RajaMarthanda: ಚಿರು ಪ್ರೀತಿಗೆ 'ರಾಜಮಾರ್ತಾಂಡ' ನೋಡಿ: ಮೇಘನಾ ರಾಜ್‌

By Govindaraj S  |  First Published May 4, 2022, 5:15 PM IST

‘ಚಿರು ಬಹಳ ಇಷ್ಟಪಟ್ಟು ಮಾಡಿದ ಚಿತ್ರ ರಾಜಾ ಮಾರ್ತಾಂಡ. ಚಿರು ಮೇಲಿನ ಸಿಂಪಥಿಗೆ ಈ ಸಿನಿಮಾ ನೋಡಬೇಡಿ, ಅವರ ಮೇಲಿನ ಪ್ರೀತಿಗೆ ಚಿತ್ರ ನೋಡಿ’ ಎಂದು ಮೇಘನಾ ರಾಜ್‌ ಹೇಳಿದ್ದಾರೆ. 


‘ಚಿರು (Chiranjeevi Sarja) ಬಹಳ ಇಷ್ಟಪಟ್ಟು ಮಾಡಿದ ಚಿತ್ರ ರಾಜಾ ಮಾರ್ತಾಂಡ (RajaMarthanda). ಚಿರು ಮೇಲಿನ ಸಿಂಪಥಿಗೆ ಈ ಸಿನಿಮಾ ನೋಡಬೇಡಿ, ಅವರ ಮೇಲಿನ ಪ್ರೀತಿಗೆ ಚಿತ್ರ ನೋಡಿ’ ಎಂದು ಮೇಘನಾ ರಾಜ್‌ (Meghana Raj) ಹೇಳಿದ್ದಾರೆ. ಚಿರಂಜೀವಿ ಸರ್ಜಾ ನಟನೆಯ ‘ರಾಜಾ ಮಾರ್ತಾಂಡ’ ಚಿತ್ರ ಜೂನ್‌ನಲ್ಲಿ ಬಿಡುಗಡೆಯಾಗಲಿದೆ. ಚಿರು ಅವರ ಪಾತ್ರಕ್ಕೆ ಧ್ರುವ ಸರ್ಜಾ (Dhruva Sarja) ಡಬ್ಬಿಂಗ್‌ ಮಾಡಲಿದ್ದಾರೆ.  ಈ ಹಿನ್ನೆಲೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರಾಮ್‌ ನಾರಾಯಣ್‌ (K.Ramnarayan), 'ಚಿರು ಸರ್ ನಮ್ಮ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದರು. 

ಡಬ್ಬಿಂಗ್ (Dubbing) ಮಾಡುವುದು ಮಾತ್ರ ಬಾಕಿಯಿತ್ತು. ನಂತರ ನಡೆಯಬಾರದ ಘಟನೆ ನಡೆದದ್ದು ಎಲ್ಲರಿಗೂ ಗೊತ್ತೇ ಇದೆ. ನಾನು ಚಿರು ಅವರ ಪಾರ್ಥಿವ ಶರೀರ ನೋಡಲು ಹೋದಾಗ, ಧ್ರುವ ಸರ್ಜಾ ಕೇಳಿದ ಮೊದಲ ಮಾತು, ಅಣ್ಣ ಡಬ್ಬಿಂಗ್ ಮುಗಿಸಿದ್ದಾರಾ? ನಾನು ಇಲ್ಲ ಅಂದೆ. ನಾನು ಮಾಡಿಕೊಡುತ್ತೀನಿ ಎಂದರು. ಹಾಗೆ ಟ್ರೇಲರ್‌ಗೆ ಧ್ರುವ ಧ್ವನಿ ನೀಡಿದ್ದಾರೆ. ಸದ್ಯದಲ್ಲೇ ಡಬ್ಬಿಂಗ್ ಪೂರ್ಣಗೊಳಿಸಲಿದ್ದಾರೆ. ದರ್ಶನ್ ಸರ್ ಸಹ ವಾಯ್ಸ್ ಓವರ್ ಕೊಡುವುದಾಗಿ ಹೇಳಿದ್ದಾರೆ. ಮೇಘನಾ ರಾಜ್ ಹಾಗೂ ಸುಂದರ್‌ ರಾಜ್ ಅವರಂತೂ ನಮ್ಮ ಬೆಂಬಲಕ್ಕೆ ಸದಾ ಇದ್ದಾರೆ. ರಾಯನ್ ರಾಜ್ ಸರ್ಜಾ (Raayan Raj Sarja) ಸಹ ನಮ್ಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

