
ಬೆಂಗಳೂರು(ಜೂ.15) ಕಾಂತಾರಾ ಚಾಪ್ಟರ್ 1 ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಸಾಲು ಸಾಲು ಅವಘಡಗಳು ಸಂಭವಿಸುತ್ತಿರುವ ಕುರಿತು ಹಲವು ವರದಿಗಳು ಪ್ರಕಟಗೊಂಡಿದೆ. ಇತ್ತೀಚೆಗೆ ಮಾಣಿ ಜಲಾಶಯದಲ್ಲಿ ನಡೆದ ಅವಘಡದಲ್ಲಿ ರಿಷಬ್ ಶೆಟ್ಟಿ ಸೇರಿದಂತೆ 30 ಮಂದಿ ಪ್ರಾಣಾಪಾಯಿಂದ ಪಾರಾಗಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಇದೀಗ ಈ ಘಟನೆ ಸಂದರ್ಭ ಕಾಂತಾರಾ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆಯ ಫಿಲಂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ ಸ್ಪಷ್ಟನೆ ನೀಡಿದ್ದಾರೆ. ಭಾರಿ ಗಾಳಿ ಮಳೆಗೆ ಸಿನಿಮಾಗೆ ಹಾಕಿದ್ದ ಸೆಟ್ ಬಿದ್ದಿದೆ. ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಈ ವೇಳೆ ಶೂಟಿಂಗ್ ನಡೆಯುತ್ತಿರಲಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.
ಮಾಸ್ತಿಕಟ್ಟೆಯ ಮಾಣಿ ಜಲಾಶಯದ ಹಿನ್ನೀರಿನಲ್ಲಿ ಕಾಂತಾರ 1 ಸಿನಿಮಾದ ಶೂಟಿಂಗ್ ಮಾಡಲಾಗುತ್ತಿದೆ. ಸಾಕಷ್ಟು ಕಲಾವಿದರು, ತಂತ್ರಜ್ಞರು, ಕ್ಯಾಮೆರಾಮ್ಯಾನ್ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಶೂಟಿಂಗ್ ಸೆಟ್‌ನಲ್ಲಿ ಹಾಜರಿದ್ದಾರೆ. ಭಾರಿ ಮಳೆ ನಡೆಯುವ ಶೂಟಿಂಗ್ ನಡೆಯುತ್ತಿದೆ. ಈ ವೇಳೆ ದೋಣಿ ಮಗುಚಿ ಅವಘಡ ಸಂಭವಿಸಿದ್ದು, ರಿಷಬ್ ಶೆಟ್ಟಿ ಸೇರಿದಂತೆ 30 ಕಲಾವಿದರು, ಕ್ಯಾಮೆರಾಮ್ಯಾನ್ ಅಪಾಯದಿಂದ ಪಾರಾಗಿದ್ದರು. ಈ ಘಟನೆಯಲ್ಲಿ ಕ್ಯಾಮೆರಾ ನೀರಿನಲ್ಲಿ ಕೊಚ್ಚಿ ಹೋಗಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಹೊಂಬಾಳೆ ಸ್ಪಷ್ಟಪಡಿಸಿದೆ.
ಮಾಣಿ ಜಲಾಶದಲ್ಲಿ ನಡೆದಿದ್ದೇನು?
ಮಾಣಿ ಜಲಾಶಯದ ಹಿನ್ನೀರಿನಲ್ಲಿ ಕಾಂತಾರ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್‌ಗಾಗಿ ಬ್ಯಾಕ್‌ಡ್ರಾಪ್‌ನಲ್ಲಿ ದೋಣಿಯೊಂದರ ಸೆಟ್ ಹಾಕಲಾಗಿದೆ. ಆದರೆ ಸತತವಾಗಿ ಸುರಿಯುತ್ತಿರುವ ಭಾರಿ ಗಾಳಿ ಮಳೆಯಿಂದ ಈ ಸೆಟ್ ಬಿದ್ದಿದೆ. ಹಾಕಿದ್ದ ಸೆಟ್ ಕೆಳಕ್ಕೆ ಬೀಳುವಾಗ ಸ್ಥಳದಲ್ಲಿ ಯಾರೂ ಇರಲಿಲ್ಲ. ಇಷ್ಟೇ ಅಲ್ಲ ಈ ವೇಳೆ ಸೆಟ್‌ನಲ್ಲಿ ಯಾವುದೇ ಶೂಟಿಂಗ್ ನಡೆಯುತ್ತಿರಲಿಲ್ಲ. ಸೆಟ್ ನಷ್ಟವಾಗಿದೆ. ಆದರೆ ಇದರಿಂದ ಯಾರಿಗೂ ತೊಂದರೆ ಆಗಿಲ್ಲ ಎಂದು ಹೊಂಬಾಳೆ ಸ್ಪಷ್ಟನೆ ನೀಡಿದೆ.
