ಮೈಸೂರು ಜೈಲಿನಲ್ಲಿದ 26 ಖೈದಿಗಳನ್ನು ಬಿಡಿಸಲು 28 ಲಕ್ಷ ರೂ. ದಂಡ ಕಟ್ಟಿದ ಶಿವಣ್ಣ!

By Suvarna NewsFirst Published Mar 31, 2020, 3:19 PM IST
Highlights

ಕಷ್ಟದಲ್ಲಿದ ಖೈದಿಗಳನ್ನು ಬಿಡುಗಡೆ ಮಾಡಿಸಲು ಡಾ.ಶಿವರಾಜ್‌ಕುಮಾರ್ 28ಲಕ್ಷ ರೂಪಾಯಿ ದಂಡ  ಕಟ್ಟಿ ಅವರಿಗೆ ಜೀವನ ರೂಪಿಸಿಕೊಳ್ಳಲು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸ್ಯಾಂಡಲ್‌ವುಡ್‌ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಸುಮಾರು 120ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿ ಡಾಕ್ಟರೇಟ್‌ಟನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ .

ಕಷ್ಟ ಎಂದು ಯಾರೇ ಡಾ.ರಾಜ್‌ಕುಮಾರ್‌ ಅವರ ಮನೆ ಬಾಗಿಲಿಗೆ ಬಂದರೂ ಇಲ್ಲ ಎಂದು ಹೇಳದೆ ಆದಷ್ಟು ಸಹಾಯ ಮಾಡುತ್ತಾರೆ.ಅದು ದೊಡ್ಮನೆಯ ದೊಡ್ಡ ಗುಣ  ಅದರಲ್ಲೂ ಅಭಿಮಾನಿಗಳಲ್ಲಿ ದೇವರನ್ನು ಕಾಣುವ  ಈ ಕುಟುಂಬದವರು 1988ರಲ್ಲಿ ಮಾಡಿದ ಸಹಾಯವೊಂದು ಈಗ ಬೆಳಕಿಗೆ ಬಂದಿದೆ.

ಹೌದು! 1990ರಲ್ಲಿ ರಾಜ್ಯಾದಾದ್ಯಂತ  ತೆರೆಕಂಡ  'ಮೃತ್ಯುಂಜಯ' ಸಿನುಮಾದ  ಪ್ರಮುಖ ಸನ್ನಿವೇಶಗಳನ್ನು ಮೈಸೂರಿನ ಜೈಲಿನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಈ ವೇಳೆ ಅನೇಕ  ಖೈದಿಗಳ ಜೊತೆ ಅಭಿಮಾನದಿಂದ ಮಾತನಾಡಿದ ಶಿವಣ್ಣ  ಅವರ ಕಷ್ಟಗಳನ್ನು ತಿಳಿದುಕೊಂಡು ಆ ನಂತರ ಅಲ್ಲಿದ 26 ಖೈದಿಗಳನ್ನು ಬಿಡಿಸಲು  28ಲಕ್ಷ ರೂಪಾಯಿ ದಂಡ  ಕಟ್ಟಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ವಿಡಿಯೋದಲ್ಲಿ ಮಾತನಾಡಿರುವ  ಆಟೋ ಚಾಲಕ.

"

ಮೈಲಾರಪಟ್ಟಣ ನಿವಾಸಿಯಾಗಿರುವ  ಗೋಪಾಲ್ 16ನೇ ವಯಸ್ಸಿನಲ್ಲಿದ್ದಾಗ ಮಾಡಿದ ಒಂದು ತಪ್ಪಿಗೆ ಮೈಸೂರು ಜೈಲಿನಲ್ಲಿ 10 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದಾರೆ ಆ ನಂತರ ಕೋರ್ಟ್ 3 ಲಕ್ಷ ದಂಡ ಕಟ್ಟಿದರೆ ಬಿಡುಗಡೆ ಮಾಡುವುದಾಗಿ ಆದೇಶ ನೀಡುತ್ತದೆ. ಹಣವಿಲ್ಲದ ಕಾರಣ ಗೋಪಾಲ್‌ ಅಲ್ಲೇ ಇನ್ನೂ ಮೂರು ವರ್ಷಗಳು ಕಳೆಯಬೇಕಾಗಿತ್ತು  ಈ ಸಮಯದಲ್ಲಿ ಶಿವಣ್ಣ ಅವರೊಟ್ಟಿಗೆ ಚಿತ್ರೀಕರಣದಲ್ಲಿ ಮಾತನಾಡಿ ಸಹಾಯ ಪಡೆದಿದ್ದಾರೆ. ಗೋಪಾಲ್‌ ಅವರಂತೆ ಹೊರ ಬರಲು ಆರ್ಥಿಕ ಸಂಕಷ್ಟದಲ್ಲಿದ್ದ ಖೈದಿಗಳನ್ನು ಬಿಡಿಸಲು ಶಿವರಾಜ್‌ಕುಮಾರ್ ಸಹಾಯ ಮಾಡಿದ್ದಾರೆ. 

ಈಗ ಗೋಪಾಲ್‌ ಆವರು ಆಟೋ ಓಡಿಸಿಕೊಂಡು  ಜೀವನ ನಡೆಸುತ್ತಿದ್ದಾರೆ .

 

click me!