ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೋಸ್ಟ್ ಎಕ್ಸ್‌ಪೆಕ್ಟೇಷನಲ್ ಮೂವಿ 'ರಾಬರ್ಟ್' ಫಸ್ಟ್ ಲುಕ್ ಅನ್ನು ಕ್ರಿಸ್‌ಮಸ್‌ಗೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ರಿವೀಲ್ ಮಾಡಿದೆ.
ಕನ್ನಡ ಚಿತ್ರರಂಗದ 'ಒಡೆಯ' ಸಿನಿ ಪ್ರೇಕ್ಷಕರ 'ಯಜಮಾನ', ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಚಿತ್ರ 'ರಾಬರ್ಟ್' ಈಗ ಫಸ್ಟ್ ಲುಕ್ ರಿವೀಲ್ ಮಾಡಲು ರೆಡಿಯಾಗಿದೆ.
'ಕುಚ್ಚಿಕು' ಸಾಂಗ್ ರೀಮೆಕ್; ಡಿ-ಬಾಸ್‌ಗೆ ಜೋಡಿಯಾಗಿ ಟೈಗರ್!
'ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ 'ರಾಬರ್ಟ್' ಚಿತ್ರದ 1st ಲುಕ್ ಪೋಸ್ಟರ್ ಅನ್ನು ಕ್ರಿಸ್ಮಸ್ ಹಬ್ಬದಂದು (ಡಿಸೆಂಬರ್ 25) ಬಿಡುಗಡೆ ಮಾಡಲಿದ್ದೇವೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಸದಾ ಹೀಗೆ ಇರಲಿ' ಎಂದು ಚಿತ್ರ ನಿರ್ದೇಶಕ ತರುಣ್ ಸುಧೀರ್ ಟ್ಟಿಟರ್ ಖಾತೆಯಲ್ಲಿ ಅಧಿಕೃತಪಡಿಸಿದ್ದಾರೆ.
ಬಹುತೇಕ ಚಿತ್ರಕರಣ ಮುಗಿದಿದ್ದು ಮುಖ್ಯ ಸನ್ನಿವೇಶ ಚಿತ್ರೀಕರಣಕ್ಕೆ ತಂಡ ಮತ್ತೊಮ್ಮೆ ವಾರಣಾಸಿಗೆ ತೆರಳಿದೆ. ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಶುರು ಮಾಡಿದ್ದಾರೆ. ಈ ಚಿತ್ರದಲ್ಲಿ 'ಕುಚ್ಚಿಕು ಕುಚ್ಚಿಕು' ಹಾಡಿದ್ದು ದೋಸ್ತಿಗಳಾಗಿ ವಿನೋದ್ ಪ್ರಭಾಕರ್ ಮಿಂಚಲಿದ್ದಾರೆ.
ಡಿ.21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