2-3 ದಿನಗಳಿಂದ ಫುಲ್‌ ಸುಸ್ತಾಗಿದ್ದೇನೆ ಎನ್ನುತ್ತಲೇ ಹೆಂಡ್ತಿಯ ಕರಾಮತ್ತು ತಿಳಿಸಿದ ತರುಣ್‌ ಸುಧೀರ್‌!

By Suchethana D  |  First Published Sep 9, 2024, 1:28 PM IST

ಇಂಗ್ಲಿಷ್‌- ಕನ್ನಡದ ನಡುವೆ ಸಿಲುಕಿ ಫುಲ್‌ ಸುಸ್ತಾಗಿದ್ದೇನೆ ಎಂದಿರೋ ನಿರ್ದೇಶಕ ತರುಣ್‌ ಸುಧೀರ್‌ ವೇದಿಕೆ ಮೇಲೆ ಹೇಳಿದ್ದೇನು?
 


ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ ಇದೇ 11ರಂದು ಬೆಂಗಳೂರಿನ ನಡೆದಿದೆ.  ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ  ತಮ್ಮ ನಾಲ್ಕು ವರ್ಷದ  ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ.  ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿತ್ತು. ಸೋನಲ್​ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು  ವಿಶೇಷವೇ. ಈ ವಿವಾಹಕ್ಕೆ ಕನ್ನಡದ ಸ್ಟಾರ್ ಕಲಾವಿದರ ದಂಡು, ರಾಜಕೀಯ ಗಣ್ಯರು ಭಾಗಿಯಾದರು.   ಬಳಿಕ ಜೋಡಿ  ಕ್ರೈಸ್ತ ಸಂಪ್ರದಾಯದಂತೆ ಮಂಗಳೂರಿನಲ್ಲಿ ಮದುವೆ ಮಾಡಿಕೊಂಡರು. 

ಅಂದಹಾಗೆ ಸೋನಲ್‌ ಕ್ರೈಸ್ತ ಸಮುದಾಯದವರು. ಸಾಮಾನ್ಯವಾಗಿ ಇವರ ಮದುವೆಯ ಸಂಪ್ರದಾಯದಲ್ಲಿ ಇಂಗ್ಲಿಷ್‌ನಲ್ಲಿ ಕೆಲವೊಂದು ಮಾತುಗಳನ್ನು ವಧು-ವರರು ಹೇಳಬೇಕು. ಈ ಸಂದರ್ಭದಲ್ಲಿ ತರುಣ್‌ ಸುಧೀರ್‌ ಅವರು ಮಾಡಿದ ಹಾಸ್ಯದ ವಿಡಿಯೋ ಇದೀಗ ಭಾರಿ ವೈರಲ್‌ ಆಗಿದೆ. ಅಷ್ಟಕ್ಕೂ ತರುಣ್‌ ಅವರು ಇಂಗ್ಲಿಷ್‌ನಲ್ಲಿಯೇ ಮಾತನಾಡಬೇಕು ಎನ್ನುವ ಕಾರಣಕ್ಕೆ ಸೋನಲ್‌ ಅವರಿಗೆ ಉದ್ದ ಭಾಷಣ ಬರೆದುಕೊಟ್ಟಿದ್ದರು. ಅದನ್ನು ಪ್ರಸ್ತಾಪಿಸುತ್ತಲೇ ತರುಣ್‌ ಎಲ್ಲರನ್ನೂ ನಕ್ಕು ನಗಿಸಿದ್ದಾರೆ. ಉದ್ದ ಭಾಷಣ ಇರುವ ಪೇಪರ್‌ ತೋರಿಸುತ್ತಲೇ ತರುಣ್‌ ಹಾಸ್ಯ ಮಾಡಿದ್ದಾರೆ.

Tap to resize

Latest Videos

ಎಐ ತಂತ್ರಜ್ಞಾನದಲ್ಲಿ ಕಾಣಿಸಿಕೊಂಡ ನಟ ಸುಧೀರ್‌! ಕಳೆದುಕೊಂಡ ಅಪ್ಪನನ್ನು ನೋಡಿ ತರುಣ್‌ ಕಣ್ಣೀರು

