
ನಟ ದೀಕ್ಷಿತ್ ಶೆಟ್ಟಿ ಹೇಳಿದ್ದೇನು?
ನಟ, ಕನ್ನಡಿಗ ದೀಕ್ಷಿತ್ ಶೆಟ್ಟಿ (Dheekshith Shetty) ಸದ್ಯಕ್ಕೆ ಪರಭಾಷೆಗಳಲ್ಲಿ ಮಿಂಚುತ್ತಿರೋ ನಟ. ಕನ್ನಡತಿ, ಆದರೆ ಸದ್ಯಕ್ಕೆ ಬಾಲಿವುಡ್ ಹಾಗೂ ಟಾಲಿವುಡ್‌ನಲ್ಲಿ ಮಿಂಚುತ್ತಿರೋ ನಟಿ ರಶ್ಮಿಕಾ ಮಂದಣ್ಣ ಅವರೊಂದಿಗೆ ದೀಕ್ಷಿತ್ ಶೆಟ್ಟಿ 'ದಿ ಗರ್ಲ್‌ಫ್ರೆಂಡ್' ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ವಿಮರ್ಶೆ ಹಾಗೂ ಕಲಿಕೆ ದೃಷ್ಟಿಯಿಂದ ಉತ್ತಮ ಎನ್ನಿಸಿದೆ. ಈ ಚಿತ್ರದಲ್ಲಿ ನಟ ದೀಕ್ಷಿತ್ ಶೆಟ್ಟಿಯವರ ನಟನೆ ಕೂಡ ಅದ್ಭುತವಾಗಿದ್ದು ಭವಿಷ್ಯದಲ್ಲಿ ಅವರಿಗೆ ಒಳ್ಳೆಯ ಅವಕಾಶಗಳು ಸಿಗಬಹುದು ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ.
ಆದರೆ, ನಟ ದೀಕ್ಷಿತ್ ಶೆಟ್ಟಿಯವರು ಸ್ವತಃ ಈ ಬಗ್ಗೆ ಏನು ಹೇಳ್ತಾರೆ? ದೀಕ್ಷಿತ್ ಶೆಟ್ಟಿ ಮಾತನ್ನಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗ್ತಿದೆ. ಅದರಲ್ಲಿ ಅವರು ತಮ್ಮ ನೋವು ವ್ಯಕ್ತೊಪಡಿಸಿದ್ದಾರೆ. 'ನಾನು ಇತ್ತೀಚೆಗೆ ನನ್ನ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಹೈದ್ರಾಬಾದ್‌ನಲ್ಲಿ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿರುವಾಗ ಸಿಂಗಲ್ ಸ್ಕ್ರೀನ್ ಥಿಯೇಟರ್ ಒಂದಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಸುಮಾರು 1500 ಜನರಿದ್ದಿರಬಹುದು. ನಾನು ಹೋದಾಗ ಎಲ್ಲರೂ ನನ್ನನ್ನು ಗುರುತು ಹಿಡಿದು 'ದೀಕ್ಷಿತ್' ಅಂತ ನನ್ನ ಹೆಸರು ಹೇಳಿ ಕೂಗುತ್ತಿದ್ದರು.
ಒಬ್ಬ ಕಲಾವಿದನಾಗಿ ನನಗೆ ಇದು ತುಂಬಾ ಖುಷಿ ಕೊಟ್ಟಿದೆ. ಇಷ್ಟು ವರ್ಷಗಳ ನನ್ನ ಪರಿಶ್ರಮ ನನಗೆ ಸಾರ್ಥಕ ಎನ್ನಿಸಿತು. ಆದರೆ, ನನ್ನ ತಾಯ್ನಾಡು ಕರ್ನಾಟಕದಲ್ಲಿ ನನಗೆ ಹೀಗೆ ಜನಪ್ರಿಯತೆ ಸಿಕ್ಕಿಲ್ಲ ಎನ್ನುವ ಬೇಸರ ನನ್ನನ್ನು ಕಾಡುತ್ತಿದೆ. ಪರಭಾಷೆಯಲ್ಲಿ ನನಗೆ ಹಣ-ಕೀರ್ತಿ ಎಲ್ಲವೂ ಸಿಕ್ಕಿದ್ದು ನನಗೆ ಖುಷಿಯ ಸಂಗತಿ ಹೌದು. ಆದರೆ ಅದೇ ಪ್ರೀತಿ ನನಗೆ ನನ್ನ ಕನ್ನಡನಾಡಿನಲ್ಲಿ ದೊರಕಬೇಕು ಎಂಬುದು ನನ್ನ ಬಹುದಿನಗಳ ಕನಸು. ಆದಷ್ಟೂ ಬೇಗ ಈ ನನ್ನ ಕನಸು ನನಸಾಗಲಿ ಎಂದು ನಾನು ಆಶಿಸುತ್ತೇನೆ' ಎಂದಿದ್ದಾರೆ ದೀಕ್ಷಿತ್ ಶೆಟ್ಟಿ.
ಜೊತೆಗೆ, ನಾನು ಕೆಲಸ ಮಾಡಿರುವ ಸಿನಿಮಾಗಳಲ್ಲಿ ನಾನು ಸಿನಿಮಾ ಶುರುವಾದಾಗಿನಿಂದ ಬಿಡುಗಡೆಯಾಗಿ ಪ್ರಮೋಶನ್ ಕಾರ್ಯಕ್ರಮಗಳಲ್ಲಿಯೂ ತೊಡಗಿಸಿಕೊಳ್ಳುತ್ತೇನೆ . ಈ ಸಂಗತಿ ನನ್ನ ಜೊತೆ ವರ್ಕ್ ಮಾಡಿರೋ ಎಲ್ಲರಿಗೂ ಗೊತ್ತು. ಜನರು ಎಲ್ಲಾ ಸಿನಿಮಾಗಳನ್ನೂ ಒಪ್ಪಿಕೊಂಡು, ಅದರಲ್ಲಿ ಕೆಲಸ ಮಾಡಿರುವ ಎಲ್ಲರನ್ನು ಇಷ್ಟಪಡುವಂತಾಬೇಕು. ಪರಭಾಷೆಗಳಲ್ಲಿ ಮಿಂಚುತ್ತಿರೋ ನಮ್ಮಂತಹ ಎಷ್ಟೋ ಕಲಾವಿದರಿಗೆ ತಮ್ಮತಮ್ಮ ಮಾತೃಭಾಷೆಗಳಲ್ಲಿಯೂ ಅವಕಾಶ ಸಿಗಬೇಕು, ಹೆಸರು-ಕಿರ್ತಿ ಸಂಪಾದಿಸಬೇಕು ಎಂಬುದು ನನ್ನ ಆಸೆ' ಎಂದಿದ್ದಾರೆ ದೀಕ್ಷಿತ್ ಶೆಟ್ಟಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.