2ನೇ ಮದುವೆ ಬೇಕಾ ಎಂದು ಕೀಳು ಕಾಮೆಂಟ್ ಮಾಡುತ್ತಿದ್ದವರಿಗೆ ಉತ್ತರ ಕೊಟ್ಟ ಚೈತ್ರಾ ವಾಸುದೇವನ್

Published : Feb 11, 2025, 12:14 PM ISTUpdated : Feb 11, 2025, 12:58 PM IST
2ನೇ ಮದುವೆ ಬೇಕಾ ಎಂದು ಕೀಳು ಕಾಮೆಂಟ್ ಮಾಡುತ್ತಿದ್ದವರಿಗೆ ಉತ್ತರ ಕೊಟ್ಟ ಚೈತ್ರಾ ವಾಸುದೇವನ್

ಸಾರಾಂಶ

ಖ್ಯಾತ ನಿರೂಪಕಿ ಚೈತ್ರಾ ವಾಸುದೇವನ್ ಮಾರ್ಚ್‌ನಲ್ಲಿ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಪ್ಯಾರಿಸ್‌ನಲ್ಲಿ ಉಂಗುರ ಬದಲಿಸಿಕೊಂಡ ವಿಡಿಯೋ ಹಂಚಿಕೊಂಡ ಬಳಿಕ ಭಾವಿ ಪತಿಯ ಫೋಟೋ ಬಹಿರಂಗಪಡಿಸಿದರು. ನಕಾರಾತ್ಮಕ ಕಾಮೆಂಟ್‌ಗಳಿಗೆ ಚೈತ್ರಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಜೀವನದ ಕಹಿ ಘಟನೆಗಳಿಂದ ಹೊರಬಂದು ಹೊಸ ಜೀವನ ಆರಂಭಿಸುತ್ತಿರುವುದಾಗಿ ತಿಳಿಸಿದ್ದಾರೆ.

ಕನ್ನಡದ ಖ್ಯಾತ ನಿರೂಪಕಿ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ಚೈತ್ರಾ ವಾಸುದೇವನ ಮಾರ್ಚ್‌ ತಿಂಗಳಿನಲ್ಲಿ ಎರಡನೇ ಮದುವೆ ಆಗಲು ಸಜ್ಜಾಗಿದ್ದಾರೆ. ಪ್ಯಾರಿಸ್‌ ಟವರ್‌ನ ಬಳಿ ಉಂಗುರ ತೋರಿಸುವ ವಿಡಿಯೋ ಹಾಕಿದ್ದರು ಅದಾದ ಮೇಲೆ ಜನರ ಪ್ರಶ್ನೆ ಹೆಚ್ಚಾಗುತ್ತಿದ್ದಂತೆ ಭಾವಿ ಪತಿಯ ಫೋಟೋ ರಿವೀಲ್ ಮಾಡಿದ್ದರು. ಫೋಟೋ ಮತ್ತು ವಿಡಿಯೋಗೆ ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದವರಿಗೆ ಚೈತ್ರಾ ತುಂಬಾ ಪ್ರೀತಿಯಿಂದ ಪ್ರತಿಕ್ರಿಯೆ ನೀಡಿದ್ದಾರೆ.