Tap to resize

Latest Videos

ಚಿರು ಕೊನೆಯ ಸಿನಿಮಾದಲ್ಲಿ ಪುತ್ರ ರಾಯನ್ ರಾಜ್ ಸರ್ಜಾ

ಇವರೆಲ್ಲರಿಗೂ ಧನ್ಯವಾದ. ಜೂನ್‌ನಲ್ಲಿ ಚಿತ್ರ ತೆರೆಗೆ ಬರಲಿದೆ. ದಿನಾಂಕ ನಿಗದಿಯಾಗಿದೆ. ಆದರೆ ಕೊರೊನಾ ನಾಲ್ಕನೇ ಅಲೆಯ ಪರಿಸ್ಥಿತಿ ನೋಡಿಕೊಂಡು ದಿನಾಂಕ ಘೋಷಣೆ ಮಾಡುತ್ತೇವೆ" ಎಂದರು ನಿರ್ದೇಶಕ ರಾಮ್ ನಾರಾಯಣ್. 'ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಬೇಕು ಅಂದುಕೊಂಡಿದ್ದೇವೆ. ಚಿರು ಅವರ 101 ಅಡಿ ಎತ್ತರದ ಕಟೌಟ್ ನಿಲ್ಲಿಸಲಿದ್ದೇವೆ ಹಾಗೂ ರಾಯನ್ ರಾಜ್ ಸರ್ಜಾ ಅವರ 51 ಅಡಿ  ಎತ್ತರದ ಕಟೌಟ್ ಸಹ ನಿಲ್ಲಿಸಲಿದ್ದೀವಿ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ' ಎಂದು ನಿರ್ಮಾಪಕ ಶಿವಕುಮಾರ್ ಹೇಳಿದರು. ನಾಯಕಿಯರಾದ ದೀಪ್ತಿ ಸಾತಿ, ಋುಷಿಕಾ ರಾಜ್‌, ಸುಂದರ್‌ ರಾಜ್‌ ಮನೀಶ್‌, ಸಚಿನ್‌ ಉಪಸ್ಥಿತರಿದ್ದರು.

ಗೀತ ರಚನೆಕಾರರಾಗಿ ಜನಪ್ರಿಯರಾಗಿರುವ ಕೆ.ರಾಮ್‌ ನಾರಾಯಣ್‌ 'ರಾಜಮಾರ್ತಾಂಡ' ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಶಿವಕುಮಾರ್‌ ಎನ್‌ ನಿರ್ಮಾಣ ಮಾಡುತ್ತಿದ್ದು, ಈ ಹಿಂದೆ ಚಿರು ಜೊತೆ 'ಅಜಿತ್‌' (Ajith) ಸಿನಿಮಾ ಮಾಡಿದ್ದರು. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ ಹಾಗೂ ಧರ್ಮವಿಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿರು ಪತ್ನಿ ಮೇಘನಾ ರಾಜ್‌ ಕೂಡ ಈ ಚಿತ್ರದ ಮೇಲೆ ವಿಶೇಷ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಮೊದಲ ಟೀಸರ್‌ನ್ನು ಕೂಡಾ ರಾಯನ್ ರಾಜ್ ಸರ್ಜಾ ಬಿಡುಗಡೆ ಮಾಡಿದ್ದ. 

RajaMarthanda Song Release: 'ಸಂಭಾಳಿಸು ಗುಟ್ಟಾಗಿ ನೀ' ಎಂದು ಹಾಡಿದ ಚಿರಂಜೀವಿ ಸರ್ಜಾ!

ಇನ್ನು  ಹಿಂದೆ ನಿಖಿಲ್‌ ಕುಮಾರಸ್ವಾಮಿ ಜೊತೆಗೆ 'ಜಾಗ್ವಾರ್‌' ಸಿನಿಮಾದಲ್ಲಿ ನಟಿಸಿದ್ದ ದೀಪ್ತಿ ಸತಿ 'ರಾಜಮಾರ್ತಾಂಡ' ಸಿನಿಮಾದಲ್ಲಿ ಚಿರುಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ಮೇಘಶ್ರೀ, 'ಟಗರು' ಖ್ಯಾತಿಯ ತ್ರಿವೇಣಿ ರಾವ್ ಕೂಡ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಭಜರಂಗಿ ಲೋಕಿ, ದೇವರಾಜ್, ಚಿಕ್ಕಣ್ಣ, ಸುಮಿತ್ರಾ, ಶಂಕರ್ ಅಶ್ವತ್ಥ್‌, ವಿನೀತ್ ಕುಮಾರ್ ಮುಂತಾದವರ ತಾರಾಬಳಗವಿದೆ. ಜೆ.ಕೆ. ಗಣೇಶ್ ಕ್ಯಾಮೆರಾ ಕೈ ಚಳಕ, ವೆಂಕಟೇಶ್ ಯು.ಡಿ.ವಿ. ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನವಿರುವ 'ರಾಜಮಾರ್ತಾಂಡ' ಚಿತ್ರಕ್ಕೆ ಭೂಷಣ್ ಹಾಗೂ ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ. 'ರಾಜಮಾರ್ತಾಂಡ' ಚಿತ್ರವು ಆ್ಯಕ್ಷನ್‌ ಜೊತೆಗೆ ಸೆಂಟಿಮೆಂಟ್‌ ಅಂಶಗಳೊಂದಿಗೆ ಸಾಗುವ ಸಿನಿಮಾವಾಗಿದ್ದು, ತನ್ನ ಸಾಮರ್ಥ್ಯದಿಂದ ಏನು ಬೇಕಾದರೂ ಪಡೆದುಕೊಳ್ಳುವ ವ್ಯಕ್ತಿಯಾಗಿ ಚಿರು ಕಾಣಿಸಿಕೊಂಡಿದ್ದಾರೆ.

click me!