ಸ್ವಾತಂತ್ರ್ಯ ಹೋರಾಟದ ದಂಡಿ ಚಿತ್ರದಲ್ಲಿ ತಾರಾ

Published : Mar 27, 2021, 02:00 PM ISTUpdated : Mar 27, 2021, 02:12 PM IST
ಸ್ವಾತಂತ್ರ್ಯ ಹೋರಾಟದ ದಂಡಿ ಚಿತ್ರದಲ್ಲಿ ತಾರಾ

ಸಾರಾಂಶ

ವಿಶಾಲ್‌ರಾಜ್ ನಿರ್ದೇಶನದ ಕಾದಂಬರಿ ಆಧಾರಿತ ಸಿನಿಮಾ | ಸ್ವಾತಂತ್ರ್ಯ ಹೋರಾಟದ ದಂಡಿ ಚಿತ್ರದಲ್ಲಿ ತಾರಾ

ಸ್ವಾತಂತ್ರ್ಯ ಹೋರಾಟದ ಕತೆಯನ್ನು ಹೇಳುವ ಮತ್ತೊಂದು ಸಿನಿಮಾ ಇತ್ತೀಚೆಗಷ್ಟೆ ಸೆಟ್ಟೇರಿದೆ. ಚಿತ್ರದ ಹೆಸರು ‘ದಂಡಿ’. ಇತ್ತೀಚೆಗೆ ಹೊನ್ನಾವರದಲ್ಲಿ ಈ ಚಿತ್ರಕ್ಕೆ ಚಾಲನೆ ನೀಡಲಾಯಿತು. ಸುಚೇಂದ್ರ ಪ್ರಸಾದ್ ಹಾಗೂ ತಾರಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ವಿಶಾಲ್ ರಾಜ್ ನಿರ್ದೇಶನ ಮಾಡುತ್ತಿದ್ದಾರೆ.

ಡಾ ರಾಜಶೇಖರ್ ಮಠಪತಿ ಅವರ ಕಾದಂಬರಿ ಆ‘ರಿಸಿ ಈ ಚಿತ್ರವನ್ನು ರೂಪಿಸುತ್ತಿರುವುದು ವಿಶೇಷ. ಹೊನ್ನಾವರದ ಮೂಡ ಗಣಪತಿ ದೇವಸ್ಥಾನದಲ್ಲಿ ನಡೆದ ಚಿತ್ರದ ಮುಹೂರ್ತ ಸಮಾರಂ‘ಕ್ಕೆ ಪದ್ಮಶ್ರೀ ಸುಕ್ರಿ ಗೌಡ ಆಗಮಿಸಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ನಿರೂಪಕಿ ಹಿಂದಿ ಮಾತನಾಡಿದ್ದಕ್ಕೆ ವೇದಿಕೆಯಿಂದ ಹೊರ ನಡೆದ ರೆಹಮಾನ್

ಉತ್ತರ ಕನ್ನಡದ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಚಿತ್ರವನ್ನು ಅರ್ಪಿಸಿದ್ದು, ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಈ ಕತೆಯನ್ನು ಚಿತ್ರ ಮಾಡುತ್ತಿರುವುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ. ಉಷಾರಾಣಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವೆಂಕಟೇಶ್ ಛಾಯಾಗ್ರಾಹಣವಿದೆ.

ಸಾಹಿತ್ಯ ಹಾಗೂ ಸಂಭಾಷಣೆಯನ್ನು ರಾಗಂ ಬರೆದಿದ್ದು, ರಾಮ್ ಕ್ರಿಶ್ ಸಂಗೀತ ನೀಡುತ್ತಿದ್ದಾರೆ. ನಿರ್ಮಾಪಕರ ಪುತ್ರ ಯುವಾನ್ ದೇವ್ ಹಾಗೂ ಶಾಲಿನಿ ಭಟ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ದಾಮೋದರ್ ನಾಯ್ಡು ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