
ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿಗೆ ಎಲ್ಲೆಡೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ. #JusticeForMadhu ಎಂಬ ಕೂಗು ಕೇಳಿ ಬರುತ್ತಿದೆ.
ರಾಧಾ-ರಮಣ ಧಾರಾವಾಹಿಯ ಅವನಿ ರಿಯಲ್ ಲೈಫ್ ಪೋಟೋಸ್!
ಈ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಬೇಸರ ವ್ಯಕ್ತಪಡಿಸಿದ್ದಾರೆ. ಭಾವನಾತ್ಮಕ ಪತ್ರ ಬರೆದಿದ್ದಾರೆ.
ವಿಕೃತನೊಬ್ಬನ ಕೆಲಸಕ್ಕೆ ಹೂವೊಂದು ಸುಟ್ಟು ಹೋಗಿದೆ. ಎಲ್ಲ ಕಡೆಗೆ ಮರುಕ ಮಡುಗಟ್ಟಿದೆ ’ಮಧು’ ಎಂಬ ಅಮಾಯಕಿಯ ಕೊಲೆಗೆ. ಇದೇ ರೀತಿ ಕೃತ್ಯ ದೆಹಲಿಯಲ್ಲಿ ನಡೆದಾಗ ಇಡೀ ಭಾರತ ಕೂಗಿತು. ಆದರೆ ನಮ್ಮ ರಾಜಧಾನಿ ಬೆಂಗಳೂರು ಮಾತ್ರ ಮೊನ್ನೆಯಿಂದಲೂ ಪ್ರತಿಕ್ರಿಯೆ ನೀಡಲು ಮಾತನಾಡಲು ಮನಸ್ಸು ಮಾಡುತ್ತಿಲ್ಲ. ಹೋಗಲಿ ಏನೋ ವೋಟು ಹಾಕುವ ಕೆಲಸವಿತ್ತು ಎಂದರೆ ಅದೂ ಇಲ್ಲ ಎಂದು ಭಟ್ಟರು ಹೇಳಿದ್ದಾರೆ.
ಮೋದಿ ಜೀವನಾಧಾರಿತ ವೆಬ್ ಸರಣಿ ನಿಷೇಧಿಸಿದ ಚುನಾವಣಾ ಆಯೋಗ!
ಮಧು ಸಾವು ಹಾಗೂ ಬೆಂಗಳೂರಿನಲ್ಲಿ ವೋಟಿನ ಪ್ರಮಾಣ ಕಡಿಮೆ ಎರಡಕ್ಕೂ ಸೇರಿಸಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ರಾಯಚೂರಿನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಮೃತದೇಹ ನಗರದ ಮಾಣಿಕ್ ಪ್ರಭು ದೇವಸ್ಥಾನದ ಹಿಂದಿನ ಬೆಟ್ಟದಲ್ಲಿ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಲ್ಲದೇ ಶವದ ಬಳಿ ಪತ್ತೆಯಾಗಿದ್ದ ಡೆತ್ ನೋಟಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿರುವುದೂ ಬೆಳಕಿಗೆ ಬಂದಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.