ಆಪ್ತ ಗೆಳೆಯ ಸಂಚಾರಿ ವಿಜಯ್ 'ಪುಕ್ಸಟ್ಟೆ ಲೈಫು' ಚಿತ್ರದ ಟಿಕೆಟ್ ಖರೀದಿಸಿದ ನಿರ್ದೇಶಕ ಮಂಸೋರೆ ಭಾವುಕ ಪತ್ರ ಬರೆದಿದ್ದಾರೆ.
ಸಂಚಾರಿ ವಿಜಯ್(Sanchari Vijay) ನಮ್ಮ ಜೊತೆ ಇಲ್ಲವಾದರೂ ಅವರ ಚಿತ್ರದ ಮೂಲಕ ಸಿನಿ ಪ್ರೇಮಿಗಳ ಮನಸ್ಸಿನಲ್ಲಿ ಮನೆ ಮಾಡಿಕೊಂಡಿದ್ದಾರೆ. ವಿಜಯ್ ಕೊನೆ ಬಾರಿ ಅಭಿನಯಿಸಿದ ಸಿನಿಮಾ 'ಪುಕ್ಸಟ್ಟೆ ಲೈಫು'(Puksatte Lifu) ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಆಪ್ತ ಗೆಳೆಯನ ಕೊನೆ ಸಿನಿಮಾ ವೀಕ್ಷಿಸಲು ನಿರ್ದೇಶಕ ಮಂಸೋರೆ(Mansore) ಟಿಕೆಟ್ ಖರೀದಿಸಿದ್ದಾರೆ. ಟಿಕೆಟ್ ಫೋಟೋದೊಂದಿಗೆ ಭಾವುಕ ಪತ್ರ ಬರೆದಿದ್ದಾರೆ.
'ಸಂಚಾರಿ ವಿಜಯ್ ಸರ್ ನಿಮಗೊಂದು ಪತ್ರ.
ವಿಜಯ್ ಸರ್ ನಿಮ್ಮ ಸಿನೆಮಾ ಪುಕ್ಸಟ್ಟೆ ಲೈಫ್ ರಿಲೀಸ್ ಆಗ್ತಿದೆ. ಇನ್ನೊಂದು ಖುಷಿ ಏನ್ ಗೊತ್ತಾ, ಪೈಯ್ಡ್ ಪ್ರೀಮಿಯರ್ ಶೋ ಹೌಸ್ ಫುಲ್ ಆಗಿ, ಇನ್ನೊಂದು ಶೋ ಮಾಡ್ತಿದ್ದಾರೆ. Actually ನಾನು ಮಿಸ್ ಮಾಡ್ಕೊಳ್ತಿರೋದು, ನಿಮ್ ಬ್ರಾಡ್‌ಕಾಸ್ಟ್ ಮೆಸೇಜಸ್. ನೀವಿದ್ದಿದ್ರೆ ಇಷ್ಟೊತ್ತಿಗೆ ರೇಜಿಗೆ ಹುಟ್ಸೋಷ್ಟು ಸಿನೆಮಾ ರಿಲೀಸ್ ಬಗ್ಗೆ ಮೆಸೇಜಸ್ಸು, ನ್ಯೂಸು ಅದೂ ಇದೂ ಕಳಿಸ್ತಿದ್ರಿ. ಅದರ ಬಗ್ಗೆ ಒಂದ್ಸಲ ರೇಗಿದ್ದಕ್ಕೆ ನೀವು ಹೇಳಿದ್ರಿ, ಸಾರ್ ನಿಮ್ಗೆ ಗೊತ್ತಿಲ್ಲಾ ಸುಮ್ನಿರಿ, ಅಷ್ಟು ಮೆಸೇಜ್ ಕಳ್ಸಿದ್ರು ಜನ ಬಂದು ಸಿನೆಮಾ ನೋಡೋದು ಕಡಿಮೇನೆ. ಅದಕ್ಕೆ ಅವರಿಗೆ ಪದೇ ಪದೇ ನೆನಪು ಮಾಡ್ತಾನೆ ಇರ್ಬೇಕು ಅಂತ.
