ಮೈಸೂರಿನ ಜ್ಞಾನೋದಯ ಕಾಲೇಜಿನ ವಿದ್ಯಾರ್ಥಿ ತಮ್ಮ ಪ್ರಿನ್ಸಿಪಾಲ್ಗೆ ಪತ್ರ ಬರೆದಿದ್ದು, ಮದಗಜ ಬಿಡುಗಡೆಯಾಗುವ ದಿನಾಂಕ ಡಿಸೆಂಬರ್. 3ರಂದು ಇಡೀ ಕಾಲೇಜಿಗೆ ರಜೆ ನೀಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ರೋರಿಂಗ್ ಸ್ಟಾರ್ ಶ್ರೀಮುರಳಿ (SriiMurali) ಅಭಿನಯದ ಹಾಗೂ ಮಹೇಶ್ ಕುಮಾರ್ (Mahesh Kumar) ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಮದಗಜ' (Madhagaja) ಚಿತ್ರದ ಫಸ್ಟ್‌ಲುಕ್, ಟ್ರೇಲರ್, ಸಾಂಗ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರತಂಡ ಚಿತ್ರದ ಬಿಡುಗಡೆ ದಿನಾಂಕವನ್ನು ಈಗಾಗಲೇ ಪ್ರಕಟಿಸಿದ್ದು, ಚಿತ್ರವನ್ನು ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಈ ನಡುವೆ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಶೇಷವಾದ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಶ್ರೀಮುರಳಿ ಅವರ ಅಭಿಮಾನಿಯೊಬ್ಬರು 'ಮದಗಜ' ಚಿತ್ರ ವೀಕ್ಷಿಸಲು ಒಂದು ದಿನ ಇಡೀ ಕಾಲೇಜಿಗೆ ರಜೆ ನೀಡುವಂತೆ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ. ಮೈಸೂರಿನ ಜ್ಞಾನೋದಯ ಕಾಲೇಜಿನ ವಿದ್ಯಾರ್ಥಿ ತಮ್ಮ ಪ್ರಿನ್ಸಿಪಾಲ್ಗೆ ಪತ್ರ ಬರೆದಿದ್ದು, ಚಿತ್ರ ಬಿಡುಗಡೆಯಾಗುವ ದಿನಾಂಕ ಡಿಸೆಂಬರ್. 3ರಂದು ಇಡೀ ಕಾಲೇಜಿಗೆ ರಜೆ ನೀಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಈ ಪತ್ರವನ್ನು ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ನಿಮ್ಮ ಅಭಿಮಾನಕ್ಕೆ ಶತಕೋಟಿ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇದೀಗ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
undefined
'ಮದಗಜ' ಚಿತ್ರದ ಟೈಟಲ್ ಸಾಂಗ್ (Title Song) ಇತ್ತಿಚೆಗಷ್ಟೇ ಬಿಡುಗಡೆಯಾಗಿ ಸಿನಿರಸಿಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಅದ್ಧೂರಿಯಾಗಿ ಚಿತ್ರದ 'ಯುದ್ಧ ಸಾರಿದ ಚಂಡಮಾರುತ' ಟೈಟಲ್ ಹಾಡನ್ನು ಚಿತ್ರೀಕರಣ ಮಾಡಲಾಗಿದ್ದು, ಬೃಹತ್ ಸೆಟ್ ಮತ್ತು ಅದ್ಧೂರಿ ಮೇಕಿಂಗ್ ಜೊತೆಗೆ ಶ್ರೀಮುರಳಿ ಮಾಸ್ ಲುಕ್‌ನಲ್ಲಿ ಸ್ಟೆಪ್ಸ್ ಹಾಕಿದ್ದರು. ಹಾಡಿಗೆ ಕಿನ್ನಲ್ ರಾಜ್ ಸಾಹಿತ್ಯವಿದ್ದು, ಸಂತೋಷ್ ವೆಂಕಿ ದನಿಯಲ್ಲಿ ಮೂಡಿಬಂದಿತ್ತು. 'ಕೆಜಿಎಫ್' (KGF) ಖ್ಯಾತಿಯ ರವಿ ಬಸ್ರೂರು (Ravi Basrur) ಈ ಹಾಡಿಗೆ ಸಂಗೀತ ಸಂಯೋಜಿಸಿದ್ದರು.
