ಶಿವರಾಜ್‌ಕುಮಾರ್ ಎದುರೇ ಡಾ ರಾಜ್‌ಕುಮಾರ್ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?!

Published : Mar 06, 2025, 06:56 PM ISTUpdated : Mar 06, 2025, 07:52 PM IST
ಶಿವರಾಜ್‌ಕುಮಾರ್ ಎದುರೇ ಡಾ ರಾಜ್‌ಕುಮಾರ್ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?!

ಸಾರಾಂಶ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಟ ಶಿವರಾಜ್‌ಕುಮಾರ್ ಎದುರೇ ಅವರ ತಂದೆ ಡಾ ರಾಜ್‌ಕುಮಾರ್ ಬಗ್ಗೆ ಮಾತನ್ನಾಡಿದ್ದಾರೆ. ಹೌದು, ಹಾಗಿದ್ದರೆ ಸಿಎಂ ಸಿದ್ದರಾಮಯ್ಯ ಅಣ್ಣಾವ್ರ ಬಗ್ಗೆ ಅದೇನು ಹೇಳಿದ್ದಾರೆ ನೋಡಿ.. ರಿಯಲೀ... 

16 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (16 Benagaluru International Film Festival) ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಬಹುತೇಕರಿಗೆ ಗೊತ್ತಿದೆ.  ಇದನ್ನು ವಾರ್ತಾ ಇಲಾಖೆ, ಚಲನಚಿತ್ರ ಅಕಾಡೆಮಿ ಹಾಗು ಚಲನಚಿತ್ರ ವಾಣಿಜ್ಯೋದ್ಯಮ ಇಲಾಖೆ ಎಲ್ಲವೂ ಸೇರಿ ಈ ಫಿಲಂ ಫೆಸ್ಟಿವಲ್‌ ಆಯೋಜನೆ ಮಾಡಿವೆ. ಈ ಸಂದರ್ಭದಲ್ಲಿ ಮಾತನಾಡಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ನಟ ಶಿವರಾಜ್‌ಕುಮಾರ್ (Shivarajkumar) ಎದುರೇ ಅವರ ತಂದೆ ಡಾ ರಾಜ್‌ಕುಮಾರ್ (Dr Rajkumar) ಬಗ್ಗೆ ಮಾತನ್ನಾಡಿದ್ದಾರೆ. 

ಹೌದು, ಹಾಗಿದ್ದರೆ ಸಿಎಂ ಸಿದ್ದರಾಮಯ್ಯ ಅಣ್ಣಾವ್ರ ಬಗ್ಗೆ ಅದೇನು ಹೇಳಿದ್ದಾರೆ ನೋಡಿ.. 'ನಾವು ಇಂದಿಗೂ ಕೂಡ ಡಾ ರಾಜ್‌ಕುಮಾರ್ ಅವರನ್ನು ಏಕೆ ನೆನಪಿಸಿಕೊಳ್ಳುತ್ತೇವೆ ಎಂದರೆ, ಅಣ್ಣಾವ್ರ ಸಿನಿಮಾ ಮೂಲಕ ಸಮಾಜಕ್ಕೆ ಒಮದು ಉತ್ತಮ ಸಂದೇಶ ಹೋಗುತ್ತಿತ್ತು. ಸಮಾಜ ಅಂದ್ರೆ ಹೀಗೆ ಇರ್ಬೇಕು, ಅದಕ್ಕೋಸ್ಕರ ನಾವು ಡಾ ರಾಜ್‌ಕುಮಾರ್ ಅವರ ಸಿನಿಮಾಗಳನ್ನು ಮೆಚ್ಚಿಕೊಳ್ಳತಾ ಇದ್ವಿ, ಅವ್ರ ಸಿನಿಮಾಗಳನ್ನು ನೋಡೋಕೆ ಹೋಗ್ತಾ ಇದ್ವಿ.. ಆದ್ರೆ, ಇವತ್ತು ಆ ಭಾವನೆ ಸಮಾಜದಲ್ಲಿ ಕಡಿಮೆ ಆಗ್ತಾ ಇರೋದನ್ನ ನಾವು ನೋಡ್ತಾ ಇದೀವಿ.. ಆದ್ರೆ ಅದು ಆಗ್ಬಾರ್ದು..' ಎಂದಿದ್ದಾರೆ.

