60 ಅಡಿ ಎತ್ತರದ ಪ್ರಿಯಾಂಕಾ- ಸ್ಯಾಂಡಲ್​ವುಡ್​​ನಲ್ಲೇ ಡಬಲ್​ ಇತಿಹಾಸ ಸೃಷ್ಟಿಸಿದ 'ಕ್ಯಾಪ್ಚರ್'​!

By Suvarna News  |  First Published Oct 18, 2023, 4:09 PM IST

ನಟಿ ಪ್ರಿಯಾಂಕಾ ಉಪೇಂದ್ರ ಅವರು ನಟಿಸಿರುವ ಕ್ಯಾಪ್ಚರ್​ ಚಿತ್ರದ ಪೋಸ್ಟರ್​ ರಿಲೀಸ್​ ಆಗಿದ್ದು, ಈ ಮೂಲಕ ಡಬಲ್​ ಇತಿಹಾಸ ಸೃಷ್ಟಿಯಾಗಿದೆ. ಏನದು?
 


ಇತ್ತೀಚಿನ ವರ್ಷಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ  ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra). ಇದೀಗ ಇನ್ನೊಂದು ವಿಭಿನ್ನ ರೀತಿಯಲ್ಲಿ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ. ಮತ್ತೊಂದು ಭಯಾನಕ ಚಿತ್ರದಲ್ಲಿ ಇವರು ಕಾಣಿಸಿಕೊಳ್ಳಲಿದ್ದು, ಅದರ ಪೋಸ್ಟರ್​ ರಿಲೀಸ್​ ಆಗಿದೆ. ಈ ಪೋಸ್ಟರ್​ ಮೂಲಕ ಸ್ಯಾಂಡಲ್​ವುಡ್​ ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಅಂದಹಾಗೆ, ಈ ಚಿತ್ರದ ಹೆಸರು ಕ್ಯಾಪ್ಚರ್​ (Capture).  ಸದ್ಯ ಕ್ಯಾಪ್ಚರ್ ತಂಡ ವಿಭಿನ್ನವಾಗಿ ಟೈಟಲ್ ಪೋಸ್ಟರ್ ರಿಲೀಸ್ ಮಾಡಿ ದಾಖಲೆ ಮಾಡಿದೆ.  ಅಭಿಮಾನಿಗಳ ಮಧ್ಯೆಯೇ ಕ್ಯಾಪ್ಚರ್ ಸಿನಿಮಾದ ಪೋಸ್ಟರ್ ಲಾಂಚ್ ಮಾಡಿದ್ದು ವಿಶೇಷವಾಗಿತ್ತು. ಇಲ್ಲಿ ದಾಖಲೆಯಾಗಿರುವುದು ಏನೆಂದರೆ,  ಚಿತ್ರದ ಪೋಸ್ಟರ್​ 60 ಅಡಿ ಕಟೌಟ್​ ಹಾಕಲಾಗಿದೆ. ಸ್ಯಾಂಡಲ್‌ವುಡ್‌ನಲ್ಲೇ ಮೊದಲ ಬಾರಿಗೆ ನಾಯಕಿಯೊಬ್ಬರ ಪೋಸ್ಟರ್ ಅನ್ನು ಇಷ್ಟು ದೊಡ್ಡ ಮಟ್ಟದಲ್ಲಿ 60 ಅಡಿಯ ಕಟೌಟ್ ನಿಲ್ಲಿಸುವ ಮೂಲಕ ಬಿಡುಗಡೆ ಮಾಡಿರುವುದು ಇತಿಹಾಸ ಸೃಷ್ಟಿಯಾಗಿದೆ.  ಜೊತೆಗೆ ಕನ್ನಡ ಸಿನಿಮಾರಂಗದಲ್ಲಿಯೇ ಇದೊಂದು ವಿನೂತನವಾದ ಪ್ರಯತ್ನವಾಗಿದೆ. ಪ್ರಿಯಾಂಕಾ ಉಪೇಂದ್ರ ಅವರ 60 ಅಡಿ ಕೌಟೌಟ್ ಪೋಸ್ಟರ್​ ಅನ್ನು ವೀರೇಶ್​​ ಚಿತ್ರಮಂದಿರದ ಮುಂದೆ ನಿಲ್ಲಿಸಲಾಗಿದ್ದು, ಸಿನಿಮಾದ ಟೈಟಲ್ ಪೋಸ್ಟರ್ ರಿವೀಲ್ ಮಾಡಲಾಯಿತು.

