'ಅಪ್ಪು' ಸಿನಿಮಾಕ್ಕೆ ನಾಯಕಿಯಾಗಿ ರಮ್ಯಾ ರಿಜೆಕ್ಟ್​ ಆಗಿದ್ದೇಕೆ? ಕುತೂಹಲದ ಕಾರಣ ಹೇಳಿದ ನಿರ್ದೇಶಕ

Published : Apr 09, 2025, 06:00 PM ISTUpdated : Apr 10, 2025, 10:09 AM IST
 'ಅಪ್ಪು' ಸಿನಿಮಾಕ್ಕೆ ನಾಯಕಿಯಾಗಿ ರಮ್ಯಾ ರಿಜೆಕ್ಟ್​ ಆಗಿದ್ದೇಕೆ? ಕುತೂಹಲದ ಕಾರಣ ಹೇಳಿದ ನಿರ್ದೇಶಕ

ಸಾರಾಂಶ

ಪುನೀತ್ ರಾಜ್‌ಕುಮಾರ್ ಅವರ ಮೊದಲ ಚಿತ್ರ 'ಅಪ್ಪು'ಗೆ ರಕ್ಷಿತಾ ನಾಯಕಿಯಾಗಿದ್ದರು. ಆದರೆ, ರಮ್ಯಾ ಕೂಡ ಆಡಿಷನ್ ನೀಡಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ಅವರು ರಕ್ಷಿತಾ ಅವರನ್ನು ಆಯ್ಕೆ ಮಾಡಲು ಕಾರಣ, ಆಕೆ ಪುನೀತ್ ಜೊತೆ ನೃತ್ಯ ತರಗತಿಗೆ ಹೋಗಿದ್ದು, ಮೊದಲೇ ಪರಿಚಯವಿದ್ದದ್ದು. ರಕ್ಷಿತಾ ಅವರ ತಂದೆ ಗೌರಿಶಂಕರ್ ವಜ್ರೇಶ್ವರಿ ಸಂಸ್ಥೆಯ ಛಾಯಾಗ್ರಾಹಕರಾಗಿದ್ದರಿಂದ, ರಕ್ಷಿತಾ ಚಿಕ್ಕಂದಿನಿಂದಲೂ ಪಾರ್ವತಮ್ಮನವರಿಗೆ ಪರಿಚಿತರಾಗಿದ್ದರು. ರಕ್ಷಿತಾ ಪ್ರತಿಭಾನ್ವಿತೆಯಾಗಿದ್ದು, ಪಾತ್ರಕ್ಕೆ ಸೂಕ್ತವೆಂದು ಪಾರ್ವತಮ್ಮ ನಿರ್ಧರಿಸಿದರು.

ಪುನೀತ್​ ರಾಜ್​​ಕುಮಾರ್​ ಅವರು ನಾಯಕನಾಗಿ ಮೊದಲ ಬಾರಿ ಎಂಟ್ರಿ ಕೊಟ್ಟಿದ್ದ ಅಪ್ಪು ಚಿತ್ರ ಈಚೆಗೆ ರೀ-ರಿಲೀಸ್​ ಆಗಿದ್ದು ಗೊತ್ತೇ ಇದೆ. ಇದರಲ್ಲಿ ರಕ್ಷಿತಾ ನಾಯಕಿ. ಪುನೀತ್​ ಅವರ ಮೊದಲ ಚಿತ್ರವೇ ಬ್ಲಾಕ್​ ಬಸ್ಟರ್​ ಆಗಿತ್ತು. ರಕ್ಷಿತಾ ಅವರಿಗೂ ಈ ಚಿತ್ರ ಬ್ರೇಕ್​ ಕೊಟ್ಟಿತು. ಅಪ್ಪು ಸಿನಿಮಾ ಮಾಡುತ್ತಿದ್ದ ಸಂದರ್ಭದಲ್ಲಿಯೇ ಅವರು ಮೂರು ಇತರ ಚಿತ್ರಗಳ ಶೂಟಿಂಗ್​ನಲ್ಲಿಯೂ ಬಿಜಿಯಾಗಿದ್ದರು. ಎಲ್ಲವೂ ಅವರಿಗೆ ಹೆಸರು ತಂದುಕೊಟ್ಟಿತ್ತು. ಕೊನೆಗೆ ತೆಲಗು ಚಿತ್ರಗಳಲ್ಲಿಯೂ ಸಕತ್​ ಆಫರ್​ ಬಂದಿತ್ತು. ಆದರೆ ಕುತೂಹಲದ ಸಂಗತಿಯೊಂದನ್ನು ಇದೀಗ ನಿರ್ದೇಶಕ ಮಹೇಶ್​ ಬಾಬು ಹೇಳಿದ್ದಾರೆ. ಈ ಚಿತ್ರಕ್ಕೆ ನಟಿ ರಮ್ಯಾ ಕೂಡ ನಾಯಕಿಯಾಗಿ  ಆಡಿಷನ್​ ಕೊಟ್ಟಿದ್ದರು. ಅಪ್ಪು ಸಿನಿಮಾದಲ್ಲಿ ನಾಯಕಿಯಾಗಿ ಮಿಂಚುವ ಆಸೆ ರಮ್ಯಾ ಅವರಿಗೂ ಇತ್ತು. ಆದರೆ ಕೊನೆಗೆ ರಕ್ಷಿತಾ ಅವರು ನಾಯಕಿಯಾಗಿ ಆಯ್ಕೆಯಾಗಿದ್ದರು. 

