ಅವಳಿ ಮಕ್ಕಳಿಗೆ ಜನ್ಮಕೊಟ್ಟರಾ ಮೇಘನಾ?  ಸ್ಪಷ್ಟನೆ ಕೊಟ್ಟ ನಟಿ!

Published : Sep 24, 2020, 06:40 PM ISTUpdated : Sep 24, 2020, 06:48 PM IST
ಅವಳಿ ಮಕ್ಕಳಿಗೆ ಜನ್ಮಕೊಟ್ಟರಾ ಮೇಘನಾ?  ಸ್ಪಷ್ಟನೆ ಕೊಟ್ಟ ನಟಿ!

ಸಾರಾಂಶ

ಸುಳ್ಳು ಸುದ್ದಿಕೋರರ ವಿರುದ್ಧ ಮೇಘನಾ ಗರಂ/ ಏಕಾಏಕಿ ಗರಂ ಆದ ಚಿರಂಕೀವಿ ಸರ್ಜಾ ಪತ್ನಿ/ ಯೂಟ್ಯೂಬ್ ಚಾನೆಲ್ ಗಳ ಮೇಲೆ ಗರಂ ಆದ ನಟಿ ಮೇಘನಾ/ ತಮ್ಮ ಬಗ್ಗೆ ಹಬ್ಬಿಸುತ್ತಿರೋ ಸುಳ್ಳು ಸುದ್ದಿ ನೋಡಿ ಆಕ್ರೋಶ/ ಮೇಘನಾಗೆ ಅವಳಿ ಜವಳಿ ಮಗು ಆಗಿದೆ ಎಂದು ಎಲ್ಲೆಡೆ ಸುದ್ದಿ  ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿರೋ ಸುದ್ದಿ ಕಂಡು ಕೋಪಗೊಂಡ ಮೇಘನಾರಾಜ್ 

ಬೆಂಗಳೂರು(ಸೆ. 24)  ನಟಿ ಮೇಘನಾ ರಾಜ್ ಸ್ಪಷ್ಟನೆಯೊಂದನ್ನು ಕೊಟ್ಟಿದ್ದಾರೆ.  ಮೇಘನಾಗೆ ಅವಳಿ ಮಕ್ಕಳಾಗಗಿವೆ, ಮೇಘನಾ ಕಣ್ಣೀರ ಕತೆ ಎಂದೆಲ್ಲಾ ಹರಿದಾಡುತ್ತಿದ್ದ ಸುದ್ದಿಗಳಿಗೆ ಒಂದೆ ಉತ್ತರದಲ್ಲಿ ನಕಲಿ ಎಂದಿದ್ದಾರೆ.  ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಗರಂ ಆಗಿದ್ದಾರೆ. 

ನನ್ನ ಬಗ್ಗೆ ಯಾವುದೇ ಸುದ್ದಿ ಹೊರಬರಬೇಕಾದರೂ ಕುಟುಂಬದ ಮೂಲದಿಂದ ಬರುತ್ತದೆ. ದಯವಿಟ್ಟು ಇಂಥ ವಿಡಿಯೋಗಳನ್ನು ನೋಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಭಿಮಾನಿಗಳು ಸಹ ಪ್ರತಿಕ್ರಿಯೆ ನೀಡಿದ್ದು ನಾವು ನಂಬಲ್ಲ.. ನಿಮ್ಮ ಅಧಿಕೃತ ಖಾತೆಯಿಂದಲೇ ಸುದ್ದಿ ಹೊರಬರಬೇಕು ಎಂದಿದ್ದಾರೆ. ಕೆಲವರು ನಾವು ಇಂಥ ವಿಡಿಯೋ ಓಪನ್ ಮಾಡುವ ಗೋಜಿಗೆ ಹೋಗುವುದಿಲ್ಲ ಎಂದಿದ್ದಾರೆ. 

ಗರ್ಭಿಣಿ ಮೇಘನಾ ಹೇಗಿದ್ದಾರೆ?

ನಟಿ ಮೇಘನಾ ಟ್ವಿಟ್ಟರ್, ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಫೇಕ್ ಸುದ್ದಿಗಳ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ವಿಡಿಯೋದ ಸ್ಕ್ರೀನ್‍ಶಾಟ್ ತೆಗೆದುಕೊಂಡು ಆ ಫೋಟೋವನ್ನು ಪೋಸ್ಟ್ ಮಾಡಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಯೂಟ್ಯೂಬ್ ನಲ್ಲಿರೋ ಸುದ್ದಿಯನ್ನ ನಂಬಬೇಡಿ  ಯಾವುದೇ ಸುದ್ದಿ ಇದ್ದರೂ ನಾನೇ ಖುದ್ದಾಗಿ ತಿಳಿಸುತ್ತೇನೆ. ಅಥವಾ ನಮ್ಮ ಕುಟುಂಬದವ್ರು ತಿಳಿಸುತ್ತಾರೆ. ಯಾರೋ ಹೇಳಿದ ಸುದ್ದಿಯನ್ನ ನಂಬಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

 

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್