ಗಾಜನೂರಿನಿಂದ ಸಾಂಬರ್ ಪೌಡರ್ ಬರುತ್ತೆ, ಅಕ್ಕಿ ರೊಟ್ಟಿ- ಕಡುಬು ಮಾಡೋದು ಕಲಿತೆ: ಅಶ್ವಿನಿ ಪುನೀತ್ ರಾಜ್‌ಕುಮಾರ್

Published : Jul 24, 2023, 01:16 PM IST
ಗಾಜನೂರಿನಿಂದ ಸಾಂಬರ್ ಪೌಡರ್ ಬರುತ್ತೆ, ಅಕ್ಕಿ ರೊಟ್ಟಿ- ಕಡುಬು ಮಾಡೋದು ಕಲಿತೆ: ಅಶ್ವಿನಿ ಪುನೀತ್ ರಾಜ್‌ಕುಮಾರ್

ಸಾರಾಂಶ

ಅಡುಗೆ ಮಾಡೋಕೆ ತುಂಬಾನೇ ಇಷ್ಟ ಈಗ ಸಮಯ ಸಿಗುತ್ತಿಲ್ಲ. ಮಗಳು ಮಾಡುವ ಸ್ವೀಟ್ ಮೆಚ್ಚಿಕೊಂಡ ಅಶ್ವಿನಿ ಪುನೀತ್..... 

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿಕ್ಕಾಪಟ್ಟೆ ಇಷ್ಟ ಪಟ್ಟು ಆಯ್ಕೆ ಮಾಡಿರುವ ಆಚಾರ್ ಅಂಡ್ ಕೋ ಸಿನಿಮಾವನ್ನು ಪಿಆರ್‌ಕೆ ಸಂಸ್ಥೆ ನಿರ್ಮಾಣ ಮಾಡಿದೆ. ಜುಲೈ 28ರಂದು ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದು ಪ್ರಚಾರದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಭಾಗಿಯಾಗಿದ್ದಾರೆ. ಫುಡ್ ಬ್ಲಾಗರ್ ಕೃಪಾಲ್ ಅಮನ್ನಾ ಜೊತೆ ಮಿನರ್ವಾ ಸರ್ಕಲ್ ಬಳಿ ಇರುವ ಹಳೆ ಹೋಟೆಲ್‌ನಲ್ಲಿ ಊಟ ಮಾಡುತ್ತಾರೆ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

'ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಪಿಆರ್‌ಕೆ ಸಂಸ್ಥೆಯನ್ನು 2016ರಲ್ಲಿ ಆರಂಭಿಸಿದ್ದು ನಾನು ಅದನ್ನು ಮುಂದುವರೆಸುತ್ತಿರುವೆ' ಎಂದು ಹೇಳುತ್ತಾ ಅಶ್ವಿನಿ ಪುನೀತ್ ಮಾತು ಆರಂಭಿಸಿದ್ದಾರೆ. 

'ನಟನೆಯಲ್ಲಿ ಸಿಂಧು ಶ್ರೀನಿವಾಸ್ ಮೂರ್ತಿ ಸಾಭೀತು ಮಾಡಿದ್ದರು ಆದರೆ ನಿರ್ದೇಶನ ವಿಚಾರದಲ್ಲಿ ನನಗೆ ಕ್ಲಾರಿಟಿ ಇರಲಿಲ್ಲ. ಹೀಗಾಗಿ ಒಳ್ಳೆ ಅಸಿಸ್ಟೆಂಟ್‌ನ ಇಟ್ಟುಕೊಳ್ಳಿ ನಾನು ಸಂಪೂರ್ಣ ಫ್ರೀಡಂ ಕೊಡುವೆ ಎನ್ನುತ್ತಿದ್ದೆ. ತುಂಬಾ ಶ್ರಮಾದಿಂದ ಕೆಲಸ ಮಾಡಿದ್ದಾರೆ ಇಡೀ ಸೆಟ್‌ನ ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿದ್ದರು. ಇಡೀ ಸೆಟ್‌ನ ಕಂಟ್ರೋಲ್‌ನಲ್ಲಿ ಇಟ್ಟಿಕೊಳ್ಳಲು ಸಲಹೆ ಮಾಡಿದ್ದೆ ಕಾರಣ ಆಕೆ ನಿರ್ದೇಶನಕ್ಕೆ ಹೊಸಬ್ಬರು ಯಾಕೆ ನಾವು ಈ ಚಿಕ್ಕ ಹುಡುಗಿ ಮಾತು ಕೇಳಬೇಕು ಅನ್ನೋ ಮಾತು ಬರಬಾರದು ಅನ್ನೋ ಕಾರಣಕ್ಕೆ ಹೇಳುತ್ತಿದ್ದೆ' ಎಂದು ಸಿನಿಮಾ ಬಗ್ಗೆ ಅಶ್ವಿನಿ ಮಾತನಾಡಿದ್ದಾರೆ. 

