ಧ್ರುವ ಸರ್ಜಾ ಪತ್ನಿಗೆ ಫೆವರೇಟ್​ ಯಾರು? ಒಂದು ವರ್ಷದ ಪುತ್ರಿ ಹೇಳ್ತಾಳೆ ಕೇಳಿ: ಕ್ಯೂಟ್​ ವಿಡಿಯೋ ವೈರಲ್​

By Suvarna News  |  First Published Nov 1, 2023, 12:22 PM IST

ಧ್ರುವ ಸರ್ಜಾ ಅವರ ಒಂದು ವರ್ಷದ ಕಂದಮ್ಮ, ತನ್ನ ಅಮ್ಮನಿಗೆ ಫೆವರೆಟ್​ ಯಾರು ಎಂದು ತೊದಲು ನುಡಿಯಲ್ಲಿ ಹೇಳಿದ್ದು, ಇದರ ಕ್ಯೂಟ್​ ವಿಡಿಯೋ ವೈರಲ್​ ಆಗಿದೆ.
 


ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಎಂದೇ ಫೇಮಸ್​ ಆಗಿರುವ ಧ್ರುವ ಸರ್ಜಾ ಅವರು ಕೆಲ ದಿನಗಳ ಹಿಂದಷ್ಟೇ ತಮ್ಮ ಎರಡನೆಯ ಮಗುವನ್ನು ಬರಮಾಡಿಕೊಂಡಿದ್ದಾರೆ. 24 ನವೆಂಬರ್‌ 2019ರಂದು ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್‌ ಮದುವೆಯಾಗಿದ್ದರು. ಮದುವೆಯಾಗಿ ಮೂರು ವರ್ಷಗಳ ನಂತರ, ಅಂದರೆ 2022ರ  ಅಕ್ಟೋಬರ್‌ 2 ರಂದು ಪ್ರೇರಣಾ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.  ಇದಾದ ಬಳಿಕ ಇದೇ ಸಪ್ಟೆಂಬರ್​ 18ರಂದು ಎರಡನೆಯ ಮಗುವಿನ ಪಾಲಕರಾಗಿದ್ದಾರೆ ಧ್ರುವ ಮತ್ತು ಪ್ರೇರಣಾ. ಕೆಲ ದಿನಗಳ ಹಿಂದಷ್ಟೇ ಇವರು ತಮ್ಮ ಮೊದಲ ಮಗಳ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ್ದರು. ಇದೀಗ ಎರಡೂ ಮಕ್ಕಳ ಲಾಲನೆ ಪಾಲನೆಯಲ್ಲಿದ್ದಾರೆ ಪ್ರೇರಣಾ. ಆಗಾಗ್ಗೆ ಮಗಳ ಕ್ಯೂಟ್​ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅವರ ಮಗಳ ವಿಡಿಯೋ ಅನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಅದರಲ್ಲಿ ಅವರು, ಅಮ್ಮನಿಗೆ ಫೆವರೆಟ್​ ಯಾರು ಎಂದು ಕೇಳಿದ್ದಾರೆ. ತೊದಲು ನುಡಿಯಲ್ಲಿ ಮಗಳು ನಾನು ಎಂದು ಹೇಳಿದ್ದು, ಇದಕ್ಕೆ ಸೋ ಸ್ವೀಟ್ ಎಂದು ಹಲವರು ಕಮೆಂಟ್​ ಹಾಕುತ್ತಿದ್ದಾರೆ. 


ಅಷ್ಟಕ್ಕೂ ಇವರಿಬ್ಬರ ಮದುವೆಯ ಕಥೆ ಕೂಡ ಇಂಟರೆಸ್ಟಿಂಗ್​ ಆಗಿದೆ.  ಪ್ರೇರಣಾ ಶಂಕರ್ ಹಾಗೂ ಧ್ರುವ ಸರ್ಜಾ ಅವರು ಅಕ್ಕ ಪಕ್ಕದ ಮನೆಯವರು. ಇವರಿಬ್ಬರು ಚಿಕ್ಕ ವಯಸ್ಸಿನಿಂದಲೇ ಪ್ರೀತಿ ಮಾಡುತ್ತಿದ್ದರು. ಆನಂತರ ಕುಟುಂಬದವರ ಒಪ್ಪಿಗೆ ಮೇರೆಗೆ 2018ರ ಡಿಸೆಂಬರ್ 9ರಂದು ನಿಶ್ಚಿತಾರ್ಥ ಮಾಡಿಕೊಂಡರು.  2019ರ ನವೆಂಬರ್‌ನಲ್ಲಿ ಇವರು ದಾಂಪತ್ಯ ಜೀವನಕ್ಕೆ ಅಡಿ ಇಟ್ಟರು.  ಇದಕ್ಕೂ ಮುನ್ನ  ಪ್ರೇರಣಾ ಶಂಕರ್ ಅವರು ಬೆಂಗಳೂರಿನಲ್ಲಿ ಖಾಸಗಿ ಕಾಲೇಜೊಂದರಲ್ಲಿ  ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಇದೀಗ ಎರಡು ಮಕ್ಕಳ ಪಾಲನೆಯಲ್ಲಿ ತೊಡಗಿದ್ದಾರೆ. 

