ಮನೆಯಲ್ಲೇ ಕುಳಿತು ನಾಟಕ ನೋಡಿ, ಹಿರಿಯ ಕಲಾವಿದರಿಗೆ ನೆರವಾಗಿ..!

By Suvarna NewsFirst Published Oct 1, 2020, 5:49 PM IST
Highlights

ಕೊರೋನಾದಿಂದ ಬಹಳಷ್ಟು ಕಲಾವಿದರು ಕಷ್ಟದಲ್ಲಿದ್ದಾರೆ. ವಿಶೇಷವಾಗಿ ಹಿರಿಯ ಕಲಾವಿದರು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಕಲಾವಿದರ ನೆರವಿಗೆ ಬಂದಿದೆ ಕಿರಿಯ ಕಲಾವಿದ ತಂಡ

32 ವರ್ಷದ ಸಂಚಯ ನಾಟಕ ತಂಡ ಕಷ್ಟದಲ್ಲಿರುವ ಕಲಾವಿದರ ನೆರವಿಗೆ ಮುಂದಾಗಿದೆ. ಕೊರೋನಾದಿಂದ ಬಾಧಿತರಾದ ಹಿರಿಯ ಪುರುಷ ಮತ್ತು ಮಹಿಳಾ ಕಲಾವಿದರಿಗೆ ಯುವಕರ ತಂಡ ನೆರವಾಗಲಿದೆ.

ಕೊರೋನಾದಿಂದ ಬಹಳಷ್ಟು ಕಲಾವಿದರು ಕಷ್ಟದಲ್ಲಿದ್ದಾರೆ. ವಿಶೇಷವಾಗಿ ಹಿರಿಯ ಕಲಾವಿದರು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಕಲಾವಿದರ ನೆರವಿಗೆ ಬಂದಿದೆ ಕಿರಿಯ ಕಲಾವಿದ ತಂಡ.

2 ರುಪಾಯಿಗಾಗಿ ಪರದಾಡಿದ್ರಂತೆ ಬಾಲಿವುಡ್‌ ಬಿಗ್‌ ಬಿ..!

ಆನ್‌ಲೈನ್ ಟಿಕೆಟ್ ಶೋಗಳನ್ನು ನಡೆಸುವ ಮೂಲಕ ಹಣ ಸಂಗ್ರಹಿಸಿ ಹಿರಿಯರಿಗೆ ನೆರವಾಗಲು ತಂಡ ನಿರ್ಧರಿಸಿದೆ. ಜಗತ್ತಿನಾದ್ಯಂತ ಎಲ್ಲೇ ಇದ್ದರೂ ಕುಟುಂಬ ಸ್ನೇಹಿತರ ಜೊತೆ ಕುಳಿತು 4-5 ನಾಟಕ ನೋಡಲು ವ್ಯವಸ್ಥೆ ಮಾಡಿದ್ದು, ಈ ಮೂಲಕ ಟಿಕೆಟ್ ಹಣ ಒಟ್ಟು ಮಾಡುತ್ತಿದೆ.

ಈ ನಾಟಕಗಳು ಫಿಲ್ಮ್‌ಮೇಕರ್ಸ್ ಯುನೈಟೆಡ್ ಕ್ಲಬ್ ವೆನ್‌ಸೈಟ್‌ನಲ್ಲಿ www.thefuc.in/sanchaya ಪ್ರಸಾರವಾಗಲಿದೆ. ಪ್ರತಿ ನಾಟಕದ ಟಿಕೆಟ್ ಬೆಲೆ 500 ರೂಪಾಯಿ. ಇದರಲ್ಲಿ ಟಿಕೆಟ್ ಇದ್ದಾತ ಒಂದೇ ಸಲಕ್ಕೆ ಕುಟುಂಬ, ಸ್ನೇಹಿತರ ಜೊತೆ ನಾಟಕ ನೋಡಬಹುದು.

ಈ ರೀತಿ ಟಿಕೆಟ್ ಹಣ ಸಂಗ್ರಹಿಸಿ ಕರ್ನಾಟಕದ ಫುಲ್‌ಟೈಂ ಕಲಾವಿದರಿಗೆ ತಿಂಗಳಿಗೆ 3 ಸಾವಿರದಂತೆ ಮೂರು ತಿಂಗಳು ಸ್ಟೈಪಂಡ್ ರೂಪದಲ್ಲಿ ನೀಡಲಾಗುತ್ತದೆ. ಅಕ್ಟೋಬರ್ 2ರಿಂದ 5 ನಾಟಕಗಳು ಪ್ರಸಾರವಾಗಲಿದೆ. ಶ್ರಾದ್ಧ ಮತ್ತು ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಗಳು, ಟೆಂಪೆಸ್ಟ್, ನೀರು ಕುಡಿಸಿದ ನೀರೆಯರು, ಅಮ್ಮಾವ್ರ ಗಂಡದಂತ ನಾಟ ವೀಕ್ಷಿಸಬಹುದು.

click me!