ಪುತ್ರನ ಎದುರು ಕಣ್ಣೀರಿಟ್ಟ ತಂದೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು!

By Suvarna News  |  First Published Jan 31, 2020, 12:14 PM IST

ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಮ್ಮ ಪುತ್ರ ಆದಿತ್ಯ ಅಭಿನಯದ 'ಮುಂದಿನ ಅಧ್ಯಾಯ' ಚಿತ್ರದ ಟ್ರೈಲರ್‌ ಲಾಂಚ್‌ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟಿದ್ದಾರೆ.
 


'ಡೆಡ್ಲಿ ಸೋಮ' ಖ್ಯಾತಿಯ  ಆದಿತ್ಯ 'ಮುಂದಿನ ಅಧ್ಯಾಯ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಮ್‌ ಬ್ಯಾಕ್‌ ಮಾಡುತ್ತಿದ್ದಾರೆ. ಇತ್ತೀಚಿಗೆ ಟ್ರೈಲರ್‌ ಲಾಂಚ್‌ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕಣ್ಣೀರಿಟ್ಟಿದ್ದಾರೆ .

ಟ್ರೈಲರ್‌ ಲಾಂಚ್‌ ಕಾರ್ಯಕ್ರಮದಲ್ಲಿ  ಆದಿತ್ಯಾ ತಮ್ಮ ಚಿತ್ರಗಳಿಗೆ ಆ್ಯಕ್ಷನ್‌ ಕಟ್‌ ಹೇಳಿರುವ ನಿರ್ದೇಶಕರಿಗೆ ಸನ್ಮಾನ ಸಮಾರಂಭ ಆಯೋಜಿಸಿದ್ದರು. ವಿಷೇಶವೇನೆಂದರೆ ಆದಿತ್ಯಾ ಅಭಿನಯಿಸಿರುವ 'ಲವ್','ಮೋಹಿನಿ' ಹಾಗೂ 'ರೆಬೆಲ್' ಚಿತ್ರಗಳಿಗೆ ತಂದೆ ರಾಜೇಂದ್ರ ಅವರೇ ಆ್ಯಕ್ಷನ್‌ ಕಟ್ ಹೇಳಿದ್ದಾರೆ. ಹೀಗಾಗಿ ತಂದೆಗೆ ಸನ್ಮಾನ ಮಾಡಲು ಆದಿತ್ಯಾ ಮುಂದಾದರು.

Tap to resize

Latest Videos

'ಮುಂದುವರಿದ ಅಧ್ಯಾಯ' ದರ್ಶನ್ ಬಂದಿದ್ದ ಕಾರ್ಯಕ್ರಮದಲ್ಲಿ ಕಿಚ್ಚನಿಗಾಯ್ತಾ ಅವಮಾನ?

ಸನ್ಮಾನದ ನಂತರ 'ನನ್ನ ಮಗನಿಗೆ ನಾನು ಆಶೀರ್ವಾದ ಮಾಡುತ್ತೇನೆ. 75 ವರ್ಷಗಳಿಂದ ನಾನು ಚಿತ್ರರಂಗದಲ್ಲಿ ಇರುವೆ. ಸುಮಾರು 108ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ನನ್ನ ಅಧ್ಯಾಯ ಮುಗಿಯುವುದಿಲ್ಲ.  ಯಾವಾಗಲೂ ನಡೆಯುತ್ತಲೇ ಇರುತ್ತದೆ' ಎಂದು ಮಾತನಾಡುತ್ತ ಕಣ್ಣೀರಿಟ್ಟಿದ್ದಾರೆ.

click me!