'ಮಾರ್ನಮಿ' ಹಬ್ಬ ಮಾಡೋಕೆ ಬರುತ್ತಿದ್ದಾರೆ ನಟಿ ಚೈತ್ರಾ ಆಚಾರ್‌: ಏನಿದು ಹೊಸ ಕತೆ

By Kannadaprabha News  |  First Published Sep 20, 2024, 5:17 PM IST

ಕಿರುತೆರೆ ನಟ ರಿತ್ವಿಕ್‌ ಮತ್ತು ‘ಟೋಬಿ’ ಖ್ಯಾತಿಯ ಚೈತ್ರಾ ಜೆ ಆಚಾರ್‌ ನಾಯಕ, ನಾಯಕಿಯಾಗಿರುವ ಹೊಸ ಸಿನಿಮಾ ‘ಮಾರ್ನಮಿ’ಯ ಟೈಟಲ್ ಟೀಸರ್‌ ಬಿಡುಗಡೆಯಾಗಿದೆ. ರಿಶಿತ್ ಶೆಟ್ಟಿ ಈ ಚಿತ್ರದ ನಿರ್ದೇಶಕರು. ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ.
 


ಕಿರುತೆರೆ ನಟ ರಿತ್ವಿಕ್‌ ಮತ್ತು ‘ಟೋಬಿ’ ಖ್ಯಾತಿಯ ಚೈತ್ರಾ ಜೆ ಆಚಾರ್‌ ನಾಯಕ, ನಾಯಕಿಯಾಗಿರುವ ಹೊಸ ಸಿನಿಮಾ ‘ಮಾರ್ನಮಿ’ಯ ಟೈಟಲ್ ಟೀಸರ್‌ ಬಿಡುಗಡೆಯಾಗಿದೆ. ರಿಶಿತ್ ಶೆಟ್ಟಿ ಈ ಚಿತ್ರದ ನಿರ್ದೇಶಕರು. ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ರಿಶಿತ್‌, ‘ಕರಾವಳಿ ಭಾಗದ ಹುಲಿವೇಷದ ಹಿನ್ನೆಲೆ ಹಾಗೂ ಹುಲಿವೇಷದ ಸಂಸ್ಕೃತಿಯ ಎಳೆ ಚಿತ್ರದಲ್ಲಿದೆ. ಇದೊಂದು ಲವ್‌ಸ್ಟೋರಿ. ಆ್ಯಕ್ಷನ್, ಎಮೋಷನ್, ಕಾಮಿಡಿಯ ಕಥಾಹಂದರವಿದೆ’ ಎಂದಿದ್ದಾರೆ.

ನಟಿ ಚೈತ್ರಾ ಆಚಾರ್‌, ‘ಕಥೆ ಬಹಳ ಇಷ್ಟವಾಯ್ತು. ಟೆಕ್ನಿಕಲ್ ಆಗಿ ಚಿತ್ರ ಸ್ಟ್ರಾಂಗ್ ಇದೆ. ರಿಶಿತ್ ಕಥೆ ಹೇಳಲು ಬಂದಾಗ ಎಲ್ಲಿಯೂ ಬೋರ್ ಆಗಲಿಲ್ಲ. ಇಷ್ಟು ಬೇಗ ಮುಗಿಯಿತಾ ಅನಿಸಿತು. ಸಿನಿಮಾ ಬಗ್ಗೆ ಎಕ್ಸೈಟ್ ಆಗಿದ್ದೇನೆ’ ಎಂದರು. ನಾಯಕ ರಿತ್ವಿಕ್‌, ‘ದಸರಾ ಸಂದರ್ಭವನ್ನು ತುಳುವಿನಲ್ಲಿ ಮಾರ್ನಮಿ ಎಂದು ಕರೆಯುತ್ತಾರೆ’ ಎಂದು ಹೇಳಿದರು. ಸಂಗೀತ ನಿರ್ದೇಶಕ ಚರಣ್ ರಾಜ್‌ ಇದ್ದರು. ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ಯಶ್ ಶೆಟ್ಟಿ, ಮೈಮ್ ರಾಮದಾಸ್, ಚೈತ್ರ ಶೆಟ್ಟಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Tap to resize

Latest Videos

undefined

ಎಲ್ಲರೂ ರಾಜ್ ಕುಮಾರ್ ಆಗಲು ಸಾಧ್ಯವಿಲ್ಲ: ದರ್ಶನ್ ವಿಷಯದಲ್ಲಿ ಕೋಪ ಸ್ವಲ್ಪ ಮಿತಿ ಮೀರಿತು ಎಂದ ಗುರುಕಿರಣ್!