ನಿಮಗೆ ಪ್ರತಿ ಸಿನೆಮಾ ಬಿಡುಗಡೆನೂ ಒಂದು ಸಂಭ್ರಮ, ಆತಂಕ ಅನ್ನೋದು ನನಗಿಂತ ಚೆನ್ನಾಗಿ ಯಾರಿಗೆ ಗೊತ್ತು ಅಲ್ವಾ? ಯಾಕೇಳಿ, ನೀವು ಪೂರ್ಣ ಪ್ರಮಾಣದ ಮುಖ್ಯ ಪಾತ್ರ ವಹಿಸಿ ನಟಿಸಿದ 'ಹರಿವು' ಕೊನೆಗೂ ಥಿಯೇಟರ್ ಅಲ್ಲಿ 'ಅಧಿಕೃತವಾಗಿ' ಬಿಡುಗಡೆ ಆಗ್ಲೇ ಇಲ್ಲಾ. ಆದ್ರೂ ಆ ಸಿನೆಮಾ ಎಲ್ಲೇ ಶೋ ಆಗಲಿ, ಬಿಡುವಿದ್ರೆ ನನ್ ಜೊತೆ ಬಂದ್ಬಿಡ್ತಿದ್ರಿ, ಶೋ ಮುಗಿಯೋವರೆಗೂ ಅಲ್ಲೇ ಅಕ್ಕ ಪಕ್ಕ ಓಡಾಡ್ಕೊಂಡಿದ್ದು, ಕ್ಲೈಮ್ಯಾಕ್ಸ್ ಅಲ್ಲಿ ಹಾಡು ಬರೋ ಹೊತ್ತಿಗೆ ಎಕ್ಸಿಟ್ ಬಾಗಿಲು ಹತ್ರ ಹೋಗಿ ಇಬ್ರೂ ನಿಂತ್ಕೊಂಡು ಜನಗಳ expressionನ್ನೇ ನೊಡ್ತಾ ನಿಲ್ತಿದ್ವಿ. ಆ ಅಭ್ಯಾಸ ಮೊನ್ನೆ ಆಕ್ಟ್ ಸಿನೆಮಾವರೆಗೂ ನಿಮಗೆ ಬಿಟ್ಟಿರ್ಲಿಲ್ಲಾ ಅನ್ನೋದೆ ನನಗೆ ಆಶ್ಚರ್ಯ. ಆದ್ರೆ ಫೆಬ್ರವರಿಯಲ್ಲಿ ಪಾಂಡವಪುರದಲ್ಲಿ ಹರಿವು ಪ್ರದರ್ಶನಕ್ಕೆ ಬಂದವರು ಕುತ್ಕೊಂಡು ಪೂರ್ತಿ ಸಿನೆಮಾ ನೋಡಿದ್ರಿ. ಯಾಕೋ ಹೊರಗೆ ಬರ್ಲೇ ಇಲ್ಲಾ ನೀವು. ಹ್ಮ್ ಇರ್ಲಿ ಹೇಳ್ತಾ ಹೋದ್ರೆ ತುಂಬಾನೇ ಇದೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ರಾಷ್ಟ್ರ ಪ್ರಶಸ್ತಿ ಪುರಸ್ಕೃತ' ನಿರ್ದೇಶಕ ಮಂಸೋರೆ!ಸದ್ಯಕ್ಕೆ ಇಷ್ಟು ಸಾಕು. ಉಳಿದದ್ದು ಈಗ ಬೇಡ. ನಾಳೆ ಬೆಳಗ್ಗೆ ನಿಮಗೆ ತುಂಬಾ ಇಷ್ಟವಾದ ಸಿನೆಮಾ ಬಿಡುಗಡೆ ಆಗ್ತಿದೆ. ಈ ಸಿನೆಮಾ ಶೂಟಿಂಗ್ ಟೈಮಲ್ಲಿ ತುಂಬಾನೇ ಹೇಳಿದ್ರಿ, Advaitha Gurumurthy ಕ್ಯಾಮರಾ ವರ್ಕು, Aravind Kuplikar ಡೈರೆಕ್ಷನ್ನು, Nagaraja Somayaji ಡೆಡಿಕೇಷನ್ನು ಎಲ್ಲಾ ತುಂಬಾನೆ ಹೊಗಳ್ತಿದ್ರಿ. ಈಗ ಅದೆಲ್ಲಾ ನೋಡೋ ಟೈಂ ಬಂದಿದೆ. ನಾನು ಪ್ರೀಮಿಯರ್ ಶೋ ನೋಡ್ತಿಲ್ಲಾ. ಅಲ್ಲಿಗೆ ಎಲ್ಲಾ ಪರಿಚಯದವರೇ ಬಂದಿರ್ತಾರೆ. ಎಲ್ಲಾ ನಿಮ್ ಬಗ್ಗೆನೇ ಮಾತಿರುತ್ತೆ. ನಾನು ಎಮೋಷನಲಿ ಅಷ್ಟು ಸ್ಟ್ರಾಂಗ್ ಇಲ್ಲಾ, ನಿಮ್ಗೆ ಗೊತ್ತಲ್ಲಾ. ಬಟ್ ನಾಳೆ ಶುಕ್ರವಾರ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. ಅದು ನಾನೂ Akhila Gch ಮತ್ತೆ ನೀವು.
ಓಕೆ ನಾ. ಸಿಟ್ಟೆಲ್ಲಾ ಮಾಡ್ಕೋಬೇಡಿ.
ಬೆಳಿಗ್ಗೆ ಸಿಗೋಣ.
ಆಲ್ ದ ಬೆಸ್ಟ್, ಪುಕ್ಸಟ್ಟೆ ಲೈಫು ಟೀಂಗೆ