ಸಹನಟಿಯರ 'ಸೌಂದರ್ಯ'ದ ಬಗ್ಗೆ ವಿಷ್ಣುವರ್ಧನ್ ಹೇಳಿದ್ದೇನು; ಹಾಗೆ ಹೇಳಲು ಬಲವಾದ ಕಾರಣವೇನಿರಬಹುದು?

Published : Mar 31, 2024, 11:28 AM ISTUpdated : Mar 31, 2024, 11:30 AM IST
ಸಹನಟಿಯರ 'ಸೌಂದರ್ಯ'ದ ಬಗ್ಗೆ ವಿಷ್ಣುವರ್ಧನ್ ಹೇಳಿದ್ದೇನು; ಹಾಗೆ ಹೇಳಲು ಬಲವಾದ ಕಾರಣವೇನಿರಬಹುದು?

ಸಾರಾಂಶ

ಪರ್ವ ಚಿತ್ರದ ಹಾಡೊಂದರ ಸೀನ್‌ನಲ್ಲಿ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಹಾಗೂ ನೃತ್ಯ ನಿರ್ದೇಶಕಿ ತಾರಾ ಅವರು ಸಹನರ್ತಕಿಯರನ್ನು ತುಂಡುಡೆಗೆಯಲ್ಲಿ ತೋರಿಸಿದ್ದು ಬಿಟ್ಟರೆ, ಸಾಹಸಸಿಂಹ ನಟನೆಯ ಇನ್ಯಾವುದೇ ಚಿತ್ರದಲ್ಲಿ ಸಹನಟಿಯರನ್ನು ಕೂಡ ಗ್ಲಾಮರಸ್‌ ಆಗಿ ಚಿತ್ರಿಸಿದ್ದು ಕಡಿಮೆ.

ಸ್ಯಾಂಡಲ್‌ವುಡ್ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ (Vishnuvardhan)ಅವರು ಸೌಂದರ್ಯದ ಬಗ್ಗೆ ಮಾತನಾಡಿದ್ದರು. 'ನನಗೆ ಹೆಣ್ಣಿನಲ್ಲಿ ಸೌಂದರ್ಯ ಎನ್ನುವುದು ಅವಳ ವ್ಯಕ್ತಿತ್ವದಲ್ಲಿ ಕಾಣಿಸುತ್ತದೆ. ಮುಖದ ಅಥವಾ ದೇಹದ ಸೌಂದರ್ಯ ಶಾಶ್ವತವಾಗಿ ಇರೋದಿಲ್ಲ. ಅದೇನಿದ್ದರೂ ಸ್ವಲ್ಪ ಕಾಲ ಮಾತ್ರ ಇದ್ದು ಹೋಗುವಂಥದ್ದು. ಹೆಣ್ಣು ದೇಹವನ್ನು ಮುಚ್ಚಿಕೊಂಡಷ್ಟೂ ಹೆಚ್ಚು ಸುಂದರವಾಗಿ ಕಾಣಿಸುತ್ತಾಳೆ. ನನ್ನ ಅಭಿಪ್ರಾಯದಂತೆ ದೇಹ ಪ್ರದರ್ಶನ ಅಷ್ಟೇನೂ ಒಳ್ಳೆಯದಲ್ಲ. ಬಹುಶಃ ನಾನು ಹೆಚ್ಚು ಸಮಯ ನನ್ನ ತಾಯಿಯವರ ಜತೆಯಲ್ಲಿ ಕಳೆದಿರುವುದರಿಂದ ನನ್ನ ಅಭಿಪ್ರಾಯ ಹೀಗೆ ರೂಪುಗೊಂಡಿರಬಹುದು' ಎಂದಿದ್ದಾರೆ ನಟ ವಿಷ್ಣುವರ್ಧನ್. 

ಹಾಗೇ ಮಾತು ಮಂದುವರೆಸಿದ ವಿಷ್ಣುವರ್ಧನ್, 'ಬೇರೆ ಬೇರೆ ಜನರ ಅಭಿಪ್ರಾಯಗಳು ವಿಭಿನ್ನವಾಗಿರಹುದು, ಬದಲಾಗಬಹುದು. ಆದರೆ, ನನ್ನ ಅಭಿಪ್ರಾಯ ನನ್ನದು' ಎಂದಿದ್ದಾರೆ ನಟ ವಿಷ್ಣುವರ್ಧನ್. ನಟ ವಿಷ್ಣುವರ್ಧನ್ ಅವರು ಹೆಣ್ಣನ್ನು ಹೆಚ್ಚು ಗೌರವದಿಂದ ನೋಡುವ ನಟ ಎಂಬ ಹೆಗ್ಗಳಿಕೆ ಹೊಂದಿದ್ದರು. ಸ್ವತಃ ಅವರು ತಮ್ಮ ಹೆಂಡತಿ ಭಾರತಿಯವರನ್ನು ಕೂಡ ಏಕವಚನದಲ್ಲಿ ಸಂಬೋಧಿಸುತ್ತಿರಲಿಲ್ಲ. ಭಾರತಿಯವರನ್ನು ವಿಷ್ಣುವರ್ಧನ್ ಅವರು 'ಮಾಯಿ ' ಎಂದು ಕರೆಯುತ್ತಿದ್ದರು. ಮಾಯಿ ಎಂದರೆ ಮರಾಠಿಯಲ್ಲಿ ಅಮ್ಮ ಎಂದರ್ಥ. 

