ಗನ್ ಮ್ಯಾನ್ ಇಲ್ಲ, ಸೆಕ್ಯೂರಿಟಿ ಇಲ್ಲವೇ ಇಲ್ಲ, ಡಾ ರಾಜ್‌ಕುಮಾರ್ ಸಾಮಾನ್ಯ ಜನರಂತೆ ಹೇಗಿದ್ದರು ನೋಡಿ!

By Shriram Bhat  |  First Published Jul 17, 2024, 6:39 PM IST

ಯಾವ ಸಿನಿಮಾ ಸಕ್ಸಸ್ ಸೆಲೆಬ್ರೇಶನ್‌ ಎಂಬುದು ರಿವೀಲ್ ಆಗದಿದ್ದರೂ ಶಿವರಾಜ್‌ಕುಮಾರ್ ಅಭಿನಯದ ಆನಂದ್, ಮನಮೆಚ್ಚಿದ ಹುಡುಗಿ ಅಥವಾ ರಥಸಪ್ತಮಿ ಅಥವಾ ಓಂ ಚಿತ್ರದ್ದು ಆಗಿರಬಹುದು ಎನ್ನಬಹುದು. ಒಟ್ಟಿನಲ್ಲಿ, ಮಗನ ಸಿನಿಮಾದ ಯಶಸ್ಸನ್ನು ಒಬ್ಬ ತಂದೆಯಾಗಿ ಡಾ ರಾಜ್‌ಕುಮಾರ್..


ಕನ್ನಡ ಚಿತ್ರರಂಗದ ಮೇರು ನಟ, ಕರುನಾಡಿನ ಅಣ್ಣಾವ್ರು ಖ್ಯಾತಿಯ ಡಾ ರಾಜ್‌ಕುಮಾರ್ ಹಳೆಯ ವೀಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲೀಗ ಸಖತ್ ವೈರಲ್ ಆಗುತ್ತಿದೆ. ಡಾ ರಾಜ್‌ಕುಮಾರ್ ಅವರು ತಮ್ಮ ಮಗ ಶಿವರಾಜ್‌ಕುಮಾರ್ ಅವರೊಂದಿಗೆ ಸಿನಿಮಾ ಒಂದರ ಸಕ್ಸಸ್ ಎಂಜಾಯ್ ಮಾಡುತ್ತಿರುವ ವಿಡಿಯೋ ಅದು. ಶಿವಣ್ಣ ಆ ವೀಡಿಯೋದಲ್ಲಿ ತಮ್ಮ ಅಪ್ಪಾಜಿ ಜೊತೆ ತುಂಬಾ ಖುಷಿಯಿಂದ ಕ್ರಿಯಾಶೀಲರಾಗಿದ್ದಾರೆ. ಜೊತೆಗೆ, ನಟ, ಡಾ ರಾಜ್‌ ಫ್ಯಾಮಿಲಿ ಸಂಬಂಧಿ ಕುಮಾರ್ ಬಂಗಾರಪ್ಪ ಕೂಡ ಅದರಲ್ಲಿದ್ದಾರೆ. 
 
ವೈರಲ್ ವಿಡಿಯೋದಲ್ಲಿ ಡಾ ರಾಜ್‌ಕುಮಾರ್ ಹಾಗು ಶಿವರಾಜ್‌ಕುಮಾರ್ ಇಬ್ಬರೂ ಯಂಗ್ ಆಗಿ ಕಾಣಿಸುತ್ತಿದ್ದಾರೆ. ಅಂದರೆ ಈ ವಿಡಿಯೋ ಸಾಕಷ್ಟು ಹಳೆಯದುಎನ್ನಬಹುದು. ಜೊತೆಗೆ, ವಿಡಿಯೋದ ಕಲರಿಂಗ್ ಕೂಡ ಬಹಳಷ್ಟು ಹಳೆಯ ಟೋನ್‌ನಲ್ಲಿದೆ. ಹೀಗಾಗಿ ಯಾವುದೇ ಮುಲಾಜಿಲ್ಲದೇ ಈ ವಿಡಿಯೋ ಆಲ್‌ಮೋಸ್ಟ್ ಮೂವತ್ತು ವರ್ಷ ಹಳೆಯದು ಇರಬಹುದು ಎನ್ನಬಹುದು. ಅಂದು ಡಾ ರಾಜ್‌ಕುಮಾರ್ ಅವರು ತಮ್ಮ ಎಂದಿನ ಶೈಲಿಯಲ್ಲೇ, ಬಿಳಿ ಶರ್ಟ್-ಬಿಳಿ ಲುಂಗಿ ಧರಿಸಿದ್ದರು. ಜೊತೆಯಲ್ಲಿರುವ ಮಗ ಶಿವರಾಜ್‌ಕುಮಾರ್ ಹಾಗೂ ಕುಮಾರ್ ಬಂಗಾರಪ್ಪ ಕೂಡ ಬಿಳಿ ಬಣ್ಣದ ಡ್ರೆಸ್ ಧರಿಸಿದ್ದಾರೆ. 

