ದರ್ಶನ್ 'ಕರಿಯ' ರೀ-ರಿಲೀಸ್, ಪ್ರಸನ್ನ ಮುಂದೆ ಬಾಡಿ ವೋರ್ನ್ ಕ್ಯಾಮೆರಾ ಪೊಲೀಸ್ ನಿಯೋಜನೆ!

By Shriram Bhat  |  First Published Aug 30, 2024, 11:55 AM IST

ಪ್ರಸನ್ನ ಥಿಯೇಟರ್‌ ಮುಂದೆ ಕರ್ತವ್ಯದಲ್ಲಿರುವ ಪೊಲೀಸರು ಬಾಡಿ ವೋರ್ನ್ ಕ್ಯಾಮೆರಾ ಹಾಕಿಕೊಂಡು ಕೆಲಸ ಮಾಡ್ತಿದ್ದಾರೆ ಎನ್ನಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ಆಗಬಾರದು ಎಂದು ಪೊಲೀಸರು ಆನ್ ರೆಕಾರ್ಡ್ ವಿಡಿಯೋ ಮಾಡುತ್ತಿದ್ದಾರೆ. ಆದರೆ, ಅಲ್ಲಿ ಬಂದಿರುವ ಮೀಡಿಯಾ ಬಗ್ಗೆ..


ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಥಿಯೇಟರ್‌ ಬಲಿ ಹತ್ತು ಜನ ಪೊಲೀಸರನ್ನು ನಿಯೋಜಿಸಲಾಗಿದೆ. ನಟ ದರ್ಶನ್ ಅಭಿನಯದ ಹಳೆಯ ಸಿನಿಮಾ 'ಕರಿಯ' (Kariya) ರೀ-ರಿಲೀಸ್ ಆಗಿದ್ದು, ಅಲ್ಲಿ ಅಭಿಮಾನಿಗಳ ದಂಡು ಮೇಳೈಸಿದೆ. ಈ ಕಾರಣಕ್ಕೆ ಅಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯಕೂಡದು ಎಂದು ಅಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಒಂದಲ್ಲ ಎರಡಲ್ಲ, ಬರೋಬ್ಬರಿ ಹತ್ತು ಪೊಲೀಸರು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಪ್ರಸನ್ನ ಥಿಯೇಟರ್‌ ಮುಂದೆ ಕರ್ತವ್ಯದಲ್ಲಿರುವ ಪೊಲೀಸರು ಬಾಡಿ ವೋರ್ನ್ ಕ್ಯಾಮೆರಾ ಹಾಕಿಕೊಂಡು ಕೆಲಸ ಮಾಡ್ತಿದ್ದಾರೆ ಎನ್ನಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ಆಗಬಾರದು ಎಂದು ಪೊಲೀಸರು ಆನ್ ರೆಕಾರ್ಡ್ ವಿಡಿಯೋ ಮಾಡುತ್ತಿದ್ದಾರೆ. ಆದರೆ, ಅಲ್ಲಿ ಬಂದಿರುವ ಮೀಡಿಯಾ ಬಗ್ಗೆ ದರ್ಶನ್ ಫ್ಯಾನ್ಸ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಜತೆಗೆ, ದರ್ಶನ್ ಪರಪ್ಪನ ಆಗ್ರಹಾರದ ಜೈಲಿನಲ್ಲಿ ಸಿಗರೆಟ್ ಹಾಗು ಕಾಫೀ ಮಗ್ ಹಿಡಿದು ಕೂತಿರೋ ಪೋಸ್ಟರ್ ಹಾಕಿ ಮೀಡಿಯಾಗೆ ಕೌಂಟರ್ ಕೊಟ್ಟಿದ್ದಾರೆ ಎನ್ನಲಾಗಿದೆ.

Latest Videos

undefined

ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ರಿಪ್ಪನ್ ಸ್ವಾಮಿ ಆಗ್ಬಿಟ್ರು, ಫ್ಯಾನ್ಸ್ ಶಾಕ್ ಆಗೋದ್ರು!

ತಮ್ಮ ಡಿ ಬಾಸ್ 'ಕರಿಯ' ಚಿತ್ರ ನೋಡಲು ಪ್ರಸನ್ನ ಥಿಯೇಟರ್‌ ಮುಂದೆ ಜಮಾಯಿಸಿರುವ ಅಭಿಮಾನಿಗಳು ಬಹಳಷ್ಟು ಘೋಷಣೆ ಕೂಗುತ್ತಿದ್ದಾರೆ. ಕಿಂಗ್ ಇಸ್ ಆಲ್ವೇಸ್ ಕಿಂಗ್, ದಿಸ್ ಈಸ್ ನಾಟ್ ಎ ಬ್ಯಾನರ್ ದೀಸ್ ಈಸ್ ಎ ಹ್ಯಾಂಡ್ ಮೇಡ್ ಆರ್ಟ್ ನಂಬರ್ 511, 
ಏನ್ರೀ ಮೀಡಿಯಾ, ಜಸ್ಟೀಸ್, ಡಿಗ್ನೀಟಿ, ಈಕ್ವಾಲಿಟಿ , ಪೀಸ್, ಖೈದಿ ನಂಬರ್ 6016, ಮೀಡಿಯಾಗಳು ದರ್ಶನ್ ಅವರನ್ನು ಕ್ಯಾಮರಾ  ಹಿಡಿದು ಕವರ್ ಮಾಡ್ತಿರೋ ತರ ಆರ್ಟ್, ಹೀಗೆ ಹತ್ತು ಹಲವು ಸಂಗತಿಗಳನ್ನ ಅಲ್ಲಿ ನಡೆದಿವೆ.  