ಅಪ್ಪು ಭಾವಚಿತ್ರವಿರುವ ಸೀರೆ ಧರಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್!

'ಅಪ್ಪೆ ಮಿಡಿ ನನ್ನ ಫೇವರೆಟ್ ಉಪ್ಪಿನಕಾಯಿ. ನಮ್ಮ ಕುಟುಂಬದಲ್ಲಿ ಪ್ರತಿಯೊಬ್ಬರಿಗೂ ಊಟ ಅಂದ್ರೆ ತುಂಬಾನೇ ಇಷ್ಟ. ರಾಘಣ್ಣ ಹೊರತು ಪಡಿಸಿ ಎಲ್ಲರೂ ಎಂಜಾಯ್ ಮಾಡುತ್ತಾರೆ. ನಾನು ಕೂಡ ಫುಡಿ ತಿಂಡಿ ಅಂದ್ರೆ ತುಂಬಾನೇ ಇಷ್ಟ..ಎಲ್ಲೇ ಇರಲಿ ನನಗೆ ನನ್ನ ಮಲೆನಾಡಿನ ಅಕ್ಕಿರೊಟ್ಟಿ, ಕಡಬು ಮತ್ತು ಶಾವಿಗೆ ಬೇಕೇ ಬೇಕು. ಮದ್ವೆ ಆದ್ಮೇಲೆ ಮಲೆನಾಡಿನ ಶೈಲಿ ಅಡುಗೆ ಮಾಡುವುದು ಕಲಿತೆ ಏಕೆಂದರೆ ಅಪ್ಪು ಮನೆಯಲ್ಲಿ ಬೇರೆ ರೀತಿ ಆಹಾರವಿತ್ತು ಅದರಲ್ಲಿ ತಮಿಳುನಾಡು ಶೈಲಿ ಹೆಚ್ಚಿತ್ತು. ಪ್ರತಿ ಭಾನುವಾರ ನಮ್ಮ ಮನೆಯಲ್ಲಿ ಅಕ್ಕಿರೊಟ್ಟಿ ಶಾವಿಗೆ ಅಥವಾ ಕಡಬು ಇರುತ್ತಿತ್ತು ಮಕ್ಕಳಿಗೆ ಅದೇ ತಿನ್ನಬೇಕು ಎಂದು ಬೇಸರವಾಗುತ್ತಿತ್ತು ಆದರೆ ಅಪ್ಪು ತುಂಬಾ ಎಂಜಾಯ್ ಮಾಡುತ್ತಿದ್ದರು. ಈಗ ಬ್ಯುಸಿಯಾಗಿರುವ ಕಾರಣ ಅಡುಗೆ ಮಾಡಲು ಸಮಯವಿಲ್ಲ. ಸದಾ ಇಷ್ಟ ಪಡುವ ಆಹಾರ ಅಂದ್ರೆ ಮೊಸರನ್ನು ಮತ್ತು ಚಿಪ್ಸ್. ನನಗೆ ಬೆಂಡೆಕಾಯಿ ತುಂಬಾನೇ ಇಷ್ಟ. ಹಾಗಲಕಾಯಿ ಮತ್ತು ಸೋರೆಕಾಯಿ ಇಷ್ಟನೇ ಆಗಲ್ಲ' ಪಕ್ಕಾ ಸೌತ್ ಇಂಡಿಯನ್ ಊಟ ತಿನ್ನುತ್ತಾ ಅಶ್ವಿನಿ ಹೇಳಿದ್ದಾರೆ. 