ಸಿಂಗಾಪುರದಲ್ಲಿ ಭೇಟಿಯಾಗಲಿದ್ದಾರೆ ಶಿವರಾಜ್‌ಕುಮಾರ್ & ಸುಧಾ ಮೂರ್ತಿ; ಯಾಕಿರಬಹುದು ನೋಡಿ!

Tap to resize

Latest Videos

ಅದು ಯಾವ ಸಿನಿಮಾ ಸಕ್ಸಸ್ ಸೆಲೆಬ್ರೇಶನ್‌ ಎಂಬುದು ರಿವೀಲ್ ಆಗದಿದ್ದರೂ ಶಿವರಾಜ್‌ಕುಮಾರ್ ಅಭಿನಯದ ಆನಂದ್, ಮನಮೆಚ್ಚಿದ ಹುಡುಗಿ ಅಥವಾ ರಥಸಪ್ತಮಿ ಅಥವಾ ಓಂ ಚಿತ್ರದ್ದು ಆಗಿರಬಹುದು ಎನ್ನಬಹುದು. ಒಟ್ಟಿನಲ್ಲಿ, ಮಗನ ಸಿನಿಮಾದ ಯಶಸ್ಸನ್ನು ಒಬ್ಬ ತಂದೆಯಾಗಿ ಡಾ ರಾಜ್‌ಕುಮಾರ್ ಅವರು, ಹಾಗೂ ತಮ್ಮ ಸಿನಿಮಾದ ಯಶಸ್ಸನ್ನು ಒಬ್ಬ ಮಗನಾಗಿ ಶಿವರಾಜ್‌ಕುಮಾರ್ ಅವರು ಜೊತೆಯಲ್ಲೇ ಆಚರಿಸಿಕೊಂಡಿದ್ದು ಈಗ ಎಲ್ಲರ ಗಮನ ಸೆಳೆಯುತ್ತಿದೆ. 

ಅದಕ್ಕಿಂತ ಹೆಚ್ಚಾಗಿ, ತುಂಬಾ ಸರಳತೆಯಿಂದ, ಜನಸಾಮಾನ್ಯರ ಮಧ್ಯೆ ಅಂದು ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಹಾಗೂ ಅನಂತ್‌ ನಾಗ್-ಶಂಕರ್‌ ನಾಗ್ ಅವರಂಥ ಕಲಾವಿದರು ಬೆರೆಯುತ್ತಿದ್ದರು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದರು. ಆದರೆ ಇಂದು ಸ್ಟಾರ್ ನಟರು ತಮಗೆ ಸೆಕ್ಯೂರಿಟಿ ಬಳಸಿಕೊಂಡು, ಜೊತೆಗೆ ತಮ್ಮ ಬಳಿ ಗನ್ ಅಥವಾ ಗನ್‌ಮ್ಯಾನ್ ಇಟ್ಟುಕೊಂಡು ಓಡಾಡುವ ಕಾಲ ಬಂದಿದೆ. ಅಂದಿನ ಸರಳತೆ, ಸಜ್ಜನಿಕೆ ಮತ್ತೆ ಮರುಕಳಿಸಬಹುದೇ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ. 

ಕ್ಯಾನ್ಸರ್ ಬಾಧಿಸುತ್ತಿದ್ದರೂ ಅಂದು ಅಪರ್ಣಾ ಹೇಳಿದ್ದ ಮಾತುಗಳು ಕಣ್ಣೀರು ತರಿಸದೇ ಇರದು..!

click me!