ಯಾರನ್ನು ಮದುವೆ ಆಗ್ತಿದ್ದಾರೆ ಧರ್ಮ ಕೀರ್ತಿರಾಜ್? ಜೈಲಿನಿಂದ ಬಂದ ದರ್ಶನ್ ಭೇಟಿಯಾಗಿದ್ಯಾ?

Published : Mar 01, 2025, 10:27 AM ISTUpdated : Mar 01, 2025, 12:28 PM IST
ಯಾರನ್ನು ಮದುವೆ ಆಗ್ತಿದ್ದಾರೆ ಧರ್ಮ ಕೀರ್ತಿರಾಜ್? ಜೈಲಿನಿಂದ ಬಂದ ದರ್ಶನ್ ಭೇಟಿಯಾಗಿದ್ಯಾ?

ಸಾರಾಂಶ

ಬಿಗ್ ಬಾಸ್ ಸ್ಪರ್ಧಿ ಧರ್ಮ ಕೀರ್ತಿರಾಜ್, ರ್ಯಾಪಿಡ್ ರಶ್ಮಿ ಶೋನಲ್ಲಿ ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್‌ನಿಂದ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ ಎಂದಿದ್ದಾರೆ. ತಂದೆಯ ಒತ್ತಾಯದಿಂದ ಈ ವರ್ಷ ಮದುವೆಯಾಗ್ತಿರೋದಾಗಿ ತಿಳಿಸಿದ್ದಾರೆ. ಬಿಗ್‌ ಬಾಸ್‌ ಶೋ, ತಮಗೆ ಬರ್ತಿರುವ ಆಫರ್‌ ಸೇರಿದಂತೆ ಸ್ಯಾಂಡಲ್ ವುಡ್‌ ನಟರಾದ ದರ್ಶನ್‌, ಪುನೀತ್‌ ರಾಜ್ಕುಮಾರ್‌ ಹಾಗೂ ಕಿಚ್ಚ ಸುದೀಪ್‌ ಬಗ್ಗೆ ಧರ್ಮ ಮಾತನಾಡಿದ್ದಾರೆ.

ಬಿಗ್ ಬಾಸ್ 11ರ ಸ್ಪರ್ಧಿ  (Bigg Boss 11 contestant) ಹಾಗೂ ಸ್ಯಾಂಡಲ್ವುಡ್ ನಟ ಧರ್ಮ ಕೀರ್ತಿರಾಜ್ ( Dharma Keerthiraj)  ಬಿಗ್ ಬಾಸ್ ನಂತ್ರ ಏನೆಲ್ಲ ಬದಲಾವಣೆ ಆಗಿದೆ ಎಂಬುದನ್ನು ರ್ಯಾಪಿಡ್ ರಶ್ಮಿ ಮುಂದೆ ಹೇಳ್ಕೊಂಡಿದ್ದಾರೆ. ರ್ಯಾಪಿಡ್ ರಶ್ಮಿ ಶೋಗೆ ಬಂದಿದ್ದ ಧರ್ಮ ಕೀರ್ತಿರಾಜ್, ತಮ್ಮ ವೃತ್ತಿ, ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷ್ಯಗಳನ್ನು ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲೂ ನಾಟಕವಾಡದ ಧರ್ಮ ಕೀರ್ತಿರಾಜ್ ಸ್ವಭಾವ ಸರಳ, ಮೃದು. ಅವರೀಗ ಮದುವೆ ಬಗ್ಗೆ ಆಲೋಚನೆ ಮಾಡ್ತಿದ್ದಾರೆ. ಈ ವರ್ಷ ಸ್ಯಾಂಡಲ್ವುಡ್ ನಲ್ಲಿ ಇನ್ನೊಂದು ಮಂಗಳವಾದ್ಯ ಕೇಳಿ ಬರಲಿದೆ. ಅದು ಸ್ಯಾಂಡಲ್ವುಡ್ ಕ್ಯಾಡ್ಬರಿಸ್ ಧರ್ಮ ಕೀರ್ತಿರಾಜ್ ಅವರದ್ದು.

