
ಬಿಗ್ ಬಾಸ್ 10 (Bigg Boss 10) ರ ಸ್ಪರ್ಧಿ ಹಾಗೂ ನಟಿ ತನಿಷಾ ಕುಪ್ಪಂಡ (actress Tanisha Kuppanda), ಶೂಟಿಂಗ್ ವೇಳೆ ತಲೆ ಸುತ್ತಿ ಬಿದ್ದಿದ್ದಾರೆ. ತನಿಷಾ ಕುಪ್ಪಂಡ ಸದ್ಯ ಕೋಣ ಚಿತ್ರ (Kona Film)ದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಮಯದಲ್ಲಿ ಅವರು ಬಿಂದಿಗೆ ಹಿಡಿದು ನೀರು ತರಲು ಹೊರಟಿದ್ರು. ಇನ್ನೇನು ನೀರು ಹಿಡಿಬೇಕು ಅನ್ನುವಷ್ಟರಲ್ಲಿ ಅವರು ತಲೆ ಸುತ್ತಿ ಬಿದ್ದಿದ್ದಾರೆ. ತನಿಷಾ ತಲೆಸುತ್ತಿ ಬಿದ್ದಿದ್ದು ರಿಯಲ್ ಆಗಿ ಅಲ್ಲ. ಸಿನಿಮಾ ಶೂಟಿಂಗ್ ವೇಳೆ. ಸೋಶಿಯಲ್ ಮೀಡಿಯಾದಲ್ಲಿ ತನಿಷಾ ಕುಪ್ಪಂಡ ಶೂಟಿಂಗ್ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅದ್ರಲ್ಲಿ ಸೀರೆಯುಟ್ಟು, ಬಿಂದಿಗೆ ಹಿಡಿದಿರುವ ತನಿಷಾ ಅವರನ್ನು ನೀವು ಕಾಣ್ಬಹುದು. ನಿರ್ದೇಶಕರ ಸೂಚನೆಯಂತೆ ತನಿಷಾ ಕುಪ್ಪಂಡ, ನೀರು ಹಿಡಿಯಲು ಹೋಗ್ತಾರೆ. ಅಲ್ಲೇ ಕುಸಿದು ಬೀಳ್ತಾರೆ.
ಬೆಳಿಗ್ಗೆ ತನಿಷಾ ಹಾಗೂ ನಟಿ ನಮ್ರತಾ, ಕೋಣ ಶೂಟಿಂಗ್ ಗೆ ಬಂದಿದ್ದರು. ಶಾರ್ಟ್ ಡ್ರೆಸ್ ಧರಿಸಿ, ಮೇಕಪ್ ಇಲ್ಲದೆ ಬಂದಿದ್ದ ನಮ್ರತಾ ಮತ್ತು ತನಿಷಾ, ಕ್ಯಾಮರಾ ನೋಡ್ತಿದ್ದಂತೆ ನಾಚಿಕೊಂಡಿದ್ದರು. ನಮ್ರತಾ ಮುಖ ಮುಚ್ಚಿಕೊಂಡಿದ್ದರು. ಆ ನಂತ್ರ ತನಿಷಾ ಸೀರೆಯುಟ್ಟು ಸೆಟ್ ಗೆ ಬಂದಿದ್ದಲ್ಲದೆ, ಕ್ಯಾಮರಾ ಮೆನ್ ಗೆ ಕ್ಯಾಮರಾ ಹಿಡಿಯಿರಿ ಎನ್ನುತ್ತ ತಮಾಷೆ ಮಾಡಿದ್ರು. ಕೋಣ ಶೂಟಿಂಗ್ ಎಂಜಾಯ್ ಮಾಡ್ತಿರುವ ತನಿಷಾರ ಅನೇಕ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.
ಅಯ್ಯಯ್ಯೋ...ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡೋಕೆ ರಶ್ಮಿಕಾ ಮಂದಣ್ಣ ಇಷ್ಟೋಂದ ಹಣ ಕೇಳಿದ್ರಾ?