ಸ್ಕೂಬಾ ಡೈವರ್ಸ್, ಸ್ಪೀಡ್ ಬೋಟ್ ಸೇರಿ ಎಲ್ಲಾ ಸುರಕ್ಷತಾ ಕ್ರಮ
ಮಾಣಿ ಜಲಾಶಯದ ಹೀನ್ನೀರಿನಲ್ಲಿ ಶೂಟಿಂಗ್ ನಡೆಯುತ್ತಿದೆ. ಸದ್ಯ ನೀರಿನ ಭಾಗದಲ್ಲಿ ಯಾವುದೇ ಶೂಟಿಂಗ್ ಮಾಡುತ್ತಿಲ್ಲ. ಆದರೆ ನೀರಿನ ಬದಿಯಲ್ಲಿ, ಹಿನ್ನೀರಿನ ಬದಿಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಇದಕ್ಕಾಗಿ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ಪೀಡ್ ಬೋಟ್ ತರಸಿಕೊಂಡಿದ್ದೇವೆ. 25 ಜನ ಈಜು ಬಲ್ಲ ನುರಿತ ಮೀನುಗಾರರು , ಸ್ಕೂಬಾ ಡೈವರ್ಸ್ ಕರೆಸಿದ್ದೇವೆ. ಇನ್ನು ಲೈಫ್ ಜಾಕೆಟ್ ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಶೂಟಿಂಗ್ ನಡೆಸುತ್ತಿದ್ದೇವೆ ಎಂದು ಹೊಂಬಾಳೆ ಫಿಲಂ ಆದರ್ಶ್ ಸ್ಪಷ್ಟಪಡಿಸಿದ್ದಾರೆ.
ನೀರಿನಲ್ಲಿ ಕೋಚ್ಚಿ ಹೋಯಿತಾ ಕ್ಯಾಮೆರಾ?
ಮಾಣಿ ಜಲಾಶಯದ ನೀರಿನಲ್ಲಿ ಯಾವುದೇ ಶೂಟಿಂಗ್ ಮಾಡುತ್ತಿಲ್ಲ. ಸೆಟ್ ಹಾಕಿ ಶೂಟಿಂಗ್ ಮಾಡಲಾಗುತ್ತಿದೆ ಎಂದು ಹೊಂಬಾಳೆ ಹೇಳಿದೆ. ಇದೇ ವೇಳೆ ರಿಷಬ್ ಶೆಟ್ಟಿ ಹಾಗೂ ಇತರ ಕಲಾವಿದರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅನ್ನೋ ಸುದ್ದಿಗಳನ್ನು ಹೊಂಬಾಳೆ ತಳ್ಳಿಹಾಕಿದೆ. ಶೂಟಿಂಗ್‌ಗೆ ಹಾಕಿದ್ದ ದೋಣಿ ಸೆಟ್ ಗಾಳಿ, ಮಳೆಗೆ ಬೀಳುವಾಗ ಚಿತ್ರತಂಡ ಈ ಸೆಟ್‌ನಿಂದ ಸಾಕಷ್ಟ ದೂರದಲ್ಲಿ ಶೂಟಿಂಗ್ ಮಾಡುತ್ತಿತ್ತು. ಸೆಟ್‌ನಲ್ಲಿ ಯಾವುದೇ ಆರ್ಟಿಸ್ಟ್, ತಂತ್ರಜ್ಞರು, ಕ್ಯಾಮೆರಾಮ್ಯಾನ್ ಹಾಗೂ ಕ್ಯಾಮೆರಾ ಇರಲಿಲ್ಲ ಎಂದು ಹೊಂಬಾಳೆ ಹೇಳಿದೆ. ಕ್ಯಾಮೆರಾ ನೀರಿನಲ್ಲಿ ಹೋಗಿದ್ದರೆ ಇವತ್ತು ಶೂಟಿಂಗ್ ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ. ಶೂಟಿಂಗ್ ಯಶಸ್ವಿಯಾಗಿ ಸಾಗುತ್ತಿದೆ. ಪೊಲೀಸ್ ಸಿಬ್ಬಂದಿಗಳು ಬಂದು ಪರಿಶೀಲನೆ ಮಾಡಿದ್ದಾರೆ ಎಂದು ಹೊಂಬಾಳೆ ಸ್ಪಷ್ಟಪಡಿಸಿದೆ. ಅವಘಡದ ಯಾವುದೇ ಘಟನೆ ನಡೆದಿಲ್ಲ ಎಂದಿದ್ದಾರೆ.
ಎಲ್ಲಾ ಅನುಮತಿ ಪಡೆದು ಶೂಟಿಂಗ್
ಮಾಣಿ ಜಲಾಶಯದ ಹಿನ್ನೀರಿನಲ್ಲಿ ಶೂಟಿಂಗ್ ನಡೆಸಲು ಎಲ್ಲಾ ಇಲಾಖೆಯಿಂದ ಅಗತ್ಯ ಅನುಮತಿ ಪಡೆದಿದ್ದೇವೆ. ಪೊಲೀಸ್ ಇಲಾಖೆ,ೆ ಅರಣ್ಯ ಇಲಾಖೆ, ಕೆಪಿಸಿಎಲ್ ಸೇರಿದಂತೆ ಇದಕ್ಕೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದಿದ್ದೇವೆ. ಇದೇ ವೇಳೆ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತಕ್ಕೂ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ಹೊಂಬಾಳೆ ಸ್ಪಷ್ಟಪಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.