Kabza Movie: ಶ್ರೀಯಾ ಶರಣ್‌ ದಂಪತಿ ಜೊತೆ ಉಪ್ಪಿ ಸೆಲ್ಫಿ

Published : May 04, 2022, 04:00 PM IST
Kabza Movie: ಶ್ರೀಯಾ ಶರಣ್‌ ದಂಪತಿ ಜೊತೆ ಉಪ್ಪಿ ಸೆಲ್ಫಿ

ಸಾರಾಂಶ

ಬಹುಭಾಷಾ ನಟಿ ಶ್ರೀಯಾ ಶರಣ್‌, ಅವರ ಪತಿ ಆ್ಯಂಡ್ರೆ ಕೊಶ್ಚೀವ್‌ ಅವರು ‘ಕಬ್ಜ’ ಶೂಟಿಂಗ್‌ ಸೆಟ್‌ನಲ್ಲೇ ಉಪ್ಪಿ ಜತೆಗೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಈ ಫೋಟೋ ವೈರಲ್‌ ಆಗಿದೆ. ನಿರ್ದೇಶಕ ಆರ್‌ ಚಂದ್ರು ‘ಕಬ್ಜ’ ಚಿತ್ರವನ್ನು ಒಂಭತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಇದೇ ವರ್ಷ ಬಿಡುಗಡೆ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಬಹುಭಾಷಾ ನಟಿ ಶ್ರೀಯಾ ಶರಣ್‌ (Shriya Saran), ಅವರ ಪತಿ ಆ್ಯಂಡ್ರೆ ಕೊಶ್ಚೀವ್‌ (Andrei Koscheev) ಅವರು ‘ಕಬ್ಜ’ (Kabza) ಶೂಟಿಂಗ್‌ ಸೆಟ್‌ನಲ್ಲೇ ಉಪ್ಪಿ (Upendra) ಜತೆಗೆ ಸೆಲ್ಫಿ (Selfie) ತೆಗೆಸಿಕೊಂಡಿದ್ದಾರೆ. ಈ ಫೋಟೋ ವೈರಲ್‌ ಆಗಿದೆ. ನಿರ್ದೇಶಕ ಆರ್‌ ಚಂದ್ರು ‘ಕಬ್ಜ’ ಚಿತ್ರವನ್ನು ಒಂಭತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಇದೇ ವರ್ಷ ಬಿಡುಗಡೆ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಸಿನಿಮಾ ರಿಲೀಸ್‌ ಕುರಿತು ನಿರ್ದೇಶಕ ಆರ್‌ ಚಂದ್ರು (R Chandru), ‘ಇಲ್ಲಿವರೆಗೂ 140 ದಿನ ಚಿತ್ರೀಕರಣ ಮಾಡಿದ್ದೇವೆ. ಬಹುತೇಕ ಶೂಟಿಂಗ್‌ ಮುಗಿದೆ. ಮಂಗಳೂರಿನಲ್ಲಿ ನಾಲ್ಕು ದಿನದ ಕ್ಲೈಮ್ಯಾಕ್ಸ್‌ ಹಾಗೂ ಒಂದು ಹಾಡಿನ ಚಿತ್ರೀಕರಣ ಮುಗಿದರೆ ಶೂಟಿಂಗ್‌ ಸಂಪೂರ್ಣವಾಗಿ ಮುಕ್ತಾಯ ಆಗಲಿದೆ. ಅಂದುಕೊಂಡಿದ್ದಕ್ಕಿಂತ ಬೇಗ ಚಿತ್ರೀಕರಣ ಮುಗಿದಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಕೂಡ ಮುಗಿಯುತ್ತಿವೆ. ಹೀಗಾಗಿ ಇದೇ ವರ್ಷ ಚಿತ್ರವನ್ನು ಬಿಡುಗಡೆ ಮಾಡುವುದು ಪಕ್ಕಾ. 2022ಕ್ಕೇ ನಮ್ಮ ಚಿತ್ರ ಬರುವುದು ಸತ್ಯ’ ಎನ್ನುತ್ತಾರೆ.

Kabza ಸಿನಿಮಾದಿಂದ ಸುದೀಪ್ ಔಟ್; ನಿರ್ದೇಶಕ R ಚಂದ್ರು ಸ್ಪಷ್ಟನೆ

ಉಪ್ಪಿ-ಕಿಚ್ಚ ಚಿತ್ರದಲ್ಲಿ ರಾಣಿಯಾದ ಬಹುಭಾಷಾ ತಾರೆ: ಆರ್‌.ಚಂದ್ರು ನಿರ್ದೇಶನದ, ಉಪೇಂದ್ರ ಹಾಗೂ ಕಿಚ್ಚ ಸುದೀಪ್ (Kichcha Sudeep) ಕಾಂಬಿನೇಶನ್‌ನ 'ಕಬ್ಜ' ಚಿತ್ರದ ಇಬ್ಬರು ನಾಯಕಿಯರ ಪೈಕಿ ಒಬ್ಬರ ಆಗಮನವಾಗಿದೆ. ಮಧುಮತಿ ಪಾತ್ರದ ಮೂಲಕ ಕನ್ನಡಕ್ಕೆ ಆಗಮಿಸಿರುವುದು ಖ್ಯಾತ ನಟಿ ಶ್ರೀಯಾ ಶರಣ್‌.  'ನಮ್ಮ ಕಬ್ಜ ಚಿತ್ರದಲ್ಲಿ ಇಬ್ಬರು ನಾಯಕಿಯರು ಇದ್ದಾರೆ. ಪ್ಯಾನ್‌ ಇಂಡಿಯಾ ನಟಿಯನ್ನೇ ಕನ್ನಡಕ್ಕೆ ಕರೆದುಕೊಂಡು ಬಂದಿದ್ದೇನೆ. ಶ್ರೀಯಾ ಶರಣ್‌ ಚಿತ್ರದ ಕತೆ ಕೇಳಿ ಥ್ರಿಲ್ಲಾಗಿ ಈ ಚಿತ್ರ ಒಪ್ಪಿಕೊಂಡಿದ್ದಾರೆ. 