'ರಾಜ್‌ ಲೀಲಾ ವಿನೋದ' ಬಗ್ಗೆ ನೇರವಾಗಿ ಶಿವಣ್ಣಗೇ ಪ್ರಶ್ನೆ: ಸಿಕ್ಕ ಉತ್ತರವೇ ಅಂತಿಮ ಸತ್ಯ, ದೂಸ್ರಾ ಮಾತಿಲ್ಲ! 

ಜೊತೆಗೆ, 'ನಾವು ಯಾವುದೇ ಮಾಧ್ಯಮವನ್ನು ನೋಡಿದಾಗ, ಅದು ಸಮಾಜವನ್ನು ಬದಲಾವಣೆ ಮಾಡೋದನ್ನ ನೋಡ್ಬೇಕು.. ಆಗ ಅದು ಒಂದು ಉತ್ತಮ ಮಾಧ್ಯಮ ಆಗಿರುತ್ತದೆ. ಡಾ ರಾಜ್‌ಕುಮಾರ್ ಸಿನಿಮಾಗಳು ಅಂಥ ಒಂದು ಪ್ರಯತ್ನವನ್ನು ಮಾಡ್ತಾ ಇದ್ವು..' ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಹೌದು, ಸಿದ್ದರಾಮಯ್ಯ ಅವರು ಹೇಳಿದ್ದರಲ್ಲಿ, ಅಣ್ಣಾವ್ರ ಬಗ್ಗೆ, ಡಾ ರಾಜ್‌ಕುಮಾರ್ ಸಿನಿಮಾಗಳ ಬಗ್ಗೆ ಮಾತನ್ನಾಡಿದ್ದರಲ್ಲಿ ಅರ್ಥವಿದೆ. 

ಕನ್ನಡ ಸಿನಿಮಾರಂಗಕ್ಕೆ ಬಿಸಿನೆಸ್ ಕೊಡುವ ಜೊತೆಗೆ, ಸಮಾಜಕ್ಕೆ ಕೂಡ ಡಾ ರಾಜ್‌ಕುಮಾರ್ ಸಿನಿಮಾಗಳು ಉತ್ತಮ ಸಂದೇಶ ನೀಡಿವೆ. ಈ ಕಾರಣಕ್ಕೇ ಇಂದಿಗೂ ಕೂಡ ಕರುನಾಡು ಡಾ ರಾಜ್‌ ಅವರನ್ನು ನೆನಪಿಸಿಕೊಳ್ಳುತ್ತದೆ. ಇವತ್ತು ಅಂತಲ್ಲ, ಬಹುಶಃ ಯಾವತ್ತೂ ಅಣ್ಣಾವ್ರನ್ನು ಈ ನಾಡು ನೆನಪಿಸಿಕೊಳ್ಳುತ್ತಲೇ ಇರುತ್ತದೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ತಂದೆಯ ಬಗ್ಗೆ ಮಾತನ್ನಾಡಿದ್ದನ್ನು ಶಿವರಾಜ್‌ಕುಮಾr̥f ಅವರು ತನ್ಮಯತೆಯಿಂದ ಕೇಳಿಸಿಕೊಂಡಿದ್ದಾರೆ. 

ದರ್ಶನ್‌ ಬಗ್ಗೆ ರಮ್ಯಾ 'ನೋ ಕಾಮೆಂಟ್ಸ್'.. ಹಳೆಯ ಟ್ವೀಟ್ ಮರೆಯದ ನೆಟ್ಟಿಗರ ಟ್ರೋಲ್‌ ರಗಳೆ..!?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?