Tap to resize

Latest Videos

ಇಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬ: ಮೇಘನಾ ರಾಜ್, ಧ್ರುವ ಸರ್ಜಾ ಭಾವುಕ ಪೋಸ್ಟ್​​

ಇನ್ನು ಇವರ ಮೊದಲ ಮಗಳ ಹೆಸರನ್ನು ಇನ್ನೂ ಇವರು ರಿವೀಲ್​ ಮಾಡಲಿಲ್ಲ. ಕಳೆದ ತಿಂಗಳ ಅಕ್ಟೋಬರ್​ 2ರಂದು ಮೊದಲ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ನಡೆಸಿದ್ದರು.  ವಿಶಿಷ್ಟ ಥೀಮ್‌ನಲ್ಲಿ ಮಗಳ ಮೊದಲ ಹುಟ್ಟುಹಬ್ಬವನ್ನ ಧ್ರುವ ಸರ್ಜಾ ಮತ್ತು ಪ್ರೇರಣಾ ಆಚರಿಸಿದ್ದರು.   ಮಗಳಿಗೆ ‘ರಾಜಕುಮಾರಿ’, ‘ಪುಟಾಣಿ’, ‘ಸನ್‌ಶೈನ್’ ಅಂತೆಲ್ಲಾ ಕರೆಯುತ್ತಿದ್ದಾರೆ. ಮಗಳ ಮೊದಲ ಬರ್ತ್‌ಡೇ ವೇಳೆಯೂ ‘ಹ್ಯಾಪಿ ಬರ್ತ್‌ಡೇ ಸನ್‌ಶೈನ್‌’ ಅಂತಲೇ ಬರೆದಿದ್ದರು. ಸೆಪ್ಟೆಂಬರ್ 18 ರಂದು  ಗಣೇಶ ಹಬ್ಬದಂದೇ ಗಂಡು ಮಗುವಿಗೆ ಪ್ರೇರಣಾ ಜನ್ಮ ನೀಡಿದ್ದಾರೆ. ಈಗ ಇವರ ಇಬ್ಬರೂ ಮಕ್ಕಳಿಗೆ ಯಾವ ಹೆಸರು ಇಡಬಹುದು ಎಂದು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. 

ಇನ್ನು ಧ್ರುವ ಸರ್ಜಾ ಮತ್ತು ಅವರ ಸಹೋದರ ಚಿರಂಜೀವಿ ಸರ್ಜಾ ಇಬ್ಬರ ಬಾಂಧವ್ಯ ಎಲ್ಲರಿಗೂ ಗೊತ್ತೇ ಇದೆ. ಅಣ್ಣ ಚಿರಂಜೀವಿ ಸರ್ಜಾ ಅಂದರೆ ಧ್ರುವಾ ಅವರಿಗೆ ಅಷ್ಟೊಂದು ಬಾಂಧವ್ಯವಿತ್ತು. ದಿಢೀರನೇ ಚಿರಂಜೀವಿ ಸರ್ಜಾ  ಹೃದಯಾಘಾತದಿಂದ ಅಗಲಿದಾಗ, ಧ್ರುವ ಸರ್ಜಾ ಮಾನಸಿಕವಾಗಿ ಕುಸಿದಿದ್ದರು. ಇವರಿಬ್ಬರು ಕೇವಲ  ಅಣ್ಣ ತಮ್ಮ ಆಗಿರಲಿಲ್ಲ, ಬದಲಿಗೆ  ಸ್ನೇಹಿತರಂತೆ ಇದ್ದರು. ಒಬ್ಬರಿಗೆ ಇನ್ನೊಬ್ಬರು ಬೆನ್ನೆಲುಬಾಗಿ ನಿಂತವರು. ಅಣ್ಣನ ನೆನಪಿಗೆ ಧ್ರುವ ಅವರು  ಕನಕಪುರ ರಸ್ತೆಯ ನೆಲಗುಳಿಯ ಬಳಿ ಇರುವ ಧ್ರುವ ಸರ್ಜಾ ಫಾರ್ಮ್ ಹೌಸ್‌ನಲ್ಲಿ ಸಮಾಧಿ ನಿರ್ಮಿಸಿದ್ದಾರೆ. ಕೆಲವು ದಿನಗಳ ಹಿಂದೆ ಫಾರ್ಮ್‌ಹೌಸ್‌ಗೆ ಭೇಟಿ ನೀಡಿರುವ ಧ್ರುವ ಯಾರಿಗೂ ಹೇಳದ ಹಾಗೆ ಅಣ್ಣನ ಸಮಾಧಿ ಪಕ್ಕದಲ್ಲಿರುವ ಜಾಗದಲ್ಲಿ ದಿಂಬು ಬೆಡ್‌ಶೀಟ್‌ ಹಾಕಿಕೊಂಡು ಮಲಗಿದ್ದರು. ಪತ್ನಿಯ ಸೀಮಂತ ಶಾಸ್ತ್ರವನ್ನೂ ಸಮಾಧಿಯ ಸಮೀಪವೇ ನೆರವೇರಿಸಿದ್ದರು. 

ಧ್ರುವ ಸರ್ಜಾ ಮಗಳಿಗೆ ಒಂದು ವರ್ಷ: ತಂಗಿಯ ಜೊತೆ ಚಿರು ಪುತ್ರನ ಕ್ಯೂಟ್​ ಮಾತುಕತೆ ವೈರಲ್

click me!