
ಟಗರು ಚಿತ್ರದ ನಂತರ ಧನಂಜಯ್ ಡಾಲಿ ಇಮೇಜ್‌ನಲ್ಲಿ ಮಿಂಚಿದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಅದೇ ಹೆಸರಿನ ಚಿತ್ರದ ಫಸ್ಟ್ ಲುಕ್ ಈಗ ಬಿಡುಗಡೆಯಾಗಿದೆ. ಪೋಸ್ಟರ್ ವೈರಲ್ ಆಗಿದೆ.
ಸೈತಾನ್ ಕಾ ಬಚ್ಚಾ ಎನ್ನುವ ಸಿನಿಮಾದ ಟ್ಯಾಗ್‌ಲೈನ್ ನೋಡಿದರೆ ಇದು ಡಾಲಿಯ ಕ್ಯಾರೆಕ್ಟರ್ ಮೀರಿಸೋ ಪಾತ್ರ ಅನ್ನೋದ್ರಲ್ಲಿ ಡೌಟೇ ಇಲ್ಲ ಅನಿಸುತ್ತದೆ. ಯೋಗೀಶ್ ನಾರಾಯಣ್ ನಿರ್ಮಾಣದ ಪ್ರಭು ಶ್ರೀನಿವಾಸ್ ನಿರ್ದೇಶಿಸಿರೋ ಸಿನಿಮಾ ಇದು
ಹುಬ್ಬೇರಿಸೋ ಹಾಗಿದೆ ಯುವರತ್ನನ 15 ದಿನದ ಕಲೆಕ್ಷನ್
ಯುವರತ್ನ ಸಿನಿಮಾದಲ್ಲಿ ಕಾಣಿಸಿಕೊಂಡ ಡಾಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಇದೀಗ ಡಾಲಿಯ ಪೋಸ್ಟರ್ ನೋಡಿದರೆ ಧನಂಜಯ್ ಇನ್ನೆಷ್ಟು ಭೀಕರ ಪಾತ್ರದಲ್ಲಿ ಕಾಣಿಸ್ಕೊಳ್ಳಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿ ಮೂಡಿದೆ.
ಒಡೆದಿರೋ ಕನ್ನಡಿಯಲ್ಲಿ ವಿಕಾರವಾಗಿ ನಗುವ ಡಾಲಿಯ ಪ್ರತಿಬಿಂಬವನ್ನು ಪೋಸ್ಟರ್‌ನಲ್ಲಿ ಕಾಣಬಹುದು. ವಿಕೃತ ನಗುವಿನ ಜೊತೆ ಕಣ್ಣಿನಲ್ಲಿರುವ ತೀಕ್ಷ್ಣ ನಗು, ಗೆದ್ದೆನೆಂಬ ವಿನೋದ, ಕ್ರೂರತನವನ್ನೂ ಕಾಣಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.