
ಅಬ್ಬಾ, ಯಾವ ಚಿತ್ರಮಂದಿರದ ಮುಂದೆ ನೋಡಿದರೂ 6 ಅಡಿ ಕಟೌಟ್. ಇದು ಸುಲ್ತಾನನ ಸಿನಿಮಾದ್ದೇ. ಈ 'ಯಜಮಾನ'ನಿಗೆ ಎಲ್ಲ ಕನ್ನಡ ಚಿತ್ರ ಪ್ರೇಮಿಗಳೂ ಫುಲ್ ಬೋಲ್ಡ್. ಅಷ್ಟೇ ಅಲ್ಲ ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕ ಸಿಂಪಲ್ ಸುನಿಯೂ ಈ ಚಿತ್ರದ ಬಗ್ಗೆ ಅದ್ಭುತವಾದ ಸಂದೇಶವನ್ನು ನೀಡಿದ್ದಾರೆ. ಏನದು?
'ಬಜಾರ್'ನಲ್ಲಿ ಜನರು ನಾನು ಸುಲ್ತಾನಾ, ನಾನು ಸುಲ್ತಾನಾ... ಅಂತ ಹೇಳ್ಕೊಂಡು ಓಡಾಡ್ತಾ ಇರ್ತಾರೆ. ಆದ್ರೆ ನಿಜವಾದ ಸುಲ್ತಾನ ಎಲ್ಲರನ್ನೂ ಆಟ ಆಡೋಕೆ ಬಿಟ್ಟು ಆಟ ನೋಡ್ತಿರ್ತಾನೆ...' ಎಂಬ ಚಿತ್ರದ ಡೈಲಾಗ್‌ಗಳು ಚಿತ್ರ ಮಂದಿರದಿಂದ ಹೊರ ಬಂದ ಮೇಲೂ ವೀಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿಯುತ್ತೆ.
ಹಾಡು, ಡೈಲಾಗ್ ಕೇಳಿದಾಕ್ಷಣ ಗೊತ್ತಾಗುತ್ತೆ. ಇದು ಪಕ್ಕಾ ದರ್ಶನ್ ಫ್ಯಾನ್ಸ್‌ಗೆಂದೇ ಮಾಡಿರುವ ಚಿತ್ರವೆಂದು. ಬಟ್ ಇನ್ನೂ ವಿಶೇಷವೆಂದರೆ ಸಿನಿಮಾ ಸೆಲೆಬ್ರಿಟಿಗಳು ಮಿಸ್ ಮಾಡಿಕೊಳ್ಳದೇ ಈ ಸಿನಿಮಾವನ್ನು ನೋಡುತ್ತಿದ್ದಾರೆ.
'ರೈತರಿಗೆ ಬೆಳಸೋದು ಗೊತ್ತು ಅಳಸೋದು ಗೊತ್ತಿಲ್ಲ, ಈ ವಿಚಾರವುಳ್ಳ ಕೌಟುಂಬಿಕ ಕಮರ್ಷಿಯಲ್ ಮೂವಿ 'ಯಜಮಾನ'. ದರ್ಶನ್ ಅವರ ಅಪಿಯರೆನ್ಸ್ ಒಂದು ಹಬ್ಬ. ಆದ್ರೆ ರಶ್ಮಿಕಾ ಹಾಗೂ ತಾನ್ಯ ಮತ್ತೆಲ್ಲರ ನಟನೆ ಕಥೆಗೆ ಪೂರಕ. ಕಥೆ ಸಂಭಾಷಣೆ ಸಂಗೀತ ಶಶಿಧರ ಹಡಪ ಅವರ ಕಲೆ ಎಲ್ಲವೂ ಅಮೋಘ.. ಶುಭಾಶಯಗಳು ' ಎಂದು ಶ್ಲಾಘಿಸಿ, ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.