ಹಂಸಲೇಖ ನಟಿಸಿರುವ ಚಿತ್ರ ಲುಕ್ ಬ್ಯಾಕ್: ಕಳರಿ ಪಯಟ್ಟು ಕುರಿತ ಕತೆ ಹೊಂದಿರುವ ಸಿನಿಮಾ ‘ಲುಕ್ ಬ್ಯಾಕ್’ ಸೆ.27ರಂದು ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದ್ದು, ಟ್ರೇಲರ್‌ಗೆ ಮೆಚ್ಚುಗೆ ದೊರೆತಿದೆ. ಟ್ರೇಲರ್ ಬಿಡುಗಡೆ ಮಾಡಿದ ನಾದಬ್ರಹ್ಮ ಹಂಸಲೇಖ, ‘ನಾನು ಇದರಲ್ಲಿ ಪೋಷಕ ಪಾತ್ರ ನಿರ್ವಹಿಸಿದ್ದೇನೆ. ಈ ಸಿನಿಮಾದ ಉದ್ದೇಶ ಮತ್ತು ಆಶಯ ಚೆನ್ನಾಗಿದೆ. ಈ ಕಾಲದ ಹೆಣ್ಣು ಮಕ್ಕಳು ರಕ್ಷಣೆಯ ದೃಷ್ಟಿಯಿಂದ ಈ ಕಲೆ ಕಲಿಯಬೇಕು’ ಎಂದು ಹೇಳಿದರು.

ಈ ಚಿತ್ರವನ್ನು ರಂಜನ್ ಮುಲಾರತ್ ನಿರ್ದೇಶನ, ನಟನೆ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಈ ಬಗ್ಗೆ ರಂಜನ್, ‘ಚಿತ್ರದಲ್ಲಿ ಕಳರಿ ಪಯಟ್ಟು ಕಲೆಯೇ ಹೀರೋ. ಕಳರಿ ಪಯಟ್ಟು ಕಲೆಯಲ್ಲಿ ಪದ್ಮಶ್ರೀ ಅವಾರ್ಡ್ ಪಡೆದಿರುವ 84 ವರ್ಷದ ಮೀನಾಕ್ಷಿಯಮ್ಮ ಚಿತ್ರದಲ್ಲಿ ನಟಿಸಿರುವುದು ನಮ್ಮ ಶಕ್ತಿ’ ಎಂದರು. ಉಪಾಸನಾ ಗುರ್ಜನ್ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಛಾಯಾಗ್ರಾಹಕ ಕೃಷ್ಣ ನಾಯಕರ್, ನಿರ್ದೇಶಕರ ಪುತ್ರ ಆರ್ಯನಾಥ್ ಮುಲಾರತ್, ಪತ್ನಿ ಸಿನಿ ರಂಜನ್ ಇದ್ದರು.

ಹಾರರ್‌ ಅಂದ್ರೆ ಭಯ, ಗಂಡನ ಪಕ್ಕ ಕೂತು 'ಹಗ್ಗ' ಸಿನಿಮಾ ನೋಡಿದೆ: ಅನು ಪ್ರಭಾಕರ್‌

ಕಾನೂನು ಪದವಿ ಕಲಿಯುವ ಆಸೆ ಇರುವ ತರುಣನ ಕತೆ ಕರ್ಕಿ: ‘ಕರ್ಕಿ’ ಸಿನಿಮಾ ಇಂದು (ಸೆ.20) ತೆರೆಗೆ ಬರುತ್ತಿದೆ. ತಮಿಳಿನ ಪವಿತ್ರನ್‌ ನಿರ್ದೇಶನ, ಪ್ರಕಾಶ್ ಪಳನಿ ನಿರ್ಮಾಣದ ಚಿತ್ರವಿದು. ಜಯಪ್ರಕಾಶ್ ಹಾಗೂ ಮೀನಾಕ್ಷಿ ಚಿತ್ರದ ಜೋಡಿ. ಸಾಧು ಕೋಕಿಲ, ಬಾಲ ರಾಜವಾಡಿ, ಮಿಮಿಕ್ರಿ ಗೋಪಿ, ಯತಿರಾಜ್, ಸ್ವಾತಿ ಗುರುದತ್, ವಾಲೆ ಮಂಜುನಾಥ್‌ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಹೃಷಿಕೇಶ್ ಕ್ಯಾಮೆರಾ, ಕವಿರಾಜ್ ಸಾಹಿತ್ಯ ಚಿತ್ರಕ್ಕಿದೆ. ಶಿಕ್ಷಣ, ಜಾತಿ ವ್ಯವಸ್ಥೆ, ಪ್ರೀತಿ-ಪ್ರೇಮದ ಅಂಶಗಳ ಸುತ್ತಾ ಸಾಗುವ ರಿಯಾಲಿಸ್ಟಿಕ್‌ ಕತೆಯನ್ನು ಹೇಳುವ ಸಿನಿಮಾ ಇದು.

click me!