ಗಂಡ ಯಾವಾಗಲೂ ಅದು ಮಾಡು ಇದು ಮಾಡು ಅಂತ ಕೆಲಸ ಹೇಳಬಾರದು; ದಿಯಾ ನಟಿ ಖುಷಿ ಹೇಳಿಕೆ ವೈರಲ್

Published : Mar 06, 2025, 09:14 AM ISTUpdated : Mar 06, 2025, 10:09 AM IST
ಗಂಡ ಯಾವಾಗಲೂ ಅದು ಮಾಡು ಇದು ಮಾಡು ಅಂತ ಕೆಲಸ ಹೇಳಬಾರದು; ದಿಯಾ ನಟಿ ಖುಷಿ ಹೇಳಿಕೆ ವೈರಲ್

ಸಾರಾಂಶ

ಖುಷಿ ರವಿ ಮದುವೆಯ ನಂತರವೂ ಯಶಸ್ವಿಯಾದ ನಟಿ. ಸಂದರ್ಶನದಲ್ಲಿ, ಗಂಡನಲ್ಲಿ ಇರಬೇಕಾದ ಗುಣಗಳ ಬಗ್ಗೆ ಮಾತನಾಡಿದ್ದಾರೆ. ಗಂಡ ಹೆಚ್ಚು ಕಿರಿಕಿರಿ ಮಾಡಬಾರದು, ಮೇಕಪ್ ಬಗ್ಗೆ ಕಾಮೆಂಟ್ ಮಾಡಬಾರದು, ಮತ್ತು ಅವರ ಬಟ್ಟೆಗಳ ಬಗ್ಗೆ ಹೆಚ್ಚು ಗಮನ ಹರಿಸಬಾರದು ಎಂದು ಹೇಳಿದ್ದಾರೆ. ಪತಿಯು ಹೆಂಡತಿಯನ್ನು ಬೆಂಬಲಿಸುವುದು ಮುಖ್ಯವೆಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ದಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸುಂದರಿ ಖುಷಿ ರವಿ. ಸೂಪರ್ ಹಿಟ್ ನಾಯಕಿ ಆದ್ಮೇಲೆ ಮದುವೆ ಆದರೆ ಸಿನಿಮಾರಂಗದಲ್ಲಿ ಅವಕಾಶ ಸಿಗುವುದಿಲ್ಲ ಅಂತಾರೆ. ಆದರೆ ಮದುವೆ ಮಾಡ್ಕೊಂಡು ಮಗು ಆದ್ಮೇಲೆ ಸಿನಿಮಾ ಮಾಡಿ ಹಿಟ್ ಆದವರು ಖುಷಿ ರವಿ. ಸಖತ್ ವಿಭಿನ್ನ ಕಥೆಗಳನ್ನು ಅಯ್ಕೆ ಮಾಡಿಕೊಳ್ಳುವ ಖುಷಿ ಅವರಿಗೆ ಗಂಡನೇ ಬೆಸ್ಟ್‌ ಫ್ರೆಂಡ್. ಆದರೆ ಗಂಡನಿಗೆ ಇರಲೇ ಬೇಕಾದ ಕ್ವಾಲಿಟಿಗಳನ್ನು ರಿವೀಲ್ ಮಾಡಿದ್ದಾರೆ. ಕಾಮೆಂಟ್ಸ್‌ ಮೂಲಕ ಅದೆಷ್ಟೋ ಹೆಣ್ಣು ಮಕ್ಕಳು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರು ಮದ್ವೆ ಆದ್ಮೇಲೆ ಇದೆಲ್ಲಾ ಕಾಮನ್ ಅಂತಿದ್ದಾರೆ.

