ಚಂದನ್ ಶೆಟ್ಟಿ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ'ಗೆ ಗುಡ್ ರೆಸ್ಪಾನ್ಸ್ ; ಗೆಲ್ಲಬಹುದೇ ಹೊಸಬರ ಸಿನಿಮಾ..?

By Shriram Bhat  |  First Published Jul 19, 2024, 1:03 PM IST

ಚಂದನ್ ಶೆಟ್ಟಿ ಮುಖ್ಯ ಭೂಮಿಕೆಯ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದಲ್ಲಿ ಇನ್ನೂ ನಾಲ್ಕು ಹೊಸ ನಟನಟಿಯರು ಸಹನಟರಾಗಿ ಪಾತ್ರ ಪೋಷಣೆ ಮಾಡಿದ್ದಾರೆ. ಸ್ಟೂಡೆಂಟ್ ಪಾತ್ರದಲ್ಲಿ ನಟಿಸಿರುವ ಆ ಹೊಸಬರು ಕೂಡ ಉತ್ತಮವಾಗಿ ನಟಿಸಿದ್ದು ಪ್ರೇಕ್ಷಕರಿಂದ ಸಾಕಷ್ಟು ಹೊಗಳಿಕೆ ಪಡೆಯುತ್ತಿದ್ದಾರೆ. 


ಚಂದನ್ ಶೆಟ್ಟಿ ನಟನೆಯ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರವು ಇಂದು, ಅಂದರೆ 19 ಜುಲೈ 2024ರಂದು ಕರ್ನಾಟಕ ಸೇರಿದಂತೆ ಪ್ರಪಂಚದಾದ್ಯಂತ ಬಿಡುಗಡೆಯಾಗಿದೆ. ಅರುಣ್ ಅಮುಕ್ತ ನಿರ್ದೇಶನದ ಈ ಚಿತ್ರವು ಸಂಪೂರ್ಣವಾಗಿ ಹೊಸಬರದೇ ಚಿತ್ರವಾಗಿದ್ದರೂ ಬಹಳಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಇಂದು ಬಿಡುಗಡೆ ಆಗಿರುವ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರವು ಉತ್ತಮ ಓಪನಿಂಗ್‌ ಪಡೆದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿಂಗರ್ ಚಂದನ್ ಶೆಟ್ಟಿ ಮೊಟ್ಟಮೊದಲ ಬಾರಿಗೆ ನಟಿಸಿರುವ ಈ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರವು ಈ ಕಾರಣಕ್ಕೆ ಕೂಡ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಪ್ರಮುಖ ಪಾತ್ರವೊಂದರಲ್ಲಿ ಚಂದನ್ ಶೆಟ್ಟಿ ನಟಿಸುವ ಮೂಲಕ ನಟರಾಗಿ ಬೆಳೆಯುತ್ತಿದ್ದಾರೆ. 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಪ್ರೀಮಿಯರ್ ಶೋವನ್ನು ದುಬೈನಲ್ಲಿ ಚಿತ್ರತಂಡ ಆಯೋಜಿಸಿತ್ತು. ಅಲ್ಲಿನ ಪ್ರೇಕ್ಷಕರಿಂದ ಗುಡ್ ರೆಸ್ಪಾನ್ಸ್‌ ಪಡೆದಿರುವ ಚಿತ್ರತಂಡ, ಅದರಿಂದ ಸಾಕಷ್ಟು ಖುಷಿಗೊಂಡಿದೆ. ಇದೀಗ, ಸಿನಿಮಾ ಬಿಡುಗಡೆ ಆಗಿದ್ದು ಫಲಿತಾಂಶ ಇನ್ನೇನು ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ.

Tap to resize

Latest Videos

ಹಿಂದಿನ ಬೆಂಚಿನ ಹುಡುಗಿ ಮಾನ್ಯ ಗೌಡ ಮುಂದೆ ಸಾಲುಸಾಲು ಚಾನ್ಸ್; ಏನಿದು ಜಾದೂ!

