ದೊಡ್ಮನೆ ಕುಡಿಗೆ ದುನಿಯಾ ವಿಜಯ್ ಕೊಟ್ರು ಮಾಸ್ ಸಿನಿಮಾ: ಸಿಟಿಲೈಟ್ಸ್ ಬ್ಯಾಡ್ ಗರ್ಲ್ಸ್!

Published : May 09, 2026, 05:30 PM IST
Duniya Vijay

ಸಾರಾಂಶ

ದುನಿಯಾ ವಿಜಯ್ ಎರಡನೇ ಮಗಳು ಮೋನಿಷಾ ವಿಜಯ್ ಕುಮಾರ್​ ಚೊಚ್ಚಲ ಸಿನಿಮಾ ಇದು. ಹಾಗೇ ವಿಜಯ್ ನಿರ್ದೇಶನದಲ್ಲಿ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರೋ ಚಿತ್ರವೂ ಹೌದು.

ಸ್ಯಾಂಡಲ್​ವುಡ್ ಸಲಗ ದುನಿಯಾ ವಿಜಯ್​ ಸಿಕ್ಕಾಪಟ್ಟೆ ಸಕ್ಸಸ್​ ಟ್ರ್ಯಾಕ್​​ನಲ್ಲಿದ್ದಾರೆ. ಡೈರೆಕ್ಷನ್​​​ ಅಂತ ಬಂದ್ರೆ ವಿಜಯ್​ ಬ್ರ್ಯಾಂಡ್​ ಆಗಿದ್ದಾರೆ. ಕರೆಕ್ಟ್​​ ಆಗಿ ಕಥೆ ಬರೆದು ಕ್ಯಾಮೆರಾ ಇಟ್ಟು ಆ್ಯಕ್ಷನ್ ಅನ್ನೋ ವಿಜಯ್​ ಈಗ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಇವರ ಆ ಹೆಜ್ಜೆ ಹೇಗಿದೆ ಅಂದ್ರೆ ಸಿಟಿ ಎಲ್ಲಾ ಲೈಟ್ ಹೊತ್ತಿಕೊಂಡಿದೆ. ಈ ಸಿಟಿಲೈಟ್ಸ್​​ನಲ್ಲಿ ಬ್ಯಾಡ್​ ಬಾಯ್ಸ್​ ಮಾತ್ರವಲ್ಲ ಬ್ಯಾಡ್​ ಗರ್ಲ್ಸ್​​ ಇದ್ದಾರೆ ಅಂತ ಮಹಾನಟಿ ಉಮಾಶ್ರೀ ಡೈಲಾಗ್ ಹೊಡೆದಿದ್ದಾರೆ. ಹಾಗಾದ್ರೆ ಈ ಸಿಟಿಲೈಟ್ಸ್​​ನ ಸಖತ್ ಸಮಾಚಾರ ಏನು..?

ಸ್ಯಾಂಡಲ್​​ವುಡ್​​ನ ಸ್ಟಾರ್​ ಡೈರೆಕ್ಟರ್ ನಟ ದುನಿಯಾ ವಿಜಯ್ ತನ್ನ ನಿರ್ದೇಶನದಲ್ಲಿ ಸಲಗ, ಭೀಮ ಅನ್ನೋ ಎರಡು ಬಿಗ್ ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ವಿಜಯ್​ ಈಗ ಮೂರನೇ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಪ್ರಯತ್ನದಲ್ಲಿ ನಟ ವಿಜಯ್​​ಗೆ ಎರಡನೇ ಪುತ್ರಿ ಮೋನಿಷಾ ಕೂಡ ಜೊತೆಯಾಗಿದ್ದಾರೆ. ಈ ಅಪ್ಪ ಮಗಳ ಜುಗಲ್ಬಂದಿ ತೆರೆದುಕೊಳ್ತಿರೋ ಸಿನಿಮಾ ಸಿಟಿಲೈಟ್ಸ್. 'ಸಲಗ', 'ಭೀಮ' ಸಿನಿಮಾದ ಬಳಿಕ ಮತ್ತೊಂದು ಸಿನಿಮಾಗೆ ದುನಿಯಾ ವಿಜಯ್ ಆಕ್ಷನ್ ಕಟ್ ಹೇಳಿರೋ ನಿರೀಕ್ಷಿತ ಸಿನಿಮಾ 'ಸಿಟಿಲೈಟ್ಸ್'.