ಕನ್ನಡ ಪಿಚ್ಚರ್​ ಯೂಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಮಹೇಶ್​ ಬಾಬು ಅವರು, ರಮ್ಯಾ ರಿಜೆಕ್ಟ್​ ಆಗಿ, ರಕ್ಷಿತಾ ಅವರು ಸೆಲೆಕ್ಟ್​ ಆಗಿರುವ ಕಾರಣವನ್ನು ಹೇಳಿದ್ದಾರೆ. ಪಾರ್ವತಮ್ಮ ರಾಜ್​ಕುಮಾರ್​ ಅವರು ಮೊದಲೇ ಇದನ್ನು ಡಿಸೈಡ್​ ಮಾಡಿದ್ದರು. ಪುನೀತ್​ ಮತ್ತು ರಕ್ಷಿತಾ ಇಬ್ಬರೂ ಒಟ್ಟಾಗಿ ನೃತ್ಯ ತರಗತಿಗೆ ಹೋಗಿದ್ದರಿಂದ ಮೊದಲೇ ಪರಿಚಯವಿತ್ತು. ಆದ್ದರಿಂದ ಆಕೆಯೇ ನಾಯಕಿ ಎಂದು ಹೇಳಿದ್ದರು ಪಾರ್ವತಮ್ಮ. ಅಷ್ಟಕ್ಕೂ ಪಾರ್ವತಮ್ಮ ಅವರಿಗೆ ಯಾರನ್ನೇ ನೋಡಿದ ತಕ್ಷಣ ಅವರೇ ನಾಯಕಿ ಎಂದು ತಿಳಿದುಬಿಡುತ್ತದೆ. ಕುತೂಹಲದ ವಿಷಯ ಏನೆಂದರೆ, ಅವರ ಸೆಲೆಕ್ಷನ್​ ಯಾವತ್ತಿಗೂ ತಪ್ಪೇ ಆಗಿರಲ್ಲ. ಇದೇ ಕಾರಣಕ್ಕೆ ಡಾ.ರಾಜ್​ ಕೂಡ ಪಾರ್ವತಮ್ಮನವರ ಈ ಮಾತನ್ನು ಒಪ್ಪಿಕೊಳ್ಳುತ್ತಿದ್ದರು. ಹಾಗೆಯೇ ರಮ್ಯಾ ರಿಜೆಕ್ಟ್​ ಆಗಿ ರಕ್ಷಿತಾ ಸೆಲೆಕ್ಟ್​ ಆದರು ಎಂದಿದ್ದಾರೆ.