ಧರ್ಮ ಕೀರ್ತಿರಾಜ್ ಅವರಿಗೆ 40 ವರ್ಷವಾಗ್ತಿದೆ. ಮನೆಯಲ್ಲಿ ಮದುವೆಗೆ ಒತ್ತಡ ಕೇಳಿ ಬಂದಿದೆ. ಅಪ್ಪ, ಅಪ್ಪ, ಅಕ್ಕ – ಭಾವನ ಒತ್ತಾಯಕ್ಕೆ ಮಣಿದಿರುವ ಧರ್ಮ ಕೀರ್ತಿರಾಜ್ ಈ ವರ್ಷ ಮದುವೆ ಆಗ್ತಾರಂತೆ. ಮೆಚ್ಚಿದ ಹುಡುಗಿಯನ್ನು ಕೈ ಹಿಡಿಯೋದಾಗಿ ಧರ್ಮ ಕೀರ್ತಿರಾಜ್ ಹೇಳಿದ್ದಾರೆ. ಆದ್ರೆ ಆ ಹುಡುಗಿ ಈಗಾಗ್ಲೇ ಸಿಕ್ಕಿದ್ದಾಳಾ ಎಂಬುದನ್ನು ಹೇಳಿಲ್ಲ. ಬಿಗ್ ಬಾಸ್ ಮನೆಯಲ್ಲಿ ಧರ್ಮ ಕೀರ್ತಿರಾಜ್ ಮತ್ತು ಅನುಷಾ ಪ್ರೀತಿಯ ವಿಷ್ಯ ಚರ್ಚೆಯಲ್ಲಿತ್ತು. ಒಟ್ಟಿಗೆ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಅನುಷಾ ಹಾಗೂ ಧರ್ಮ ಈ ಹಿಂದೆ ಪ್ರೀತಿಯ ಸಂಬಂಧದಲ್ಲಿ ಇದ್ರು ಎನ್ನವು ಮಾತೂ ಕೇಳಿ ಬಂದಿತ್ತು. ಒಟ್ಟಿಗೆ ಪ್ರವಾಸ, ರೀಲ್ಸ್  ಮಾಡಿರುವ ಜೋಡಿ, ಬಿಗ್ ಬಾಸ್ ಮನೆಯಲ್ಲೂ ಒಳ್ಳೆ ಸ್ನೇಹಿತರಾಗಿ ಕಾಣಿಸಿಕೊಂಡಿದ್ದರು. ಬಿಗ್  ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಧರ್ಮ ಇದಕ್ಕೆ ಕ್ಲಾರಿಟಿ ಕೂಡ ನೀಡಿದ್ದರು. ನಾನು ಈ ವರ್ಷ ಮದುವೆ ಆಗ್ತೇನೆ, ತಂದೆ – ತಾಯಿ ಹುಡುಗಿಯನ್ನು ಹುಡುಕಿದ್ದು, ಮಾತುಕತೆ ನಡೆಯುತ್ತಿದೆ, ಆದ್ರೆ ಹುಡುಗಿ ಅನುಷಾ ಅಲ್ಲ ಎಂದು ಸ್ಪಷ್ಟನೆ ನೀಡಿದ್ರು. ರಶ್ಮಿ ಶೋನಲ್ಲೂ ಈ ವರ್ಷ ಮದುವೆ ಎಂದು ಧರ್ಮ ಕೀರ್ತಿರಾಜ್ ಹೇಳಿದ್ದಾರೆ. ಧರ್ಮ ಕೈ ಹಿಡಿಯುವ ಹುಡುಗಿ ಯಾರು ಎಂಬ ಕುತೂಹಲ ಈಗ ಅಭಿಮಾನಿಗಳಲ್ಲಿ ಮೂಡಿದೆ.

ಗರ್ಲ್‌ಫ್ರೆಂಡ್‌ನ ತಾಯಿ ಮುಂದೆ ನಿಲ್ಲಿಸಿದ ದೇವರಾಜ್ ಕಿರಿಯ ಪುತ್ರ; ಅಣ್ಣ- ಅತ್ತಿಗೆ ಸಪೋರ್ಟ್ ಇಲ್ವಾ?

ಇನ್ನು ಬಿಗ್ ಬಾಸ್ ಶೋ ಬಗ್ಗೆ ಮಾತನಾಡಿದ ಧರ್ಮ ಕೀರ್ತಿರಾಜ್, ಬಿಗ್ ಬಾಸ್ ಮನೆಗೆ ಹೋಗಿ ಬಂದ್ಮೇಲೆ ನನ್ನ ವ್ಯಕ್ತಿತ್ವ ಬದಲಾಗಿಲ್ಲ. ನನಗೆ ಬರ್ತಿರುವ ಸಿನಿಮಾ ಆಫರ್ ಗೆ ಬಿಗ್ ಬಾಸ್ ಕಾರಣವಲ್ಲ. ಆದ್ರೆ ಅಭಿಮಾನಿಗಳ ಸಂಖ್ಯೆ ಬಿಗ್ ಬಾಸ್ ನಿಂದ ಹೆಚ್ಚಾಗಿದೆ. ಅಭಿಮಾನಿಗಳು ಇನ್ನಷ್ಟು ಹತ್ತಿರವಾಗಿದ್ದಾರೆ ಎಂದಿದ್ದಾರೆ. 