ದುನಿಯಾ ವಿಜಯ್ ಎರಡನೇ ಮಗಳು ಮೋನಿಷಾ ವಿಜಯ್ ಕುಮಾರ್​ ಚೊಚ್ಚಲ ಸಿನಿಮಾ ಇದು. ಹಾಗೇ ವಿಜಯ್ ನಿರ್ದೇಶನದಲ್ಲಿ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರೋ ಚಿತ್ರವೂ ಹೌದು. ಇದೀಗ ಈ ಸಿನಿಮಾದ ಸಖತ್ತಾಗಿರೋ ಬಾವಾ ಬಾವಾ ಹಾಡು ರಿಲೀಸ್ ಆಗಿದೆ. ದುನಿಯಾ ವಿಜಯ್‌ ನಿರ್ದೇಶನದ 'ಸಿಟಿಲೈಟ್ಸ್‌' ಸಿನಿಮಾದ ಮೊದಲ ಹಾಡು ಇದು. "ಬಾವ ಬಾವ.." ಅನ್ನೋ ಸಾಂಗ್ ಮೂಲಕ ದುನಿಯಾ ವಿಜಯ್‌ ಮತ್ತೆ ಹೊಸ ಟ್ರೆಂಡ್ ಹುಟ್ಟಾಕಿದ್ದಾರೆ.

ಕಥೆ ಸಿಕ್ಕಾಪಟ್ಟೆ ಯುನೀಕ್

ವಿಶೇಷ ಅಂದ್ರೆ ವಿಜಯ್ ತನ್ನ ಮಗಳಿಗೆ ಈ ಸಿನಿಮಾ ಮೂಲಕ ಆಕ್ಷನ್ ಕಟ್ ಹೇಳಿರೋದು ಸಿಟಿಲೈಟ್ಸ್​ ಮೇಲಿನ ಕುತೂಹಲ ಹೆಚ್ಚಿಸಿದೆ. ಸಿಟಿಲೈಟ್ಸ್​ ಸಿನಿಮಾದ ಕಥೆ ಸಿಕ್ಕಾಪಟ್ಟೆ ಯುನೀಕ್ ಆಗಿದೆ. ವಿಜಯ್ ಸಿನಿಮಾದಲ್ಲಿ ಇಂಟ್ರೆಸ್ಟಿಂಗ್ ಆಗಿರೋ ಸ್ಟೋರಿಗೇನು ಬರ ಇರೋಲ್ಲ. ಹಾಗೆ ಈ ಸಿನಿಮಾಕ್ಕೆ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಆಯ್ಕೆ ಆಗಿದ್ದೇ ಒಂದು ರೋಚಕ ಕಥೆ. ವಿನಯ್ ಪೆಪ್ಪೆ ಸಿನಿಮಾದಲ್ಲಿ ನಟಿಸುತ್ತಿದ್ರು. ಈ ಸಿನಿಮಾದ ಪ್ರಚಾರಕ್ಕೆ ಬಂದಿದ್ದ ವಿಜಯ್​​​ ಅವರು ನನ್ನ ಸಿನಿಮಾದಲ್ಲಿ ನಟಿಸ್ತೀರಾ ಅಂತ ವಿನಯ್ ರಾಜ್​​ಕುಮಾರ್​ಗೆ ಓಪನ್ ಆಗಿ ಕೇಳಿದ್ರು.

ಆ ಕಮೀಟ್​ಮೆಂಟ್ ಡೆವಲಪ್ ಆಗಿ ಇಂದು ಸಿಟಿಲೈಟ್ಸ್​ನಲ್ಲಿ ವಿನಯ್ ಹೀರೋ ಆಗಿದ್ದಾರೆ. 'ಸಿಟಿಲೈಟ್ಸ್'ನಲ್ಲಿ ಸಿನಿಮಾಗೆ "ಜವಾಬ್ ದಾರಿ... ದೀಪಗಳು ಎಂಬ ಅಡಿಬರಹವಿದೆ. ಹಳ್ಳಿಯಿಂದ ಬೆಂಗಳೂರಿಗೆ ಬಂದ ಇಬ್ಬರು ಏನೆಲ್ಲ ಕಷ್ಟ ಎದುರಿಸುತ್ತಾರೆ ಎನ್ನುವುದೇ ಸಿನಿಮಾದ ಕಥೆ. ಶಿವಸೇನಾ ಕ್ಯಾಮರಾ ಕುಸುರಿ, ದೀಪು ಎಸ್.ಕುಮಾರ್ ಎಡಿಟಿಂಗ್, ಮಾಸ್ತಿ ಸಂಭಾಷಣೆ, ಚರಣ್ ರಾಜ್ ಸಂಗೀತ ಸಿನಿಮಾದ ಗತ್ತು ಹೆಚ್ಚಿಸಿದೆ. ವಿಜಯ್‌ ಕುಮಾರ್‌ ಹಾಗೂ ವಿಕ್ರಂ ಆರ್ಯಾ ನಿರ್ಮಾಣ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರೀ ಮೊತ್ತಕ್ಕೆ 'ಅಯೋಗ್ಯ 2' ಆಡಿಯೋ ಹಕ್ಕು ಖರೀದಿಸಿದ ಆನಂದ್ ಆಡಿಯೋ: ವಿಡಿಯೋ ವೈರಲ್!
ಆಚೆ ಬಂದಾಗ ಮೋನಿಷಾ ಮಗಳು, ಸೆಟ್‌ನಲ್ಲಿ ಅವಳು ನಟಿಯಷ್ಟೇ: ದುನಿಯಾ ವಿಜಯ್‌ ಮಾತು ವೈರಲ್