
ಫೇಸ್‌ಬುಕ್ ಲೈವ್‌ಗೆ ಬಂದ ನಟ ದರ್ಶನ್, ಎರಡು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಒಂದು ಹುಟ್ಟು ಹಬ್ಬದ ಆಚರಣೆ, ಮತ್ತೊಂದು ರಾಬರ್ಟ್ ಸಿನಿಮಾ ರಿಲೀಸ್ ದಿನಾಂಕವನ್ನು ರಿವೀಲ್ ಮಾಡಿದ್ದಾರೆ. ಮೊದಲು ಸ್ಯಾಡ್ ನ್ಯೂಸ್ ಕೊಟ್ಟ ದರ್ಶನ್, ನಂತರ ಗುಡ್ ನ್ಯೂಸ್ ಕೊಟ್ಟಿದ್ದಾರೆ, ಸುದ್ದಿ ರಿವೀಲ್ ಅಗುತ್ತಿದ್ದಂತೆ ರಾಬರ್ಟ್ ತಂಡದಿಂದ ರಿಲೀಸ್ ಪೋಸ್ಟರ್ ಕೂಡ ರಿವೀಲ್ ಮಾಡಲಾಗಿದೆ.
ಸೀಕ್ರೆಟ್ ಆಗಿಟ್ಟಿದ್ದ ರಾಬರ್ಟ್ ಡೇಟ್‌ನ ಲೈವಲ್ಲಿ ರಿವೀಲ್ ಮಾಡಿದ ದರ್ಶನ್
ಈ ವರ್ಷ ಹುಟ್ಟಿದಬ್ಬ ಮಾಡೋಲ್ಲ. ದಯವಿಟ್ಟು ಯಾರೂ ಮನೆ ಹತ್ತಿರ ಬರಬೇಡಿ ಎಂದು ಮನವಿ ಮಾಡಿಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಮಾನಿಗಳು ಕೇಳಿದ ಓಟಿಟಿ ಹಾಗೂ ರಾಬರ್ಟ್ ಚಿತ್ರದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. 'ನಿರ್ಮಾಪಕರು ಎಲ್ಲಿಂದಲೋ ಒಟ್ಟು ಹಾಕಿ ಕೋಟ್ಯಾಂತರ ಹಣವನ್ನು ಸಿನಿಮಾ ಮಾಡಲು ತಂದು ಹಾಕುತ್ತಾರೆ. ನಾವು ನಮ್ಮ ಜೀವ ಒತ್ತೆ ಇಟ್ಟು, ಅಪಾಯವಿದ್ದರೂ ಆ್ಯಕ್ಷನ್ ಸೀನ್ ಮಾಡುವುದು ಥಿಯೇಟರ್‌ನಲ್ಲಿ ನಿಮ್ಮ ಕೂಗು, ವಿಷಲ್ ಹಾಗೂ ಚಪ್ಪಾಳೆ ಕೇಳುವುದಕ್ಕೆ. ನಮ್ಮ ಶ್ರಮಕ್ಕೆ ಅಷ್ಟೇ ನಾವು ಕೇಳುವುದು,' ಎಂದು ದರ್ಶನ್ ಮಾತನಾಡಿದ್ದಾರೆ.
"
ಓಟಿಟಿ ಬೇಡವೇ ಬೇಡ:
'ಎಲ್ಲರ ಬಳಿ ಮೊಬೈಲ್ ಇದೆ. ಈಗ ಅಂಬಾನಿ 5G ಬಿಡುಗಡೆ ಮಾಡ್ತಿದ್ದಾರೆ. ಒಬ್ಬ ವ್ಯಕ್ತಿ ಸಣ್ಣ ಮೊಬೈಲ್ ಸ್ಕ್ರೀನ್‌ನಲ್ಲಿ ಸಿನಿಮಾ ನೋಡಿದ್ರೆ ಅದರಲ್ಲಿ ಯಾವ ಮನೋರಂಜನೆ ದೊರೆಯುವುದು? ನನ್ನ ಪ್ರಕಾರ 5G ಒಂದು ದೊಡ್ಡ ಸ್ಕ್ಯಾಮ್. ನಾನು ಯಾವುದೇ ವಿಚಾರದ ಬಗ್ಗೆ ಮಾತನಾಡಿದರೂ ಅದರ ಸಾಧಕ ಬಾಧಕಗಳ ಬಗ್ಗೆ ಥಿಂಕ್ ಮಾಡಿ ಹೇಳುವೆ. ಯಾರು ಏನೇ ಹೇಳಲಿ, ಈಗ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಇದೆ, ಅಕಸ್ಮಾತ್ ಶೇ.25 ಪ್ರೇಕ್ಷಕರಿಗೆ ಅವಕಾಶ ನೀಡಿದರೂ ನಾವು ಸಿನಿಮಾವನ್ನು ಥಿಯೇಟರ್‌ನಲ್ಲೇ ರಿಲೀಸ್ ಮಾಡುವುದು' ಎಂದು ದರ್ಶನ್ ರಿಲೀಸ್ ಸುಳಿವು ನೀಡಿದ್ದರು.
ಒಂದು ತಿಂಗಳು ಮುನ್ನವೇ ಬರ್ತಡೇ ಆಚರಣೆ ಬಗ್ಗೆ ನೋಟಿಸ್ ಕೊಟ್ಟ ನಟ ದರ್ಶನ್; ಏನ್ಹೇಳಿದ್ದಾರೆ?
ಶಿವರಾತ್ರಿಗೆ ರಾಬರ್ಟ್:
ಹೊಸ ವರ್ಷಕ್ಕೆ, ಸಂಕ್ರಾಂತಿಗೆ ರಾಬರ್ಟ್ ರಿಲೀಸ್ ಎಂದು ದಿನಾಂಕ ಮುಂದೂಡಲಾಗಿತ್ತು. ಆದರೆ ಸರ್ಪ್ರೈಸ್ ಆಗಿಟ್ಟಿದ್ದ ರಿಲೀಸ್ ದಿನಾಂಕವನ್ನು ದರ್ಶನ್ ರಿವೀಲ್ ಮಾಡಿದ್ದಾರೆ. ಮಾರ್ಚ್ 11 ಮಹಾ ಶಿವರಾತ್ರಿ ದಿನ ಸಿನಿಮಾ ತೆರೆ ಕಾಣಲಿದೆ ಎಂದು ಮಾತು ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.