ನಟ ಚಂದನ್ ಶೆಟ್ಟಿ, ಡೈರೆಕ್ಟರ್ ಅರುಣ್ ಅಮುಕ್ತ ಸೇರಿದಂತೆ ಎಲ್ಲರೂ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ. ಸಿಕ್ಕ ಮಾಹಿತಿ ಪ್ರಕಾರ, ಚಿತ್ರವು ಸ್ಯಾಂಡಲ್‌ವುಡ್ ಪ್ರೇಕ್ಷಕರಿಂದ ಪ್ರಶಂಸೆ ಪಡೆದಿದೆ. ಈ ಮೂಲಕ ಹೊಸಬರ ಚಿತ್ರವೊಂದು ನಿರೀಕ್ಷೆ ಹುಟ್ಟಿಸಿದ್ದು ಮಾತ್ರವಲ್ಲ, ಅದನ್ನು ನಿಜವಾಗಿಸುತ್ತಿದೆ ಎನ್ನಬಹುದು. ಚಂದನ್ ಶೆಟ್ಟಿ ಮುಖ್ಯ ಭೂಮಿಕೆಯ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದಲ್ಲಿ ಇನ್ನೂ ನಾಲ್ಕು ಹೊಸ ನಟನಟಿಯರು ಸಹನಟರಾಗಿ ಪಾತ್ರ ಪೋಷಣೆ ಮಾಡಿದ್ದಾರೆ.

ಸ್ಟೂಡೆಂಟ್ ಪಾತ್ರದಲ್ಲಿ ನಟಿಸಿರುವ ಆ ಹೊಸಬರು ಕೂಡ ಉತ್ತಮವಾಗಿ ನಟಿಸಿದ್ದು ಪ್ರೇಕ್ಷಕರಿಂದ ಸಾಕಷ್ಟು ಹೊಗಳಿಕೆ ಪಡೆಯುತ್ತಿದ್ದಾರೆ. ಹೊಸಬರು ಮಾತ್ರವಲ್ಲದೇ ಹಲವು ಹಿರಿಯ ನಟನಟಿಯರೂ ಕೂಡ ಪೋಷಕ ಪಾತ್ರದಲ್ಲಿ ನಟಿಸಿದ್ದು, ಎಲ್ಲರ ಅಭಿನಯಕ್ಕೆ ಫುಲ್ ಅಂಕಗಳು ದೊರಕಿವೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ಸದ್ಯ ಅರುಣ್ ಅಮುಖ್ತ ಹಾಗೂ ಚಂದನ್ ಶೆಟ್ಟಿ ಜೋಡಿಯ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರವು ರಿಳಿಸ್ ಆಗಿ ಫಲಿತಾಂಶ ಎದುರು ನೋಡುತ್ತಿದೆ.

ಕೆಲವೊಂದನ್ನು ಲೈಫಲ್ಲಿ ಕಳ್ಕೊಂಡಾಗ ದೇವರು ಮತ್ತಿನ್ನೇನೋ ಕೊಡ್ತಾನೆ ಎಂದಿದ್ಯಾಕೆ ಚಂದನ್ ಶೆಟ್ಟಿ?

ಈ ಸಿನಿಮಾ ಏನಾದರೂ ಸೂಪರ್ ಹಿಟ್ ದಾಖಲಿಸಿದರೆ ಇತ್ತೀಚೆಗೆ ಗೆಲುವು ಕಾಣದೇ ಕಂಗಾಲಾಗಿರುವ ಕನ್ನಡ ಚಿತ್ರನಗರಿಗೆ 'ಮರಳುಗಾಡಿನಲ್ಲಿ ಓಯಸಿಸ್' ದೊರಕಿದಂತೆ ಆಗುತ್ತದೆ. ಜೊತೆಗೆ, ಹೊಸಬರಿಗೆ ಉತ್ತಮ ಬ್ಯಾಕ್ ಬೋನ್ ಸಿಕ್ಕಂತಾಗುತ್ತದೆ. ಸ್ಟಾರ್ ಸಿನಿಮಾಗಳು ಥಿಯೇಟರ್‌ಗೆ ಬರುತ್ತಿಲ್ಲ, ಹೊಸಬರ ಸಿನಿಮಾಗಳು ಗೆಲ್ಲುತ್ತಿಲ್ಲ ಎಂಬ ಟ್ರೆಂಡ್ ಈ ಸಿನಿಮಾ ಮುರಿಯಬಹುದು ಎನ್ನಲಾಗುತ್ತಿದೆ, ಸ್ವಲ್ಪ ಕಾಲ ಕಾದು ನೋಡಬೇಕಷ್ಟೇ!

click me!