ಕೋಣ ಚಿತ್ರವನ್ನು ತನಿಷಾ ನಿರ್ಮಾಣ ಮಾಡ್ತಿದ್ದಾರೆ. ತನಿಷಾ ಕುಪ್ಪಂಡ ಅವರ ನಿರ್ಮಾಣದ ಮೊದಲ ಚಿತ್ರ ಕೋಣ. ಈ ಚಿತ್ರದಲ್ಲಿ ತನಿಷಾ ಕುಪ್ಪಂಡ, ನಟ ಕೋಮಲ್ ಕಾಣಿಸಿಕೊಂಡಿದ್ದಾರೆ. ಹಿಂದಿನ ವರ್ಷವೇ ಚಿತ್ರದ ತಯಾರಿ ಚುರುಕಾಗಿತ್ತು. ಈ ವರ್ಷ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ಚಿತ್ರದಲ್ಲಿ ಕೋಮಲ್ ಪಾತ್ರ ರಿವೀಲ್ ಆಗಿದೆ. ಈ ಚಿತ್ರವನ್ನು ಹರಿಕೃಷ್ಣ ನಿರ್ದೇಶನ ಮಾಡ್ತಿದ್ದಾರೆ. ಕುಪ್ಪಂಡ ಪ್ರೊಡಕ್ಷನ್ ನಲ್ಲಿ ಮೂಡಿ ಬರ್ತಿರುವ ಮೊದಲ ಚಿತ್ರ ಇದಾಗಿದೆ. ತನಿಷಾ ಕೆಲಸಕ್ಕೆ ಅವರ ಸ್ನೇಹಿತರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಟೀಸರ್ ಬಿಡುಗಡೆ ವೇಳೆ ತನಿಷಾ ಈ ವಿಷ್ಯವನ್ನು ಹೇಳಿದ್ದರು. ಕೋಣ ಅದ್ರಲ್ಲಿ ಕುಪ್ಪಂಡ ಮತ್ತು ಕೋಮಲ್ ಸೇರಿದ್ದಾರೆ ಎಂದಿದ್ದರು. ಇದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು ಇಲ್ಲಿ ಕೋಮಲ್ ಜೊತೆ ಕೋಣನನ್ನು ವೀಕ್ಷಕರು ನೋಡಲಿದ್ದಾರೆ. ಇದು ಡಾರ್ಕ್ ಕಾಮಿಡಿ ಚಿತ್ರವಾಗಿದೆ. ಕೋಣ ಚಿತ್ರವನ್ನು ಐದು ಭಾಷೆಯಲ್ಲಿ ತೆರೆಗೆ ತರಲು ಚಿತ್ರ ತಂಡ ತಯಾರಿ ನಡೆಸುತ್ತಿದೆ.
ತಮಿಳು ಚಿತ್ರಕ್ಕೆ ಸೈನ್ ಮಾಡಿದ ಮೇಘಾ ಶೆಟ್ಟಿ; ಒಬ್ಬೊಬ್ಬರೇ ಹೋಗಿ ಎಂದ ನೆಟ್ಟಿಗರು
ಬಿಗ್ ಬಾಸ್ ಕನ್ನಡ 10 ರ ಸೀಸನ್ ನಲ್ಲಿ ಕಾಣಿಸಿಕೊಂಡಿದ್ದ ತನಿಷಾ, 14 ವಾರಗಳ ಕಾಲ ಮನೆಯಲ್ಲಿ ಇದ್ದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬರ್ತಿದ್ದಂತೆ ತಮ್ಮ ವೃತ್ತಿಯಲ್ಲಿ ಸಾಕಷ್ಟು ಬದಲಾವಣೆ ಮಾಡ್ಕೊಂಡು, ಬ್ಯುಸಿಯಾಗಿದ್ದಾರೆ. ಅವರು ನಟನೆ ಜೊತೆ ಬ್ಯುಸಿನೆಸ್ ಶುರು ಮಾಡಿದ್ದಾರೆ. ತನಿಷಾ ಸಿಲ್ವರ್ ಜ್ಯುವೆಲರಿ ಶಾಪ್ ತೆರೆದಿರುವ ತನಿಷಾ, ಈಗ ಸಿನಿಮಾ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಅವ್ರ ಪ್ರೊಡಕ್ಷನ್ ಹೌಸ್ ನಲ್ಲಿ ಸಿನಿಮಾ ಜೊತೆ ಆಲ್ಬಂ ಸಾಂಗ್ ಗಳು ಹೊರ ಬರುವ ಸಾಧ್ಯತೆ ಇದೆ.
ಮಂಗಳಗೌರಿ ಸೀರಿಯಲ್ ಮೂಲಕ ಬಣ್ಣದ ಬದುಕು ಶುರು ಮಾಡಿದ ತನಿಷಾ ಇಂತಿ ನಿಮ್ಮ ಆಶಾ, ಪ್ರೀತಿ ಎಂದರೇನು ಸೇರಿದಂತೆ ಅನೇಕ ಸೀರಿಯಲ್ ನಲ್ಲಿ ಮಿಂಚಿದ್ದಾರೆ. ಬೇರೆ ಭಾಷೆಗಳ ಸೀರಿಯಲ್ ನಲ್ಲೂ ನಟಿಸಿ ಸೈ ಎನ್ನಿಸಿಕೊಂಡಿರುವ ತನಿಷಾರಿಗೆ ದುಂಡುಪಾಳ್ಯ ಮೊದಲ ಚಿತ್ರ. ತನಿಷಾ, ಸೋಶಿಯಲ್ ಮೀಡಿಯಾದಲ್ಲೂ ಬ್ಯುಸಿಯಾಗಿದ್ದು, ಫ್ಯಾನ್ಸ್ ಗಾಗಿ ವಿಡಿಯೋ ಹಂಚಿಕೊಳ್ತಿರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.