ಅಪ್ಪು ಕೊನೆಯ ಬಾರಿ ನೇರಪ್ರಸಾರದಲ್ಲಿ ಮಾತನಾಡಿದ ವಿಡಿಯೋ ಪುನಃ ವೈರಲ್​: ಅಭಿಮಾನಿಗಳ ಕಣ್ಣೀರು

ಆದರೆ, ರಕ್ಷಿತಾ ಅವರ ಜೊತೆ ಮಾತನಾಡಿದಾಗಲೇ ಅವರು ಅದೆಂಥ ಪ್ರತಿಭಾನ್ವಿತೆ ಎನ್ನುವುದು ನನಗೆ ತಿಳಿದು ಹೋಯ್ತು. ಒಬ್ಬರನ್ನು ನೋಡಿದಾಗ, ಡೈಲಾಗ್​ ಕೊಟ್ಟು ನೋಡುವುದು,  ಆಡಿಷನ್​ ಮಾಡಿಸುವುದು ಬೇಕಿರಲ್ಲ. ಅವರ ಜೊತೆ ಸ್ವಲ್ಪ ಹೊತ್ತು ಮಾತನಾಡಿದ್ರೆ ಸಾಕು, ಅವರ ಬಗ್ಗೆ ತಿಳಿದುಕೊಳ್ಳಬಹುದು. ಹಾಗೆಯೇ ರಕ್ಷಿತಾ ಕೂಡ ಒಳ್ಳೆಯ ನಟಿ ಎನ್ನುವುದು ತಿಳಿದುಬಿಟ್ಟಿತು ಎಂದಿದ್ದಾರೆ  ಮಹೇಶ್​ ಬಾಬು.  ರಕ್ಷಿತಾ ಕೊಡುತ್ತಿದ್ದ ಎಕ್ಸ್‌ಪ್ರೆಷನ್, ಡೈಲಾಗ್ ಡೆಲಿವರಿ ಇವತ್ತಿನ ಪಡ್ಡೆ ಹುಡುಗರಿಗೆ ಇಷ್ಟವಾಗುತ್ತದೆ ಎನಿಸಿಬಿಟ್ಟಿತು. ಪಾರ್ವತಮ್ಮನವರ ಸೆಲೆಕ್ಷನ್​ ಸರಿಯಾಗಿತ್ತು. ರಕ್ಷಿತಾ ನಾಯಕಿಯಾಗಿ ಸಿನಿಮಾ ಬ್ಲಾಕ್​ಬಸ್ಟರ್​ ಆಯಿತು ಎಂದಿದ್ದಾರೆ. ರಕ್ಷಿತಾ ಅವರೇ ಡಬ್ಬಿಂಗ್​ ಕೂಡ ಕ್ವಿಕ್​  ಆಗಿ ಮಾಡಿಮುಗಿಸಿ ಅಚ್ಚರಿ ಮೂಡಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ. 
 
ಅದರ ಜೊತೆ ರಕ್ಷಿತಾ ಅವರ ಮೇಲೆ ಪಾರ್ವತಮ್ಮನವರಿಗೆ ಇದ್ದ ಇನ್ನೊಂದು ಪ್ರೀತಿಯ ಬಗ್ಗೆಯೂ ಮಹೇಶ್​ ಬಾಬು ರಿವೀಲ್​ ಮಾಡಿದ್ದಾರೆ. ರಕ್ಷಿತಾ ಅವರು, ಖ್ಯಾತ ಛಾಯಾಗ್ರಾಹಕ ಬಿ. ಸಿ ಗೌರಿಶಂಕರ್ ಮಗಳು. ಅವರ ಅಮ್ಮ ಮಮತಾ ರಾವ್ ಕೂಡ 'ಹೊಸ ಬೆಳಕು' ಚಿತ್ರದಲ್ಲಿ ಡಾ.ರಾಜ್​ ಜೊತೆ ನಟಿಸಿದ್ದರು. ವಜೇಶ್ವರಿ ಸಂಸ್ಥೆಯ ಕಾಯಂ ಛಾಯಾಗ್ರಾಹಕರಾಗಿದ್ದರು ಗೌರಿಶಂಕರ್. ಇವರು ಹಲವಾರು ಸೂಪರ್​ ಹಿಟ್​ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿದ್ದಾರೆ. 'ಆನಂದ್', 'ಓಂ', 'ಜನುಮದ ಜೋಡಿ', 'ಹೃದಯ ಹೃದಯ' ಹೀಗೆ ಆ ಸಂಸ್ಥೆಯ ಹಲವು ಹಿಟ್ ಸಿನಿಮಾಗಳಿನ್ನು ಅವರು ಸೆರೆ ಹಿಡಿದಿದ್ದರು. ಹಾಗಾಗಿ ರಕ್ಷಿತಾ ಅವರನ್ನು ಪಾರ್ವತಮ್ಮ ಚಿಕ್ಕಂದಿನಿಂದಲೇ ನೋಡಿದ್ದರು. ಆದ್ದರಿಂದ ಆಕೆಯೇ ಅಪ್ಪುಗೆ ಸಿನಿಮಾದಲ್ಲಿ ಸರಿಯಾದ ಜೋಡಿ ಎನ್ನುವುದು ತಿಳಿದಿತ್ತು. ಅದು ನಿಜ ಕೂಡ ಆಯ್ತು. ಆದ್ದರಿಂದ ರಮ್ಯಾ ಅವರನ್ನು ಕೈಬಿಡಲಾಯಿತು ಎಂದಿದ್ದಾರೆ. 

ಕನ್ನಡದಲ್ಲಿಯೇ ಅಪ್ಪು ಇಂಟರ್​ವ್ಯೂ ಮಾಡಿದ್ದ ರಶ್ಮಿಕಾ: ಅಪರೂಪದ ಕುತೂಹಲದ ವಿಡಿಯೋ ವೈರಲ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