
ಅಮೆರಿಕಾದಿಂದ ಬಂದ ಶಿವಣ್ಣ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಮಾತನ್ನಾಡಿದ್ದಾರೆ. ಈ ಬಗ್ಗೆ ನಟ ಹಾಗೂ ಶಿವರಾಜ್‌ಕುಮಾರ್ (Shiva Rajkumar) ಸಹೋದರ ರಾಘವೇಂದ್ರ ರಾಜ್ ಕುಮಾರ್ 'ಕೊನೆಗೂ ಈ ದಿನ ಬಂತು. ನನಗೆ ಅಪ್ಪಾಜಿ ಕಾಡಿನಿಂದ ವಾಪಸ್ ಬಂದಾಗಾಯ್ತು..ಶಿವಣ್ಣನನ್ನ ನೋಡಿ ನಾನು ಅಪ್ಪಾಜಿ ನೋಡಿದಂತೆ ಆಯ್ತು...ನನ್ನ ಅಯಸ್ಸು ಕೂಡ ಶಿವಣ್ಣನಿಗೆ ಇರಲಿ..' ಎಂದಿದ್ದಾರೆ.
ಶಿವಣ್ಣ ಆರೋಗ್ಯವಾಗಿದ್ದಾರೆ ಅಂತ ವಿಷ್ಯ ಗೊತ್ತಾದಾಗ ನನಗೆ ತುಂಬಾ ಖುಷಿ ಆಯ್ತು...ಟ್ರೀಟ್ ಮೆಂಟ್ ಸಮಯದಲ್ಲೂ ನಾನು ಸಾಕಷ್ಟು ಬಾರಿ ಮಾತಾಡಿದ್ದು. ಕ್ಯಾನ್ಸರ್ ಇಲ್ಲ ಅಂತ ಗೊತ್ತಾದಾಗ ನನಗೆ ತುಂಬ ಖುಷಿ ಆಯ್ತು..ಈ ತರ ನಿಮ್ಮ ಲೈಫ್ ನಲ್ಲೂ ಅದ್ರೂ ಶಿವುನೇ ಸ್ಫೂರ್ತಿ.. ಅವನಲ್ಲೂ ಕೂಡ ಭಯ ಇತ್ತು..ಆದರೆ ಅದನ್ನು ಅವನು ತೋರಿಸಿಕೊಳ್ಳಲಿಲ್ಲ..
ಅಮೆರಿಕಾದಲ್ಲಿ ಇಡೀ ದಿನ ಆಪರೇಷನ್ ಒಂದು ಸರ್ಕಸ್ ತರ ಆಯ್ತು: ಶಿವರಾಜ್‌ಕುಮಾರ್
ಶಿವಣ್ಣನಿಗೆ ನಾವಷ್ಟೇ ಅಲ್ಲ.. ಇಡೀ ಅಭಿಮಾನಿಗಳೇ ಶ್ರೀ ರಕ್ಷೆ...ಹಳೇ ಶಿವರಾಜ್ ಕುಮಾರ್ ಇನ್ಮುಂದೆ ಇರಲ್ಲ.. ಇನ್ನೆರೆಡು ತಿಂಗಳಲ್ಲಿ ನೋಡಿ.. ಎಲ್ಲಾ ಕಡೆ ಕಾಣಿಸಿಕೊಳ್ತಾನೆ...ಅಪ್ಪಾಜಿ ಹುಟ್ಟಿದ ದಿನ 24 ನೆ ತಾರೀಖು.. ಶಿವಣ್ಣ ಆಪರೇಷನ್ ಆಗಿ ಕ್ಯಾನ್ಸರ್ ಗೆದ್ದಿದ್ದು 24ನೇ ತಾರೀಖಿನಂದೇ'' ಹೀಗಾಗಿ ನಮ್ಮ ಕುಟುಂಬಕ್ಕೆ 24ನೇ ದಿನಾಂಕ ತುಂಬಾ ವಿಶೇಷ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ ನಟ ರಾಘವೇಂದ್ರ ರಾಜ್‌ಕುಮಾರ್ ಎನ್ನಬಹುದು.
ಅಂದಹಾಗೆ, ನಟ ಶಿವರಾಜ್‌ಕುಮಾರ್ ಅವರು ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ಬಳಿಕ ಇಂದು, ಅಂದರೆ 26 ಜನವರಿ 2025ರಂದು ನಟ ಶಿವರಾಜ್‌ಕುಮಾರ್ ಬೆಂಗಳೂರಿಗೆ ಮರಳಿದ್ದಾರೆ. ಬೆಂಗಳೂರಿನಲ್ಲಿ ಹೇಳಿಕೆ ನೀಡಿರುವ ನಟ ಶಿವಣ್ಣ 'ಹೋಗಬೇಕಾದ್ರೆ ಎಮೋಷನಲ್ ಆಗಿದ್ದೆ. ಏನೇ ಆದ್ರೂ ಜೀವನದಲ್ಲಿ ಫೇಸ್ ಮಾಡಬೇಕು. ಮಾಡೋಣ ನೋಡೋಣ ಅಂತ ಆಗಲ್ಲ, ಮನೆಯಲ್ಲಿ ಎಲ್ಲರ ಸಪೋರ್ಟ್ ಇತ್ತು, ಮುಂಚೆ ನಂಗೆ ಭಯವಿತ್ತು, ನಾನು Blessed ಅನಿಸ್ತಿದೆ..' ಎಂದಿದ್ದಾರೆ.
'ಅದು ಕೊಡ್ತೀಯಾ' ಎಂದು ಕೇಳುವವರ ಮಧ್ಯೆ ಹುಚ್ಚ ವೆಂಕಟ್ ಒಳ್ಳೆಯ ವ್ಯಕ್ತಿ: ಸೌಮ್ಯಾ ರಾವ್!
ಜೊತೆಗೆ, 'ಫ್ಲೈಟ್ ಟ್ರಾವೆಲ್ ನಲ್ಲೆ ಭಯ ಇತ್ತು. ಅಲ್ಲಿ ಹೋದ ಮೇಲೆ ಕಾನ್ಫಿಡೆನ್ಸ್ ಬಂತು. 6 ಗಂಟೆ ಮನೆಯವರಿಗೂ ಟೆನ್ಶನ್ ಇತ್ತು. ಆಪರೇಷನ್ ಬಳಿಕ ಟೈಮ್ ತೆಗೊಂಡು ವಾಕಿಂಗ್ ಶುರು ಮಾಡಿದೆ. ಹೆಣ್ಣುಮಕ್ಕಳಿಗೆ ತುಂಬಾ ಕಷ್ಟ ಈ ಸಮಯದಲ್ಲಿ ಎಲ್ಲರ ಸಪೋರ್ಟ್ ಇದೆ. 1 ತಿಂಗಳು ಪ್ರತಿಯೊಬ್ಬರೂ ನನ್ ಜೊತೆ ಇದ್ರು. ಈಗ ತುಂಬಾ ಸ್ಟ್ರಾಂಗ್ ಆಗಿದೀನಿ.' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.