
ಈ ಚಿತ್ರಕ್ಕೆ ಕ್ಲೈಮ್ಯಾಕ್ಸ್ ಶೂಟ್ ಮಾಡಿಲ್ಲ. ಇದು ಸೀಕ್ವೇಲ್ ಅಲ್ಲ. ಪ್ರೀಕ್ವೆಲ್. ಬಂಗಲೆ ಕೂಡ ಈ ಚಿತ್ರದಲ್ಲಿ ಪಾತ್ರಧಾರಿ ಹೀಗೆ ತಮ್ಮ ನಿರ್ದೇಶನದ ‘ಶಿವಗಂಗಾ’ ಚಿತ್ರದ ಕುರಿತು ಹೇಳಿಕೊಂಡಿದ್ದು ಚಿತ್ರದ ನಿರ್ದೇಶಕ ಶ್ರೀಮಂಜು. ಇವರಿಗೆ ಇದು ನಿರ್ದೇಶಕರಾಗಿ ಎಂಟನೇ ಸಿನಿಮಾ. ಶ್ರೀಮಂಜು ಮಾತು ಮುಂದುವರಿಯಿತು. ‘ಒಂದು ಬಂಗಲೆಯಲ್ಲಿ ನಡೆಯುವ ಥ್ರಿಲ್ಲರ್ ಕತೆ. ಈ ಚಿತ್ರದ ಕ್ಲೈಮ್ಯಾಕ್ಸ್‌ಗಾಗಿ ಇಡೀ ಗಾಂಧಿನಗರ ಸುತ್ತಿದ್ದೇನೆ. ಯಾಕೆ ಸುತ್ತಿದೆ ಎಂಬುದು ಚಿತ್ರದ ಕೊನೆಯಲ್ಲಿ ಗೊತ್ತಾಗುತ್ತದೆ.
ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಿಕೊಳ್ಳದ ಸಿನಿಮಾ ಹೇಗಿರುತ್ತದೆ ಎಂಬುದಕ್ಕೂ ಉತ್ತರ ದೊರೆಯುತ್ತದೆ ಎಂದರು. ಕುಮಾರ್ ಸಿ ವಿ ಚಿತ್ರದ ನಿರ್ಮಾಪಕ ಕಂ ನಾಯಕ. ನಾನು ಶಿವ ಮತ್ತು ಶ್ಯಾಮ್ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಶೂಟಿಂಗ್ ಮುಗಿದಿದ್ದು, ಈಗ ಪಾರ್ಟ್ 2 ಬರಲಿದೆ. ನಂತರ ಪಾರ್ಟ್ 1 ಬರಲಿದೆ. ನಾನು ಮೂಲತಃ ರೈತ. ಜತೆಗೆ ರಿಯಲ್ ಎಸ್ಟೇಟ್ ಉದ್ಯಮಿ ಕೂಡ. ಸಿನಿಮಾ ನಟನಾಗುವುದು ನನ್ನ ಕನಸು. ಆ ಕನಸು ಈಗ ಈಡೇರಿದೆ.
ನಿರ್ದೇಶಕ ಶ್ರೀಮಂಜು ಅವರು ಹೇಳಿದ ಕಥೆ ಇಷ್ಟವಾಯಿತು. ಕಥೆ ಇಷ್ಟವಾಗಿ ನಾನೇ ನಿರ್ಮಾಣ ಕೂಡ ಮಾಡಿದ್ದೀನಿ. ಚಿತ್ರತಂಡದ ಸದಸ್ಯರ ಸಹಕಾರದಿಂದ ಒಂದೊಳ್ಳೆ ಚಿತ್ರ ಸದ್ಯದಲ್ಲೇ ನಿಮ್ಮ ಮುಂದೆ ಬರಲಿದೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದು ನಿರ್ಮಾಪಕ ಹಾಗೂ ನಾಯಕ ಕುಮಾರ್ ಸಿ.ವಿ. ತಿಳಿಸಿದರು. ರಿವಾನ್ಸಿ ಚಿತ್ರದ ನಾಯಕಿ. ನಾಗರಾಜ್, ನಟರಾಜ್ ಖಳನಾಯಕರು. ಪೊಲೀಸ್ ಪಾತ್ರದಲ್ಲಿ ಸಂಗೀತಾ ನಟಿಸಿದ್ದಾರೆ.
ಇನ್ನು ಶಿವಗಂಗ ಚಿತ್ರ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಹರ್ಷ ಕಾಗೋಡು ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಜನರ ಮನಸ್ಸಿಗೆ ಹತ್ತಿರವಾಗುತ್ತಿದೆ. ಸಿರಿ ಮ್ಯೂಸಿಕ್ ಮೂಲಕ ಹಾಡುಗಳು ಬಿಡುಗಡೆಯಾಗಿದೆ. ಶ್ರೀ ಪಂಚಮಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಕುಮಾರ್ ಸಿ.ವಿ. ನಿರ್ಮಾಣ ಮಾಡುವುದರ ಜತೆಗೆ ನಾಯಕನಾಗೂ ನಟಿಸಿರುವ ಹಾಗೂ ಶ್ರೀಮಂಜು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.