ವಾರಾಣಸಿ ಗ್ಯಾಂಗ್‌ಸ್ಟರ್ (Gangster) ಆಗಿ ಶ್ರೀಮುರಳಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 74 ದಿನಗಳ ಕಾಲ ಬೆಂಗಳೂರು, ಮೈಸೂರು, ಹೈದರಾಬಾದ್, ವಾರಾಣಸಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದ್ದು, ರವಿ ಬಸ್ರೂರ್ ಸಂಗೀತ ಚಿತ್ರಕ್ಕಿದೆ. 2019ರಲ್ಲಿ ತೆರೆಕಂಡ 'ಭರಾಟೆ' (Bharaate) ಚಿತ್ರದ ನಂತರ ಶ್ರೀ ಮುರಳಿ ನಟನೆಯ ಯಾವ ಚಿತ್ರಗಳೂ ಬಿಡುಗಡೆಯಾಗಿಲ್ಲ. ಆದ್ದರಿಂದಲೇ 'ಮದಗಜ' ಚಿತ್ರಕ್ಕೆ ಅಪಾರ ನಿರೀಕ್ಷೆಯಿಂದ ಅಭಿಮಾನಿಗಳು ಕಾಯುತ್ತಿದ್ದಾರೆ. ಮೊದಲ ಬಾರಿಗೆ ಮುರಳಿ ಎದುರಿಗೆ ನಾಯಕಿಯಾಗಿ ಪ್ರಮುಖ ಪಾತ್ರದಲ್ಲಿ ಆಶಿಕಾ ರಂಗನಾಥ್ (Ashika Ranganath) ನಟಿಸಿದ್ದು, ಚಿತ್ರದಲ್ಲಿ ಅವರು ಎರಡು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುವ ಪೋಸ್ಟರನ್ನು ಸಹ ಚಿತ್ರತಂಡ ಹಂಚಿಕೊಂಡಿತ್ತು.
Madhagaja Title Song: ರೋರಿಂಗ್ ಸ್ಟಾರ್ ಶ್ರೀಮುರಳಿ ಅಬ್ಬರ ಜೋರು
ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas Gowda) ಬಂಡವಾಳ ಹೂಡಿದ್ದಾರೆ. ಈ ಚಿತ್ರವು ಶ್ರೀ ಮುರಳಿ ಅವರ 22ನೇ ಸಿನಿಮಾವಾಗಿದ್ದು ಇದೊಂದು ಆಕ್ಷನ್ ಫ್ಯಾಮಿಲಿ ಎಂಟರ್‌ಟೇನರ್ ಚಿತ್ರ. 'ಮಫ್ತಿ' (Mufti) ಖ್ಯಾತಿಯ ನವೀನ್ ಕುಮಾರ್ ಚಿತ್ರಕ್ಕೆ ಸಿನಿಮಾಟೋಗ್ರಫಿ ಕೆಲಸ ಮಾಡಿದ್ದಾರೆ. ಹರೀಶ್ ಕೊಮ್ಮೆಯವರ ಸಂಕಲನವಿರುವ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಟಾಲಿವುಡ್ನ ಖ್ಯಾತ ನಟ ಜಗಪತಿ ಬಾಬು (Jagapati Babu) ನಟಿಸಿದ್ದು, ಚಿಕ್ಕಣ್ಣ (Chikkanna), ಶಿವರಾಜ್ ಕೆ.ಆರ್. ಪೇಟೆ (Shivraj K.R.Pete) ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದೆ. ಕನ್ನಡ ,ತೆಲುಗು, ತಮಿಳು ಭಾಷೆಗಳಲ್ಲಿ 'ಮದಗಜ' ಸಿನಿಮಾ ಬಿಡುಗಡೆಯಾಗಲಿದೆ.