ಪ್ರಿಯಾಂಕಾ ಉಪೇಂದ್ರ ಅವರು ಇದಾಗಲೇ ಹಲವು ಭಯಾನಕ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.  ವಿಭಿನ್ನ ಪಾತ್ರಗಳ ಮೂಲಕ ವಿಶೇಷವಾಗಿರುವ  ಸ್ಟೈಲ್​ ಹೊಂದಿದ್ದಾರೆ. ಈಗ ಮತ್ತೊಮ್ಮೆ ಹಾರರ್​ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಫ್ಯಾನ್ಸ್​ ಖುಷಿಯಾಗಿದ್ದಾರೆ.  ಈ ಸಿನಿಮಾಗೆ ಮಮ್ಮಿ, ದೇವಕಿ ಸಿನಿಮಾ ಖ್ಯಾತಿಯ ನಿರ್ದೇಶಕ ಲೋಹಿತ್ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಿಯಾಂಕಾ ಮತ್ತು ಲೋಹಿತ್ ಕಾಂಬಿನೇಷನ್‌ನ 3ನೇ ಸಿನಿಮಾ ಇದಾಗಿದ್ದು, ಕ್ಯಾಪ್ಟರ್ ಸಿನಿಮಾವನ್ನು ರವಿರಾಜ್ ಅವರು ತಮ್ಮ ಶ್ರೀ ದುರ್ಗಪರಮೇಶ್ವರಿ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಈ ಬ್ಯಾನರ್‌ನಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದಾಗಿದೆ.

Tap to resize

Latest Videos

​ಯಶ್​ ಕಾಲಿಗೆ ಪೋಲಿಯೋ ಸೋಂಕು? ವೈರಲ್​ ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​- ಅವ್ರು ಹೇಳ್ತಿರೋದೇನು?

ಚಿತ್ರದ ಕುರಿತು ಹೇಳುವುದಾದರೆ,  ನಿರ್ದೇಶಕ ಲೋಹಿತ್ ಅವರಿಗೆ ಇಂಥ ಹಾರರ್​ ಚಿತ್ರ ಮಾಡುವುದು ಎಂದರೆ ತುಂಬಾ ಇಷ್ಟ. ಮತ್ತೊಮ್ಮೆ ಇಂಥ ಚಿತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.  ಭಯ, ಕುತೂಹಲ, ಟ್ವಿಸ್ಟ್‌ಗಳಿಂದ ಈ ಚಿತ್ರ ಕೂಡಿದ್ದು,  ವಿಭಿನ್ನ ಅನುಭವ ನೀಡಲಿದೆ ಎನ್ನುವುದು ಅವರ ಅಭಿಮಯ.  ಸಂಪೂರ್ಣ ಸಿನಿಮಾ ಸಿಸಿ ಟಿವಿ ಕಾನ್ಸೆಪ್ಟ್‌ನಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಇದು ಕೂಡ  ವಿಶ್ವದಲ್ಲಿಯೇ ಮೊದಲ ಬಾರಿ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಬಲ್​ ಇತಿಹಾಸ ಸೃಷ್ಟಿಯಾಗಿದೆ. 

ಅಂದಹಾಗೆ, ಪ್ರಿಯಾಂಕಾ ಅವರ ಪತಿ ಹಾಗೂ ಚಂದನವನದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕ್ಯಾಪ್ಚರ್ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ್ದಾರೆ. ಚಿತ್ರಕ್ಕೆ ಎಸ್ ಪಾಂಡಿಕುಮಾರ್ ಕ್ಯಾಮೆರಾ ವರ್ಕ್ ಮಾಡಿದ್ದು ರವಿಚಂದ್ರನ್  ಸಂಕಲನವಿದೆ.  ಎಲ್ಲವೂ ಅಂದುಕೊಂಡಂತೆ ನಡೆದರೆ ಕ್ಯಾಪ್ಚರ್​  ಬರುವ ನವೆಂಬರ್‌ನಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಪ್ರಿಯಾಂಕಾ ಮತ್ತು ಲೋಹಿತ್ ಕಾಂಬಿನೇಷನ್‌ನ ಹ್ಯಾಟ್ರಿಕ್ ಸಿನಿಮಾ ಇದಾಗಿದ್ದು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಅಬ್ಬಬ್ಬಾ! ಮೈತುಂಬಾ ಲಕಲಕ ಚಿನ್ನದ ಆಭರಣ.. ರಮೇಶ್​ ಅರವಿಂದ್​ ಬಂಗಾರದ ಮನುಷ್ಯ ಆಗಿದ್ದೇಕೆ?

click me!