
ಸಿನಿಮಾ ಬಿಡುಗಡೆಯಾಗುತ್ತಿರುವ ಖುಷಿ ಜತೆಗೆ ಪುನೀತ್‌ರಾಜ್‌ಕುಮಾರ್ ಹಾಡಿರುವ ಹಾಡನ್ನು ಅಭಿಷೇಕ್ ಅಂಬರೀಶ್ ಬಿಡುಗಡೆ ಮಾಡಿದ ಖುಷಿಯನ್ನು ಹೇಳಿಕೊಂಡರು. ಬಿಗ್‌ಬಾಸ್ ಮೂಲಕ ಖ್ಯಾತಿ ಪಡೆದವರು ಚಂದನ್ ಆಚಾರ್. ಇವರಿಗೆ ಲಾಸ್ಯ ನಾಗರಾಜ್ ನಾಯಕಿ. ಯುವಿನ್ ನಿರ್ದೇಶನದ ಚಿತ್ರವಿದು. ಕ್ಷಾೌರಿಕನೊಬ್ಬ ದೊಡ್ಡ ಸ್ಟಾರ್ ನಟನಿಗೆ ಕೇಶವಿನ್ಯಾಸ ಮಾಡಬೇಕೆಂದು ಕನಸು ಕಾಣುತ್ತಾನೆ. ಇದು ಸಾಧ್ಯವಾಗುತ್ತದೆಯೇ ಎಂಬುದು ಚಿತ್ರದ ಕತೆ.
ಸುದೀಪ್ ಹಾಗೂ ದರ್ಶನ್ ಫ್ಯಾನ್ಸ್‌ಗೆ ಗುಡ್ ನ್ಯೂಸ್; 'ಫೆಬ್ರವರಿ 5'ರಂದು ಸಿಗಲಿದೆ ಡಬಲ್ ಧಮಾಕ!
ಇಡೀ ಸಿನಿಮಾ ಸಾಕಷ್ಟುತಮಾಷೆ, ಭಾವುಕ ಸನ್ನಿವೇಶಗಳ ಮೂಲಕ ಸಾಗುತ್ತದೆ. ಎಲ್ಲ ವರ್ಗದ ಪ್ರೇಕ್ಷಕರು ಈ ಚಿತ್ರವನ್ನು ನೋಡುತ್ತಾರೆ ಎನ್ನುವ ನಂಬಿಕೆಯನ್ನು ನಿರ್ದೇಶಕ ಯುವಿನ್ ವ್ಯಕ್ತಪಡಿಸಿದರು. ನಟ ಚಂದನ್ ಆಚಾರ್ ಕೂಡ ಇದೇ ಭರವಸೆಯಲ್ಲಿದ್ದರು. ಚಿತ್ರದ ನಾಯಕನ ಈ ನಂಬಿಕೆಗೆ ಕಾರಣ ನಟ ಸುದೀಪ್. ತಾನು ಸುದೀಪ್ ಅವರಿಗೆ ಕೇಶ ವಿನ್ಯಾಸ ಮಾಡಬೇಕೆಂದು ಕನಸು ಕಾಣುವುದು, ಆ ಕನಸಿನ ಹಿಂದೆ ಹೋದಾಗ ಏನೆಲ್ಲ ಎಡವಟ್ಟುಗಳು ಆಗುತ್ತವೆ, ಸಾಮಾನ್ಯನ ಆಸೆ, ಸ್ಟಾರ್ ನಟನ ನೆರಳು ಇವೆಲ್ಲವೂ ಚಿತ್ರದಲ್ಲಿ ಬರುವುದರಿಂದ ಸಿನಿಮಾ ಎಲ್ಲೂ ಬೋರ್ ಆಗಲ್ಲ ಎಂಬುದು ಹೀರೋ ಕೊಟ್ಟಭರವಸೆ.
"
ಚಂದನ್ ಆಚಾರ್ ಇಲ್ಲಿ ಕ್ಷಾೌರಿಕನ ಪಾತ್ರದಲ್ಲಿ ನಟಿಸಿದ್ದಾರೆ. ಗೌಸ್ ಫೀರ್ ತಂದೆ ಮಗನ ನಡುವೆ ಸಂಬಂಧವನ್ನು ತೋರುವ ಹಾಡೊಂದನ್ನು ಬರೆದಿದ್ದು, ಈ ಹಾಡು ಕೇಳಿದರೆ ಎಲ್ಲರಿಗೂ ತಂದೆ ನೆನಪಾಗುತ್ತಾರೆ. ತ್ರಿವರ್ಗ ಫಿಲಂಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದ್ದು, ಈಗಾಗಲೇ ಈ ಚಿತ್ರವನ್ನು ನೋಡಿದ ನಿರ್ಮಾಪಕ ಸುಧೀರ್ ಕೆ ಎಂ ಹಾಗೂ ಸ್ಟುಡಿಯೋ 18 ಜಂಟಿಯಾಗಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಸಾಹಿತಿ ಗೌಸ್ ಫೀರ್, ನಟ ಗೋಪಾಲಕೃಷ್ಣ ದೇಶಪಾಂಡೆ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.