ಆರ್ಟ್ ಬೈ ಪ್ರಮೋದ್ ಬರೆದಿರುವ ಪೋಸ್ಟರ್ ಪ್ರಸನ್ನ ಥಿಯೇಟರ್ ಮೇಲೆ ಹಾಕಲಾಗಿತ್ತು. ಜೊತೆಗೆ,  ದರ್ಶನ್ ಫ್ಯಾನ್ಸ್ 'ಎನ್ರಿ ಮೀಡಿಯಾ' ಅಂತ ಹಾಕಿರೋ ಬ್ಯಾನರ್ ಕೂಡ ಪ್ರಸನ್ನ ಥಿಯೇಟರ್ ಮುಂದೆ ಹಾಕಲಾಗಿತ್ತು. ಅದನ್ನೆಲ್ಲ ಪೊಲೀಸರು ತೆಗೆಸಿದ್ದಾರೆ ಎನ್ನಲಾಗಿದೆ. ಅಭಿಮಾನಿಗಳು ಥಿಯೇಟರ್ ಒಳಗೆ ಹೊಗ್ತಿದ್ದ ಹಾಗೇ ಬ್ಯಾನರ್‌ಗಳನ್ನು ಪೊಲೀಸರು ತೆಗೆಸಿದ್ದಾರೆ ಎನ್ನಲಾಗಿದೆ. ಹಾಗೇ, ಖೈದಿ ನಂಬರ್ಸ್ ಹಾಕಿದ್ದ ಬ್ಯಾನರ್ ಅನ್ನು ಕೂಡ  ಮಾಗಡಿ ರಸ್ತೆ ಪೊಲೀಸರು ತೆಗೆಸಿದ್ದಾರೆ. 

ಈ ವೇಳೆ 'ದರ್ಶನ್ ಫ್ಯಾನ್ಸ್'ಗೆ ಮಾಗಡಿ ರಸ್ತೆ ಪೊಲೀಸ್ ಒಬ್ಬರು ಕ್ಲಾಸ್ ತೆಗೆದುಕೊಂಡಿದ್ದಾರೆ. 'ನಿಮ್ಮಂತ ಕೆಟ್ಟ ಅಭಿಮಾನಿಗಳಿಂದಲೇ ದರ್ಶನದ ಅವ್ರಿಗೆ ಕೆಟ್ಟ ಹೆಸರು ಬಂದಿದೆ' ಎಂದಿದ್ದಾರೆ ಎನ್ನಲಾಗಿದೆ. ಯಾರೋ ದರ್ಶನ್ ಅಭಿಮಾನಿ ಮೀಡಿಯಾಗೆ ಧಿಕ್ಕಾರ ಕೂಗುವಾಗ ನಿಲ್ಲಿಸಿ ಪೊಲೀಸ್ ಗದರಿಸಿದ್ದಾರೆ. ಗಲಾಟೆ ಮಾಡದಂತೆ ದರ್ಶನ್ ಫ್ಯಾನ್ಸ್ಗೆ ಪೊಲೀಸರು ವಾರ್ನಿಂಗ್ ಮಾಡಿದ್ದಾರೆ. 

ತೊಡೆಯಿಂದ ಸೀಟ್ ಕೆಳಗೆ ಬಾಂಬ್ ಟ್ರಾನ್ಸ್‌ಫರ್ ಮಾಡೋದ್ರಲ್ಲಿ ಅರ್ಥವೇ ಇಲ್ಲ; ರಮೇಶ್ ಅರವಿಂದ್!

ಅಂದಹಾಗೆ, ಇಂದು (30 ಆಗಸ್ಟ್ 202) ರಾಜ್ಯಾದ್ಯಂತ ದರ್ಶನ್ ನಟನೆಯ ಕರಿಯ ಸಿನಿಮಾ ರೀ ರಿಲೀಸ್ ಆಗದೆ. ಕರಿಯ ಬಿಡುಗಡೆಯಾಗಿ 20 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮತ್ತೆ ಸಿನಿಮಾ ಬಿಡುಗಡೆ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪದಲ್ಲಿ ನಟ ದರ್ಶನ್ ಅವರು ವಿಚಾರಣಾಧೀನ ಖೈದಿಯಾಗಿ ಈಗ ಬಳ್ಳಾರಿ ಜೈಲಿನಲ್ಲಿದ್ದಾರೆ. ದರ್ಶನ್ ಫ್ಯಾನ್ಸ್‌ ಈಗ ತಮ್ಮ ಬಾಸ್‌ನ ಹಳೆಯ ಸಿನಿಮಾ ಕಣ್ತುಂಬಿಕೊಳ್ಳಲು ಬಂದಿದ್ದಾರೆ. 
 

click me!