ಸಮಾಜದಲ್ಲಿ ಎಲ್ಲರೂ ಸಮಾನರು, ಜೀವನವೇ 'ಕುಂಟೆಬಿಲ್ಲೆ': ನಿರ್ದೇಶಕ ಸಿದ್ದೇಗೌಡ

Published : Sep 26, 2025, 06:20 PM IST
Director Siddegowda

ಸಾರಾಂಶ

ನಾನು ಸಿನಿಮಾ ರಂಗಕ್ಕೆ ಬಂದು 30 ವರ್ಷಗಳಾಗಿವೆ. ಆರಂಭದಲ್ಲಿ ಕಿರುತೆರೆಯಲ್ಲಿದ್ದೆ. ಆ ಬಳಿಕ ಹಿರಿತೆರೆಗೆ ಬಂದೆ. ಹಳ್ಳಿ ಸೊಗಡಿನ ಒಂದೊಳ್ಳೆ ಕಥೆ ಹೇಳುವ ಉದ್ದೇಶದಿಂದ ಈ ಸಿನಿಮಾ ಮಾಡಿದ್ದೇನೆ ಎಂದರು ನಿರ್ದೇಶಕ ಸಿದ್ದೇಗೌಡ.

ಸಿದ್ದೇಗೌಡ ನಿರ್ದೇಶನದಲ್ಲಿ ಯದು ಬಾಲಾಜಿ, ಮೇಘಾಶ್ರೀ ನಾಯಕ, ನಾಯಕಿಯಾಗಿರುವ ಜಿ ಕುಮಾರ್‌ ಗೌಡ ನಿರ್ಮಾಣದ ಕುಂಟೆಬಿಲ್ಲೆ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಬಗ್ಗೆ ನಿದೇಶಕ ಸಿದ್ದೇಗೌಡ ಮಾತುಗಳು.

- ಚಿಕ್ಕ ವಯಸ್ಸಿನಲ್ಲಿ ನಾವೆಲ್ಲ ಆಟ ಆಡುತ್ತಿರುತ್ತೇವೆ. ಆಟಗಳು ಪಾಠಗಳನ್ನು, ಜೀವನದ ಮೌಲ್ಯವನ್ನು ಕಲಿಸುತ್ತವೆ. ಅನೇಕರ ಬಾಲ್ಯಕಾಲದ ಆಟದಲ್ಲಿ ಕುಂಟೇಬಿಲ್ಲೆಗೊಂದು ವಿಶೇಷ ಸ್ಥಾನ ಇರುತ್ತದೆ. ಅದರಲ್ಲಿ ಕ್ರಶ್‌ಗಳು ಹೆಚ್ಚಾಗಿ ಆಗುತ್ತವೆ. ಅದು ಬದುಕಿನ ಎಲ್ಲ ಹಂತದಲ್ಲೂ ಕಾಡುತ್ತಿರುತ್ತದೆ. ‘ಕುಂಟೆಬಿಲ್ಲೆ’ ಎಂಬ ಶೀರ್ಷಿಕೆಯ ನಮ್ಮ ಸಿನಿಮಾ ಇವೆಲ್ಲಕ್ಕೂ ಕನೆಕ್ಟ್‌ ಆಗಿದ್ದೇ ಭಿನ್ನ ಬಗೆಯ ಕಥೆ ಹೇಳುತ್ತದೆ.

- ದಿನನಿತ್ಯ ಓದುವಂಥಾ ಸುದ್ದಿಗಳೇ ಈ ಸಿನಿಮಾಕ್ಕೆ ಸ್ಫೂರ್ತಿ. ಆರು ತಿಂಗಳು ಈ ಸಿನಿಮಾಕ್ಕೆ ಶ್ರಮಿಸಿದ್ದೇವೆ. ಸಮಾಜದಲ್ಲಿ ಎಲ್ಲ ವರ್ಗದ ಜನರೂ ಸಮಾನರು. ಪ್ರೀತಿ, ಪ್ರೇಮ ಅನ್ನೋದು ಜಾತಿ, ವರ್ಗ, ಆರ್ಥಿಕ ಹಿನ್ನೆಲೆ ನೋಡಿ ಬರೋದಿಲ್ಲ. ಚಿಕ್ಕ ವಯಸ್ಸಿನ ಪ್ರೀತಿ ಜೀವನದುದ್ದಕ್ಕೂ ಕಾಡುತ್ತದೆ ಎಂಬುದರ ಜೊತೆಗೆ ಸಮಾಜಕ್ಕೆ ಅದ್ಭುತ ಸಂದೇಶವನ್ನೂ ನೀಡಿದ್ದೇವೆ.

- ಸಿನಿಮಾದಲ್ಲಿ ಸಾಕಷ್ಟು ರೋಚಕ ತಿರುವುಗಳಿವೆ. ಆಡಂಬರ ಇಲ್ಲದೆ ಸಹಜವಾಗಿ ಮಾಡಿದ ಸಿನಿಮಾ. ಈ ಸಬ್ಜೆಕ್ಟ್‌ ಬಗ್ಗೆ ತುಂಬ ಸಿನಿಮಾ ಬಂದರೂ ಈ ಥರದ ನರೇಶನ್‌ ಬಂದಿಲ್ಲ. ಪ್ರೇಕ್ಷಕ ಒಂದೇ ಒಂದು ಸಲ ಥೇಟರ್‌ ಒಳಗೆ ಬಂದರೆ ಸಾಕು, ನಂತರ ಆತನೇ ಎಲ್ಲರನ್ನೂ ಕರೆದುಕೊಂಡು ಬರುತ್ತಾನೆ, ನನಗೆ ಆ ವಿಶ್ವಾಸ ಇದೆ.

ಹಳ್ಳಿ ಸೊಗಡಿನ ಒಂದೊಳ್ಳೆ ಕಥೆ

- ಹೆಚ್‌ ಡಿ ಕೋಟೆ ತಾಲೂಕಿನ ಜಿ ಬಿ ಸರಗೂರು ನನ್ನ ಹುಟ್ಟೂರು. ನಾನು ಸಿನಿಮಾ ರಂಗಕ್ಕೆ ಬಂದು 30 ವರ್ಷಗಳಾಗಿವೆ. ಆರಂಭದಲ್ಲಿ ಕಿರುತೆರೆಯಲ್ಲಿದ್ದೆ. ಆ ಬಳಿಕ ಹಿರಿತೆರೆಗೆ ಬಂದೆ. ಹಳ್ಳಿ ಸೊಗಡಿನ ಒಂದೊಳ್ಳೆ ಕಥೆ ಹೇಳುವ ಉದ್ದೇಶದಿಂದ ಈ ಸಿನಿಮಾ ಮಾಡಿದ್ದೇನೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?