'ಈ ಕಾರಣಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರದ್ದು ಮಾಡಿ'

Published : Feb 21, 2021, 09:42 PM ISTUpdated : Feb 21, 2021, 10:03 PM IST
'ಈ ಕಾರಣಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರದ್ದು ಮಾಡಿ'

ಸಾರಾಂಶ

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ರದ್ದು ಮಾಡುವಂತೆ ಮನವಿ / ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಪತ್ರ ಬರೆದ ನಿರ್ಮಾಪಕ ನಿರ್ದೇಶಕ ಮದನ್ ಪಟೇಲ್ / ಕೊರೋನಾ ಹೆಚ್ಚಾಗುತ್ತಿರೋ ಸಮಯದಲ್ಲಿ ಚಲನಚಿತ್ರೋತ್ಸವ ನಡೆಸುವುದು ಸರಿ ಅಲ್ಲ / ಚಲನಚಿತ್ರೋತ್ಸವಕ್ಕೆ ಹೊರ ದೇಶದಿಂದ ಬರುವ ಅಥಿತಿಗಳಿಂದ ಕೊರೋನಾ ಹೆಚ್ಚಾಗಬಹುದು 

ಬೆಂಗಳೂರು(ಫೆ. 21)  ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ರದ್ದು ಮಾಡಲು ಸಿಎಂಗೆ ನಿರ್ಮಾಪಕರೊಬ್ಬರು ಮನವಿ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪಗೆ ನಿರ್ಮಾಪಕ ನಿರ್ದೇಶಕ ಮದನ್ ಪಟೇಲ್ ಪತ್ರ ಬರೆದಿದ್ದಾರೆ.

ಕೊರೋನಾ ಹೆಚ್ಚಾಗುತ್ತಿರೋ ಸಮಯದಲ್ಲಿ ಚಲನಚಿತ್ರೋತ್ಸವ ನಡೆಸುವುದು ಸರಿ ಅಲ್ಲ . ಚಲನಚಿತ್ರೋತ್ಸವಕ್ಕೆ ಹೊರ ದೇಶದಿಂದ ಬರುವ ಅಥಿತಿಗಳಿಂದ ಕೊರೋನಾ ಹೆಚ್ಚಾಗಬಹುದು ಎಂದು ಎಚ್ಚರಿಕೆಯುಕ್ತ ಸಲಹೆ ನೀಡಿದ್ದಾರೆ.

ಬೆಂಗಳೂರು ಚಲನಚಿತ್ರೋತ್ಸವದ ವಿಶೇಷ

ಮಾರ್ಚ್ 24 ರಿಂದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಿಗದಿಯಾಗಿದೆ.  ಈ ವರ್ಷ 'ಭಾರತೀಯ ಪ್ರದರ್ಶನ ಕಲೆಗಳ ಮಹತ್ವ' ವಿಷಯದ ಮೇಲೆ ಚಿತ್ರೋತ್ಸವ ಏರ್ಪಡಿಸಲಾಗಿದೆ. ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ  11 ಪರದೆಗಳಲ್ಲಿ 50ಕ್ಕೂ ಹೆಚ್ಚು ದೇಶಗಳ 200 ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.  ಏಳು ದಿನಗಳ ಕಾಲ ನಡೆಯುವ ಚಿತ್ರೋತ್ಸವದಲ್ಲಿ ಮೂರು ಭಾಗವಿರುತ್ತದೆ. ಏಷಿಯನ್ ಸಿನಿಮಾ, ಭಾರತೀಯ ಸಿನಿಮಾ ಹಾಗೂ ಕನ್ನಡ ಸಿನಿಮಾಗಳ ಸ್ಪರ್ಧಾ ವಿಭಾಗ ಎಂದು ವಿಂಗಡಿಸಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್