'ಮೊದಲ ಕ್ವಾಲಿಟಿ ತುಂಬಾ ಇರಿಟೇಟ್ ಮಾಡಬಾರದು. ಅದು ಕೊಡು ಇದು ಕೊಡು ಅದು ಅಲ್ಲಿಡು ಇದು ಇಲ್ಲಿಡು ಚಾರ್ಜಿಂಗ್ ಆನ್ ಮಾಡು...ಪ್ರೆಗ್ನೆಂಟ್‌ ತರ ಕೂತ್ಕೊಂಡು ಅಯ್ಯೋ ನಾನು ಕೆಲಸ ಮಾಡುತ್ತಿದ್ದೀನಿ ಅಂತ ಲ್ಯಾಪ್‌ಟಾಪ್‌ ಜೊತೆಗಿರುವುದು ಅದೆಲ್ಲಾ ಮಾಡಬಾರದು. ಎರಡನೇ ಕ್ವಾಲಿಟಿ....ಎಲ್ಲಾದರೂ ಹೋಗುವಾದ ಅಯ್ಯಯ್ಯೋ ಇದೇನು ಮೇಕಪ್ ಮಾಡ್ಕೊಂಡು ಕೂತ್ಕೊಂಡು ಬಿಡುತ್ತೀರಾ ಅಂತಾರೆ. ನಾವು ಮೇಕಪ್ ಮಾಡಿಕೊಳ್ಳುವುದಿಲ್ಲ ಎಷ್ಟು ನ್ಯಾಚುರಲ್ ಆಗಿದ್ದೀವಿ ನೋಡಿ. ಮೂರನೇ ಕ್ವಾಲಿಟಿ....ನನ್ನ ಪರ್ಸನಲ್ ಅನುಭವ ಇದು ನನ್ನ ಗಂಡ ಹಾಕಿಕೊಂಡಿರುವ ಬಟ್ಟೆ ಇದು ಚೆನ್ನಾಗಿ ಕಾಣಿಸುತ್ತಿದ್ಯಾ? ನಾನು ಚೆನ್ನಗಿ ಕಾಣಿಸುತ್ತಿದ್ದೀನಾ? ದಪ್ಪ ಆಗಿಬಿಟ್ಟಿದ್ದೀನಿ ಅಲ್ವಾ? ನಾನು ಸಣ್ಣ ಆಗಿದ್ದೀನಿ ಅಲ್ವಾ? ಅಂತ ಕೇಳ್ತಾರೆ. ನನಗಿಂತ ಕಾನ್ಶಿಯಸ್ ಆಗಿದ್ದಾರೆ' ಎಂದು ಕೀರ್ತಿ ENT ಕ್ಲಿನಿಕ್‌ನಲ್ಲಿ ಖುಷಿ ಪತಿ ಜೊತೆ ಸಂದರ್ಶನ ನೀಡಿದಾಗ ಹೇಳಿದ ಮಾತುಗಳಿದು. 

ರಕ್ಷಿತಾ ಪ್ರೇಮ್ ತಮ್ಮನ ಸಿನಿಮಾ ಶೂಟಿಂಗ್ ಬಂದ್ ಮಾಡಿದ ಅಧಿಕಾರಿಗಳು; ಐಟಂ ಸೀಜ್ ಮಾಡಿದ್ದು ನಿಜವೇ?

'ಒಂದು ಸತ್ಯ ಹೇಳುತ್ತೀನಿ. ಯಾವಾಗ ನೀವು ಹೊಟ್ಟೆ ಬಟ್ಟೆ ಹಾಕೊಂಡು ಹೇಗಿದೆ ಅಂತ ಕೇಳಿದಾಗ ಅಯ್ಯೋ ಚೆನ್ನಾಗಿಲ್ಲ ಅಂದ್ರೆ ನಿಜ ಹೇಳುತ್ತಿದ್ದೀನಿ ಅದೇ ಸೂಪರ್ ಆಗಿರುವುದು. ನಿಮ್ಮ ಹೆಂಡತಿ ಬಿಟ್ಟು ಬೇರೆ ಹುಡುಗಿಯರು ಇಷ್ಟ ಪಡುತ್ತಾರೆ. ಯಾವಾಗ ಸೂಪರ್ ಆಗಿದೆ ಅಂತ ಹೇಳ್ತಾರೆ ನೋಡಿ ಆಗ ನೀವು ಪ್ಯಾದೆ ತರ ಕಾಣಿಸುವುದು. 98% ಮದುವೆಯಾಗಿರುವ ಹೆಂಗಸರು ಹೀಗೆ ಮಾಡೋದು' ಎಂದು ಖುಷಿ ಪತಿ ಹೇಳಿದ್ದಾರೆ. ಖುಷಿ ಯಾವುದೇ ಸಿನಿಮಾ ಮಾಡಲಿ, ಫೋಟೋಶೂಟ್ ಮಾಡಲಿ ಅಥವಾ ಕಾರ್ಯಕ್ರಮಗಳಲ್ಲಿ ಭಾಗಿಯಾದರೂ ಜೊತೆಗೆ ನಿಂತು ಸಪೋರ್ಟ್ ಮಾಡುವುದು ಫ್ಯಾಮಿಲಿ. ಮೇಡಂ ಮದ್ವೆ ಆಗಿ ಮಗು ಆದ್ಮೇಲೆ ಸಿನಿಮಾ ಮಾಡಲು ನಿಮ್ಮ ಗಂಡ ಬಿಟ್ಟಿದ್ದಕ್ಕೆ ಖುಷಿ ಪಡಬೇಕು ಅಂದಿದ್ದಾರೆ ನೆಟ್ಟಿಗರು. 

ಯಾವ ಸ್ಟಾರ್ ಹೀರೋಗೂ ಕಡಿಮೆ ಇಲ್ಲ ವಿಜಯ್ ರಾಘವೇಂದ್ರ ಪುತ್ರ; ಫೋಟೋ ನೋಡಿ ಎಲ್ಲರೂ ಶಾಕ್

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