ರಾಣಿಯಾಗಿ ಸ್ಯಾಂಡಲ್‌ವುಡ್‌ಗೆ ಲ್ಯಾಂಡ್‌ ಆಗಿರುವ ಇವರ ಫಸ್ಟ್‌ಲುಕ್‌ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ದೊಡ್ಡ ಸಿನಿಮಾ. ಹೀಗಾಗಿ ತುಂಬಾ ಸಮಯ ಹಿಡಿಯುತ್ತಿದೆ. ಸತತವಾಗಿ ಎರಡು ವರ್ಷಗಳಿಂದ ಚಿತ್ರೀಕರಣ ನಡೆಯುತ್ತಿದೆ. ಈಗ ಕೊನೆಯ ಹಂತಕ್ಕೆ ಬಂದಿದ್ದೇವೆ. ಏಳು ಭಾಷೆಗಳಿಗೆ ಕನ್ನಡ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸುತ್ತಿದ್ದೇನೆಂಬ ಹೆಮ್ಮೆ ನನಗೆ ಇದೆ' ಎನ್ನುತ್ತಾರೆ ಆರ್‌ ಚಂದ್ರು. ರವಿ ಬಸ್ರೂರು ಸಂಗೀತ, ಶಿವಕುಮಾರ್‌ ಕಲಾ ನಿರ್ದೇಶನ ಇದೆ.

ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ನಟಿಸಿರುವ ಶ್ರೀಯಾ ಬಹಳ ದಿನಗಳ ಬಳಿಕ ಕನ್ನಡಕ್ಕೆ ಹಿಂತಿರುಗಿರುವ ಅವರು, ಕಬ್ಜ ಸಿನಿಮಾದ ಕಥೆ ಕೇಳಿ ಸಂತೋಷದಿಂದ ಈ ಪ್ರಾಜೆಕ್ಟ್‌ಗೆ ಸೈನ್‌ ಮಾಡಿದ್ದಾರೆ. ಅವರ ಫಸ್ಟ್‌ಲುಕ್‌ ಇದೀಗ ರಿವೀಲ್‌ ಆಗಿದ್ದು, ಉಪ್ಪಿಗೆ ಶ್ರೀಯಾ ತಕ್ಕ ಜೋಡಿ ಎಂಬುದು ಪ್ರೇಕ್ಷಕರ ಅನಿಸಿಕೆ. 'ಕೆಜಿಎಫ್‌' ಸಿನಿಮಾದ ಬಳಿಕ ಕಬ್ಜ ಬೇರೆ ಬೇರೆ ಚಿತ್ರರಂಗದಲ್ಲಿ ಸಾಕಷ್ಟು ಕ್ರೇಜ್‌ ಕ್ರಿಯೇಟ್‌ ಆಗಿದೆ. ಮುಂಬೈನಲ್ಲಿ ಬಹುಬೇಡಿಕೆಯಿರುವ ಈ ಚಿತ್ರ ಕನ್ನಡದ ತಂತ್ರಜ್ಞರು ಕಾರ್ಯ ನಿರ್ವಹಿಸಿದ್ದಾರೆ ಎಂಬುದು ಹೆಗ್ಗಳಿಕೆ. ಮತ್ತಷ್ಟು ಕನ್ನಡದ ತಂಡ ಇದೇ ರೀತಿ ಮಿಂಚಲಿ ಎಂಬುದು ಸಿನಿಪಂಡಿತರ ಅನಿಸಿಕೆ.

Kichcha Sudeep: ಕಬ್ಜ ಚಿತ್ರದ ರೆಟ್ರೋ​ ಲುಕ್‌ ರಿವೀಲ್​ ಮಾಡಿದ ಅಭಿನಯ ಚಕ್ರವರ್ತಿ

ಪ್ಯಾನ್‌ ಇಂಡಿಯಾ ಸಿನಿಮಾ ಎಂದಮೇಲೆ ಸಾಕಷ್ಟು ಸಮಯ ತೆಗೆದುಕೊಳ್ಳೋದು ಸರ್ವೇ ಸಾಮಾನ್ಯ. ಇದೀಗ ಬಿಡುಗಡೆಗೆ ಸಿದ್ಧವಿರುವ 'ಆರ್‌ಆರ್‌ಆರ್‌' ಬರೋಬ್ಬರಿ ನಾಲ್ಕು ವರ್ಷಗಳ ಕಾಲ ತೆಗೆದುಕೊಂಡಿದೆ. ಹಾಗೆಯೇ 'ಕೆಜಿಎಫ್‌' (KGF) ಮೂರು ವರ್ಷಗಳ ಸಮಯ ತೆಗೆದುಕೊಂಡಿದೆ. ಕಬ್ಜ ಕೂಡ ಸತತ ಎರಡು ವರ್ಷಗಳಿಂದ ಶೂಟಿಂಗ್‌ ನಡೆಸುತ್ತಿದ್ದು, ಸದ್ಯ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಇತ್ತೀಚೆಗೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ (Shivarajkumar) ಸಹ ಸಿನಿಮಾ ಬೇಗ ರಿಲೀಸ್‌ ಮಾಡುವಂತೆ ಒತ್ತಾಯಿಸಿದ್ದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್