ಅಪ್ಪನೇ ಪ್ರೇರಣೆ : ಧರ್ಮ ಅವರ ತಂದೆ ಸ್ಯಾಂಡಲ್ವುಡ್ ವಿಲ್ಲನ್ ಕೀರ್ತಿರಾಜ್. ತೆರೆ ಮೇಲೆ ವಿಲ್ಲನ್ ಆಗಿ ಅಬ್ಬರಿಸಿದ್ರೂ ತೆರೆ ಹಿಂದೆ ಮೃದು ಸ್ವಭಾವವನ್ನು ಹೊಂದಿರುವ ಕೀರ್ತಿರಾಜ್ ನನಗೆ ಸ್ಪೂರ್ತಿ ಎನ್ನುತ್ತಾರೆ ಧರ್ಮ. ಅಮ್ಮ ಕೈ ಕಳೆದುಕೊಂಡಾಗ ಅಪ್ಪ, ಅವರನ್ನು ನೋಡಿಕೊಂಡ ರೀತಿ, ಅವರಿಗೆ ಮಾಡಿದ ಆರೈಕೆ ಎಲ್ಲವೂ ನನಗೆ ಪಾಠ ಕಲಿಸಿದೆ. ಕುಟುಂಬದ ಜೊತೆ ಮಹಿಳೆಯರ ಜೊತೆ ಹೇಗಿರಬೇಕು ಎಂಬುದನ್ನು ಅಪ್ಪನಿಂದ ಕಲಿತಿದ್ದೇನೆ. ಮಗ ದೊಡ್ಡ ಹೀರೋ ಆಗ್ಬೇಕು ಎಂಬುದು ಅಪ್ಪನ ಕನಸು, ಅದನ್ನು ಈಡೇರಿಸ್ತೇನೆ ಎಂದು ಧರ್ಮ ಹೇಳಿದ್ದಾರೆ.

ಕೈಯಲ್ಲಿ ರೋಜಾ ಹಿಡಿದು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ಕೋಟಿ ಬೆಡಗಿ‌ ಮೋಕ್ಷಾ ಕುಶಲ್

ದರ್ಶನ್ ಬಗ್ಗೆ ಧರ್ಮ ಹೇಳಿದ್ದೇನು? : ದರ್ಶನ್ ಜೊತೆ ಮೊದಲ ಚಿತ್ರ ಮಾಡಿದ್ದ ಧರ್ಮ, ಅವರ ಜೊತೆ ಸಾಕಷ್ಟು ಒಡನಾಟ ಹೊಂದಿದ್ದಾರೆ. ಆದ್ರೆ ದರ್ಶನ್ ಜೈಲಿನಿಂದ ಬಂದ್ಮೇಲೆ ಯಾರ ಬಳಿಯೂ ಮಾತನಾಡ್ತಿಲ್ಲ, ಹೊರಗೆ ಬರ್ತಿಲ್ಲ. ಹಾಗಾಗಿ ಸದ್ಯ ಅವರನ್ನು ಭೇಟಿಯಾಗಿಲ್ಲ. ದರ್ಶನ್ ಒಳ್ಳೆಯತನ ಮುಚ್ಚಿಹೋಗಿದೆ, ಅದೊಂದು ಕೆಟ್ಟಗಳಿಗೆ ಎಂದಿದ್ದಾರೆ ಧರ್ಮ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅನ್ನವನ್ನು ತಿಂದು, ಆಯುರ್ವೇದದ ಡಯೆಟ್‌ ಮೂಲಕ ನಟಿ Shubha Poonja ಸಣ್ಣಗಾಗಿದ್ದು ಹೇಗೆ? ಚಾಟ್‌ ಇಲ್ಲಿದೆ
ಗುಂಡು ಗುಂಡಾಗಿದ್ದ Shubha Poonja ಬಳುಕುವ ಬಳ್ಳಿಯಂತಾದ್ರು! ಆಯುರ್ವೇದಿಕ್ Weight Loss ಟಿಪ್ಸ್‌ ಕೊಟ್ರು!