ಅಷ್ಟಕ್ಕೂ ತರುಣ್‌ ಅವರು ಮೈಕ್‌ ಎದುರು ನಿಂತು ಹೇಳಿದ್ದೇನೆಂದರೆ, ನಾನು ಲೈಫ್‌ನಲ್ಲಿ ಇಷ್ಟು ನರ್ವಸ್‌ ಆಗಿದ್ದೇ ಇಲ್ಲ.  2-3 ದಿನಗಳಿಂದ ಫುಲ್‌ ಸುಸ್ತಾಗಿದ್ದೇನೆ. ಇದಕ್ಕೆ ಕಾರಣ, ನನ್ನ ಹೆಂಡ್ತಿ ಇಷ್ಟು ಉದ್ದ ಸ್ಪೀಚ್‌ ಬರೆದುಕೊಟ್ಟಿದ್ದಾಳೆ. ನೀವು ಇಂಗ್ಲಿಷ್‌ನಲ್ಲಿಯೇ ಮಾತನಾಡಬೇಕು ಎಂದು ಹೇಳಿದ್ದಾಳೆ ಎಂದರು. ನಂತರ ಅವರು, ಒಂದು ವೇಳೆ ಭಾಷಣ ಮಾಡುವಷ್ಟು ಇಂಗ್ಲಿಷ್‌ ಚೆನ್ನಾಗಿ ಬರೋದೇ ಆಗಿದ್ರೆ, ಸಿನಿಮಾ ಇಂಡಸ್ಟ್ರಿಯಲ್ಲಿ ಯಾಕೆ ಇರ್ತಿದ್ದೆ, ಅಮೆರಿಕದಲ್ಲೋ ಇನ್ನೆಲ್ಲೋ ಒಳ್ಳೆ ಜಾಬ್‌ ಮಾಡಿಕೊಂಡು ಇರ್ತಿದ್ದೆ ಎಂದು ಹೇಳುವ ಮೂಲಕ ಇಂಗ್ಲಿಷ್‌ಗಿಂತ ಕನ್ನಡವೇ ಮೇಲು ಎಂದು ತೋರಿಸಿಕೊಟ್ಟಿದ್ದಾರೆ. ಇದನ್ನು ಕೇಳುತ್ತಿದ್ದಂತೆಯೇ ಅಲ್ಲಿದ್ದವರು ಬಿದ್ದೂ ಬಿದ್ದೂ ನಕ್ಕಿದ್ದಾರೆ. ಖುದ್ದು ಸೋನಲ್‌ ಅವರೂ ನಕ್ಕು ನಕ್ಕು ಸುಸ್ತಾದರು. 

 ಅಂದಹಾಗೆ ತರುಣ್​ ಮತ್ತು ಸೋನಲ್​  ನಡುವಿನ ವಯಸ್ಸಿನ ಅಂತರ  11 ವರ್ಷ. ತರುಣ್ ಸುಧೀರ್‌ಗೆ 41 ವರ್ಷ ವಯಸ್ಸಾಗಿದೆ. ಇನ್ನು ನಟಿ ಸೋನಲ್ ಮೊಂಥೆರೋಗೆ 29 ವರ್ಷ ವಯಸ್ಸಾಗಿದೆ. ಸೋನಲ್‌  ಎಕ್ಕ ಸಕ್ಕ ಎಂಬ ತುಳು ಸಿನಿಮಾ ಮೂಲಕ ಎಂಟ್ರಿ ಕೊಟ್ಟರು.  ಬಳಿಕ ಯಮುನಕ್ಕ ಸೇರಿದಂತೆ ಕೆಲವು ತುಳು ಚಿತ್ರಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಅಭಿಸಾರಿಕೆ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಎಂಟ್ರಿ ಕೊಟ್ಟರು. 2019ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ತರುಣ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸೋನಲ್ ಪ್ರಮುಖ ಪಾತ್ರದಲ್ಲಿ ನಟಿಸಿದರು. ಆನಂತರ ಶುಗರ್‌ ಫ್ಯಾಕ್ಟರಿ, ಬನಾರಸ್‌, ಗರಡಿ, ಮದುವೆ ದಿಬ್ಬಣ, ಡೆಮೊ ಪೀಸ್‌, ಶಂಭೋ ಶಿವ ಶಂಕರ್‌ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಉಪೇಂದ್ರ ನಟನೆಯ ಬುದ್ಧಿವಂತ 2, ರೋಲೆಕ್ಸ್ ಹಾಗೂ ಮಾರ್ಗರೆಟ್ ಲವ್ ಆಫ್ ರಾಮಾಚಾರಿ ಚಿತ್ರದಲ್ಲಿ ಸೋನಲ್ ಅಭಿನಯಿಸಿದ್ದಾರೆ.  

ಬೆಳಕಿನ ಕವಿತೆ... ಎನ್ನುತ್ತಲೇ ಡಾನ್ಸ್ ವೇದಿಕೆ ಮೇಲೆ ಪ್ರೇಮಕಾವ್ಯ ಬರೆದ ತರುಣ್-ಸೋನಲ್ ನವದಂಪತಿ

 
 
 
 
 
 
 
 
 
 
 
 
 
 
 

A post shared by KUSHKA HAKLA (@kushka.hakla)

click me!