ಕ್ಯಾನ್ಸರ್ ಪೀಡಿತರಿಗೆ ಶಿವಣ್ಣನ ಈ ಜರ್ನಿ ಸ್ಪೂರ್ತಿ ತುಂಬೋದಕ್ಕೆ ಬರ್ತಾ ಇದೆ.

ಸಾವು ಗೆದ್ದ ಶಿವ, ಹೋರಾಟದ ಜರ್ನಿ!

ಯೆಸ್, 2024ರ ಕೊನೆ ಕೊನೆಯಲ್ಲಿ ಕನ್ನಡ ಸಿನಿಪ್ರಿಯರಿಗೆ ಒಂದು ಆಘಾತಕಾರಿ ಸುದ್ದಿ ಬಂದೆರಗಿತ್ತು. ಸ್ಯಾಂಡಲ್‌ವುಡ್‌ನ ಸೆಂಚೂರಿ ಸ್ಟಾರ್ , ದೊಡ್ಮನೆ ದೊಡ್ಮಗ ಶಿವರಾಜ್‌ ಕುಮಾರ್ ಕ್ಯಾನ್ಸರ್‌ಗೆ ತುತ್ತಾಗಿದ್ರು. 4 ದಶಕಗಳಿಂದ ಕನ್ನಡಿರನ್ನು ರಂಜಿಸ್ತಾ ಬಂದಿರೋ , ಸದಾ ಲವಲವಿಕೆ ಗಣಿಯಂತೆ ಕಾಣೋ ಶಿವಣ್ಣನಿಗೆ ಇಂಥದ್ದೊಂದು ಗಂಭೀರ ಕಾಯಿಲೆ ಬಂದೆರಗಿದೆ ಅನ್ನೋದು ತಿಳಿದು ಫ್ಯಾನ್ಸ್ ಕಣ್ಣೀರಿಟ್ಟಿದ್ರು.

ಕ್ಯಾನ್ಸರ್ ಜೊತೆ ಸೆಣೆಸುತ್ತಲೇ ಶೂಟಿಂಗ್!

ಹೌದು 45 ಸಿನಿಮಾದ ಶೂಟಿಂಗ್ ವೇಳೆ ಶಿವರಾಜ್‌ ಕುಮಾರ್‌​ಗೆ ಕ್ಯಾನ್ಸರ್ ಇರೋದು ಪತ್ತೆ ಆಗಿತ್ತು. ಆಗಲೂ ಚಿತ್ರವನ್ನ ಮುಗಿಸಿಕೊಡೋದು ತನ್ನ ಕರ್ತವ್ಯ ಅಂತ ಕ್ಯಾನ್ಸರ್ ಜೊತೆ ಫೈಟಿಂಗ್ ಮಾಡ್ತಾನೇ ಆ್ಯಕ್ಟಿಂಗ್ ಮುಂದುವರೆಸಿದ್ರು ಶಿವಣ್ಣ. ಕಳೆದ ಡಿಸೆಂಬರ್‌ನಲ್ಲಿ ಅಮೇರಿದಕ ಮಯಾಮಿ ಆಸ್ಪತ್ರೆಯಲ್ಲಿ ಶಿವರಾಜ್‌ ಕುಮಾರ್‌​ಗೆ ಶಸ್ತ್ರಚಿಕಿತ್ಸೆ ನಡೆದಿತ್ತು. ಈ ಚಿಕಿತ್ಸೆ ಬಳಿಕ ಒಂದಿಷ್ಟು ಕಾಲ ಗುಣಮುಖವಾಗಿ ಶಿವಣ್ಣ ನಾಡಿಗೆ ಮರಳಿದ್ರು. ಕಳೆದ ವರ್ಷ ಇದೇ ಸಮಯಕ್ಕೆ ಕರುನಾಡಿಗೆ ಮರಳಿದ್ದ ಶಿವಣ್ಣ ಮತ್ತೆ ಬಣ್ಣ ಹಚ್ಚಿದ್ರು.

‘ಸರ್ವೈವರ್’ ಸಾಕ್ಷಚಿತ್ರ, ಸ್ಪೂರ್ತಿದಾಯಕ ಕಥೆ!

ಹೌದು ಶಿವಣ್ಣ ಕ್ಯಾನ್ಸರ್ ಜೊತೆ ಸೆಣೆಸಿ ಗೆದ್ದು ಬಂದ ಈ ಕಥೆಯೇ ಈಗ ಸರ್ವೈವರ್ ಅನ್ನೋ ಹೆಸರಲ್ಲಿ ಸಾಕ್ಷಚಿತ್ರವಾಗಿದೆ. ಪ್ರದೀಪ್ ಶಾಸ್ತ್ರಿ ಈ ಸಾಕ್ಷ ಚಿತ್ರ ನಿರ್ದೇಶನ ಮಾಡಿದ್ದು ಗೀತಾ ಪಿಕ್ಚರ್ಸ್ ಇದನ್ನ ನಿರ್ಮಿಸಿದೆ. ಸದ್ಯ ಈ ಸಾಕ್ಷಚಿತ್ರದ ಟೀಸರ್ ಹೊರಬಂದಿದೆ. ಇದು ಬರೀ ಶಿವರಾಜ್‌ ಕುಮಾರ್ ಹೋರಾಟದ ಸಾಕ್ಷಚಿತ್ರ ಅಲ್ಲ. ಲಕ್ಷಾಂತರ ಕ್ಯಾನ್ಸರ್ ರೋಗಿಗಳಲ್ಲಿ ಸ್ಪೂರ್ತಿ ತುಂಬಬಲ್ಲ ಚಿತ್ರ ಆಗಲಿದೆ.

- ಫಿಲ್ಮ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಂತಾರ ಆರಂಭಕ್ಕೆ ಪೂಜಿಸಿದ ದೇವರ ಪೂಜೆಗೆ ಮತ್ತೆ ಬಂದ ರಿಷಬ್ ಶೆಟ್ಟಿ; ಇದು ಹೊಸ ಆರಂಭದ ಮುನ್ಸೂಚನೆಯಾ?
ಕರ್ನಾಟಕ, ಕನ್ನಡ ಬೇಡವೆಂದರೂ, ರಶ್ಮಿಕಾ ಮಂದಣ್ಣ ಮದ್ವೆಗೆ ಇದು ಮಾತ್ರ ಬೆಂಗಳೂರಿನದ್ದೇ ಬೇಕಂತೆ!