'ಜನರ ಕಾಮೆಂಟ್ ನೋಡಿ ಕಲಿಯುವುದು ತಿದ್ದಿಕೊಳ್ಳುವುದು ಏನಾದರೂ ಇದ್ದೇ ಇರುತ್ತದೆ. ಆದರೆ ನನ್ನ ಮದುವೆ ಅನೌನ್ಸ್ ಮಾಡಿದ ಮೇಲೆ 99.9% ಜನರು ಖುಷಿ ವ್ಯಕ್ತ ಪಡಿಸಿದ್ದಾರೆ ಹಾಗೂ ಸಪೋರ್ಟ್ ಮಾಡಿದ್ದಾರೆ. ಎರಡನೇ ಮದುವೆ ಬೇಕಾ ಎಂದು ಕಾಮೆಂಟ್ ಮಾಡಿದವರಿಗೆ ನಾನು ರಿಯಾಕ್ಟ್ ಮಾಡಿಲ್ಲ ಏಕೆಂದರೆ ಅದು ಸತ್ಯ. ಆಗಿರುವುದಕ್ಕೆ ಏನೂ ಬದಲಾಯಿಸಲು ಆಗಲ್ಲ. ಜೀವನದಲ್ಲಿ ಅಕ್ಸಿಡೆಂಟ್‌ ನಡೆಯುತ್ತಿರುತ್ತದೆ ಅದನ್ನು ಮರೆತು ನಾವು ಮುಂದಕ್ಕೆ ಒಳ್ಳೆಯ ವ್ಯಕ್ತಿಯಾಗಿ ಇರುವ ಪ್ರಯತ್ನ ಮಾಡಬೇಕು. Death, Divorce and Disease ಈ ಮೂರು ಜೀವನದ ತುಂಬಾ ಡೇಂಜರ್....ಮೊದಲೇ ತುಂಬಾ ನೊಂದು ಬಂದಿರುತ್ತೀವಿ ಇದರ ನಡುವೆ ಅವರು ತುಂಬಾ ಪ್ರೀತಿ ಕೊಡಬೇಕು ಅದೂ ಮೀರಿ ನೋವು ಮಾಡುವ ಕಾಮೆಂಟ್ ಬಂದಾಗ ಏನೂ ಮಾಡಲು ಆಗಲ್ಲ.  ನೆಗೆಟಿವ್ ಕಾಮೆಂಟ್ ಮಾಡುವವರು ಅವರ ಮೈಂಡ್‌ಸೆಟ್‌ನ ಎಕ್ಸಪ್ರೆಸ್ ಮಾಡ್ತಾರೆ. ನನ್ನನ್ನು ಗೌರವಿಸುವವರನ್ನು ನಾನು ಗೌರವಿಸುತ್ತೀನಿ. ಯಾರು ನನಗೆ ತುಂಬಾ ಒಳ್ಳೆಯದನ್ನು ವಿಶ್ ಮಾಡುತ್ತಿದ್ದಾರೆ ಅವರಿಗೆ ಧನ್ಯವಾದಗಳನ್ನು ಹೇಳುತ್ತೀನಿ' ಎಂದು ನ್ಯಾಷನಲ್ ಟಿವಿ ಸಂದರ್ಶನದಲ್ಲಿ ಚೈತ್ರಾ ವಾಸುದೇವನ್ ಮಾತನಾಡಿದ್ದಾರೆ. 

ಪುಟ್ಟ ಕಂದಮ್ಮನನ್ನು ಊರು ಜಾತ್ರೆಗೆ ಕರ್ಕೊಂಡು ಹೋದ್ರು ಕವಿತಾ ಗೌಡ; ನಾನು ಎಂದು ಕಾಮೆಂಟ್ ಮಾಡಿದ ಚಂದು!

'ಮದುವೆ ಮಾರ್ಚ್‌ ತಿಂಗಳಿನಲ್ಲಿ ನಡೆಯುತ್ತದೆ. ಮನೆಯಲ್ಲಿ ಮಾತುಕತೆ ಮಾಡಿದ್ದೀವಿ ಆಗ ಉಂಗುರ ಬದಲಾಯಿಸಿಕೊಂಡಿದ್ದೀವಿ. ಅವರ ಕುಟುಂಬ ತುಂಬಾನೆ ದೊಡ್ಡದು. ಒಬ್ಬ ವ್ಯಕ್ತಿ ಜೀವನದಲ್ಲಿ ಕಹಿ ಘಟನೆಗಳು ನಡೆಯುತ್ತದೆ ಹಾಗೆಯೇ ನನ್ನ ಜೀವನದಲ್ಲಿ ದೊಡ್ಡ ಆಕ್ಸಿಡೆಂಟ್ ಆಗಿದೆ ಈಗ ಅದರಿಂದ ಹೊರ ಬಂದಿದ್ದೀನಿ ಈಗ ಕೆಟ್ಟ ದಿನಗಳಿಂದ ಹೊರ ಬಂದು ಹೊಸ ಒಳ್ಳೆ ಜೀವನ ಶುರು ಮಾಡುತ್ತಿದ್ದೀನಿ' ಎಂದು ಚೈತ್ರಾ ಹೇಳಿದ್ದಾರೆ.  

ಫೇಮಸ್ ಆಗ್ತಿದ್ದಂತೆ ಕೂದಲು ತುಂಡು ಮಾಡಿಸಿಕೊಂಡ ಭವ್ಯಾ ಗೌಡ ಸಹೋದರಿ ದಿವ್ಯಾ ; ಫೋಟೋ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