Ashwini Puneeth Rajkumar ಹುಟ್ಟುಹಬ್ಬ; ನಾವಿದ್ದೀವಿ ಅತ್ತಿಗೆ ಎಂದ ಅಭಿಮಾನಿಗಳು

'ಆಚಾರ್ ಆಂಡ್ ಕೋ ಸ್ಕ್ರೀನ್ ಪ್ಲೇ ಓದಿದ ತಕ್ಷಣ ಅಪ್ಪು ಮತ್ತು ನನಗೆ ಅನಂತ್ ನಾಗ್ ಸರ್ ಸಿನಿಮಾಗಳ ನೆನಪು ಮಾಡಿತ್ತು. ದೊಡ್ಡ ಫ್ಯಾಮಿಲಿ ಕಥೆಗಳನ್ನು ನೋಡಿದ ಹಾಗೆ.  ಈಗಿನ ಕಾಲದಲ್ಲಿ ಜನರಿಗೆ ಆಕ್ಷನ್ ಸಿನಿಮಾ ನೋಡಿ ನೋಡಿ ಈ ಬದಲಾವಣೆ ಇಷ್ಟವಾಗಬಹುದು. ನನ್ನ ಮಕ್ಕಳು ಹಳೆ ಹಾಡುಗಳನ್ನು ಹೆಚ್ಚಿಗೆ ಕೇಳುತ್ತಾರೆ ಆದ್ರೂ ಪ್ರೆಸೆಂಟ್ ಟ್ರೆಂಡ್ ಗೊತ್ತಿದೆ. ಕೋವಿಡ್‌ ನಂತರ ಜನರು ಸಿನಿಮಾ ನೋಡುವ ಶೈಲಿ ಬದಲಾಗಿದೆ. ಹಳೆ ಭರಣಿಯಲ್ಲಿ ಹೊಸ ಉಪ್ಪಿನಕಾಯಿ ರೀತಿ. ಬೇಕೆಂದು ಮಹಿಳಾ ತಂಡವನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿದಲ್ಲ ಎಲ್ಲವೂ ಅದಾದಿ ಅದ ಆಯ್ತು..ನಿರ್ದೇಶಕರು ಮಹಿಳೆಯರು, ಕಾಸ್ಟ್ಯೂಮ್ ಡಿಸೈನರ್‌ ಕೂಡ ಮಹಿಳೆ. ಈ ಸಿನಿಮಾ ಪ್ರೊಡಕ್ಷನ್‌ನ ಚೆನ್ನಾಗಿ ಪ್ಲ್ಯಾನ್ ಮಾಡಲಾಗಿತ್ತು ಸಣ್ಣ ಪುಟ್ಟ ವಿಚಾರಗಳ ಬಗ್ಗೆ ಸಿಂಧು ಹೆಚ್ಚಿಗೆ ಗಮನ ಕೊಟ್ಟರು. ಮಾತು ಕೊಟ್ಟ ರೀತಿ ನಡೆಸಿಕೊಂಡು ಹೋಗಿದ್ದಾರೆ. ಸಾಮಾನ್ಯವಾಗಿ ಕಥೆ ಹೇಳುವುದು ಒಂದು ಶೂಟಿಂಗ್ ಆದ್ಮೇಲೆ ಬರುವುದೇ ಒಂದು ಆಗುತ್ತೆ ಆದರೆ ಈ ಸಿನಿಮಾದಲ್ಲಿ ಎಲ್ಲವೂ ಕರೆಕ್ಟ್‌ ಆಗಿದೆ' ಎಂದಿದ್ದಾರೆ ಆಶ್ವಿನಿ. 

'ನಾವು ಸಂಬಾರ್‌ಗೆ ಬಳಸುವ ಪೌಡರ್‌ನ ಗಾಜನೂರಿನಲ್ಲಿ ತಯಾರಿಸುತ್ತಾರೆ ಅಲ್ಲಿಂದ ತರಸಿ ಅಡುಗೆ ಮಾಡುವುದು. ಮನೆಯಲ್ಲಿ ಪೌಡರ್ ಮಾಡುವುದರಿಂದ ರುಚಿ ಚೆನ್ನಾಗಿರುತ್ತೆ. ಆಹಾರ ಇಷ್ಟ ಪಡುವವರು ಅದನ್ನು ಸವಿಸು ವಿಮರ್ಶೆ ನೀಡುವವರು ತುಂಬಾನೇ ಇಷ್ಟವಾಗುತ್ತಾರೆ. ಮೈಸೂರ್ ಪಾಕ್ ಅಂದ್ರೆ ತುಂಬಾನೇ ಇಷ್ಟವಾಗುತ್ತದೆ ಸದಾ ನನ್ನ ಅಜ್ಜಿ ನೆನಪು ಬರುತ್ತೆ ಏಕೆಂದರೆ ಅವರು ಮನೆಯಲ್ಲಿ ಮಾಡುತ್ತಿದ್ದರು. ಹೆಚ್ಚಿಗೆ ಇಷ್ಟ ಪಡುವೆ ಸ್ವೀಟ್ ಅಂದ್ರೆ ನನ್ನ ಮಗಳು ಮಾಡುವುದು. 9ನೇ ವಯಸ್ಸಿಗೆ ಆಕೆ ಯುಟ್ಯೂನ್ ನೋಡಿಕೊಂಡು ಬೇಕಿಂಗ್ ಮಾಡುವುದು ಕಲಿತರು. ಒಂದು ಹೋಟೆಲ್‌ನಲ್ಲಿ ಒಂದು Tresh Leches ತಿಂದು ಸೂಪರ್ ಆಗಿದೆ ಎಂದು ಪ್ರತಿ ವೀಕೆಂಡ್ ಅಪ್ಪು ಆರ್ಡರ್ ಮಾಡುತ್ತಿದ್ದರು. ಅದನ್ನು ಒಮ್ಮೆ ಮಗಳು ಮನೆಯಲ್ಲಿ ಮಾಡಿದಲು ಅದಕ್ಕೆ ಅಪ್ಪು ಬೂಂಡಿ ಹಾಕಿಕೊಂಡು ತಿನ್ನುತ್ತಿದ್ದರು. ನಮಗೆ ಇಷ್ಟ ಆಗುತ್ತಿರಲಿಲ್ಲ. ಅಪ್ಪುಗೆ ಒಂದು ಕೆಫೆ ಓಪನ್ ಮಾಡುವ ಕನಸಿತ್ತು' ತಮ್ಮ ಮನೆಯ ಅಡುಗೆ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್