ತೆಲುಗು ಚಿತ್ರರಂಗದ ವಾಣಜ್ಯ ಮಂಡಳಿಯಿಂದ 'ರಾಬರ್ಟ್' ಗೆ ಅಭಯ / ಸೌತ್ ಇಂಡಿಯನ್ ಫಿಲಂ ಚೇಂಬರ್ ಅಸೋಶಿಯೇಶನ್ ಸಭೆ/ ತೆಲುಗಿನಲ್ಲಿ ಥಿಯೇಟರ್ ಸಮಸ್ಯೆ ಕಂಡ ರಾಬರ್ಟ್/ ಸಮಸ್ಯೆ ಸರಿ ಮಾಡಲು ದರ್ಶನ್ ಮನವಿ
ಚೆನ್ನೈ/ ಬೆಂಗಳೂರು (ಜ. 31) ತೆಲುಗು ಚಿತ್ರರಂಗದ ವಾಣಿಜ್ಯ ಮಂಡಳಿ 'ರಾಬರ್ಟ್' ಗೆ ಅಭಯ ನೀಡಿದೆ. ಆದಷ್ಡು ಬೇಗ ಸಮಸ್ಯೆ ಬಗೆ ಹರಿಸಿ ಕೊಡುತ್ತೇವೆ ಎಂದು ತೆಲುಗು ಚಿತ್ರರಂಗ ವಾಣಿಜ್ಯ ಮಂಡಳಿ ಹೇಳಿದೆ.
ರಾಬರ್ಟ್ ಸಿನಿಮಾ ತೆಲುಗಿನಲ್ಲಿ ಬಿಡುಗಡೆ ಚರ್ಚೆಗೆ ಕಾರಣವಾಗಿತ್ತು. ಸೌತ್ ಇಂಡಿಯನ್ ಫಿಲಂ ಚೇಂಬರ್ ಅಸೋಶಿಯೇಶನ್ ಸಭೆ ನಡೆಸಿತ್ತು. ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಭಾಗಿಯಾಗಿತ್ತು.
ರಾಬರ್ಟ್ ಗೆ ಅಡ್ಡಗಾಲು ಬೀಳಲು ಕಾರಣವೇನು?
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳಿಂದ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿಕೊಂಡಿದ್ದರು. ಬಹು ನಿರೀಕ್ಷೆಯ ರಾಬರ್ಟ್ ಸಿನಿಮಾ ತೆಲುಗಿನಲ್ಲಿ ಬಿಡುಗಡೆ ಮಾಡುವುದು ಸರಳವಾಗಿರಲಿಲ್ಲ. ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಅಸಮಾಧಾನ ಹೊರಹಾಕಿದ್ದರು. ಇಂಥಹ ವ್ಯವಸ್ಥೆ ನಿರ್ಮಾಣ ಆದರೆ ನಮ್ಮ ಯಂಗ್ ಸ್ಟರ್ ಗಳು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದರು.
ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರ 'ರಾಬರ್ಟ್' ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಆದರೆ ತೆಲುಗಿನಲ್ಲಿ ಥಿಯೇಟರ್ ಸಮಸ್ಯೆ ಎದುರಾಗಿದೆ. ಇದೇ ಕಾರಣಕ್ಕೆ ಪ್ರಶ್ನೆಗಳು ಎದ್ದಿವೆ.