ಪ್ರಥ್ವಿರಾಜ್ ಸುಕುಮಾರನ್ 'ಆಡುಜೀವಿಂತಂ' ಕಮಾಲ್; ಈ ಸೌತ್ ಸಿನಿಮಾಗೆ ಇಷ್ಟೊಂದು ರೇಟಿಂಗಾ?

ನಟ ವಿಷ್ಣುವರ್ಧನ್ ಸಿನಿಮಾಗಳಲ್ಲೂ ಅಷ್ಟೇ, ಸಾಮಾನ್ಯವಾಗಿ ಮಹಿಳೆ ಪಾತ್ರವನ್ನು ಹೆಚ್ಚು ಗ್ಲಾಮರಸ್‌ ಆಗಿ ತೋರಿಸುತ್ತಿರಲಿಲ್ಲ. ಪರ್ವ ಚಿತ್ರದ ಹಾಡೊಂದರ ಸೀನ್‌ನಲ್ಲಿ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಹಾಗೂ ನೃತ್ಯ ನಿರ್ದೇಶಕಿ ತಾರಾ ಅವರು ಸಹನರ್ತಕಿಯರನ್ನು ತುಂಡುಡೆಗೆಯಲ್ಲಿ ತೋರಿಸಿದ್ದು ಬಿಟ್ಟರೆ, ಸಾಹಸಸಿಂಹ ನಟನೆಯ ಇನ್ಯಾವುದೇ ಚಿತ್ರದಲ್ಲಿ ಸಹನಟಿಯರನ್ನು ಕೂಡ ಗ್ಲಾಮರಸ್‌ ಆಗಿ ಚಿತ್ರಿಸಿದ್ದು ಕಡಿಮೆಯೆಂದೇ ಹೇಳಬಹುದು. ನಟ ವಿಷ್ಣವರ್ದನ್ ಸಿನಿಮಾ ಎಂದರೆ, ನಿರ್ದೇಶಕರಿಗೆ ಅಲ್ಲಿ ಹೆಣ್ಣನ್ನು ಕೀಳಾಗಿ ಚಿತ್ರಿಸಬಾರದು ಎಂಬುದು ಅರ್ಥವಾಗಿತ್ತು. 

ಕೆಜಿಎಫ್ ಹೀರೋ ಯಶ್ ಮಾತು ಕೇಳಿ ಶಾಕ್ ಆಗ್ಬೇಡಿ; ಟೀಮ್‌ ಬಗ್ಗೆ ಹೀಗೆ ಹೇಳಿದ್ರು ರಾಕಿಂಗ್ ಸ್ಟಾರ್!

ನಟ ವಿಷ್ಣುವರ್ಧನ್ ಅವರು ಭಾರತಿಯವರನ್ನು (Bharathi) 1973ರಲ್ಲಿ ಲವ್ ಮಾಡತೊಡಗಿದ್ದಾರೆ. 1974ರಲ್ಲಿ ಅವರಿಬ್ಬರೂ ಜತೆಯಾಗಿ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. 1975ರಲ್ಲಿ ವಿಷ್ಣುವರ್ಧನ್-ಭಾರತಿ ಇಬ್ಬರೂ ಮದುವೆಯಾಗುವ ಮೂಲಕ ಸತಿ-ಪತಿಗಳಾಗಿದ್ದಾರೆ. ಯಾವತ್ತೂ ಅವರು ನಟಿಯರ ವಿಷಯದಲ್ಲಿ ಉಳಿದ ಹಲವು ನಟರಂತೆ ಪ್ರೀತಿ-ಪ್ರೇಮಕ್ಕೆ ಬಿದ್ದು ಹೆಸರು ಕೆಡಿಸಿಕೊಂಡವರಲ್ಲ. ಭಾರತಿಗಿಂತ ಮೊದಲು ಉತ್ತರ ಭಾರತದ ಸುಚಿತ್ರಾ ಎಂಬ ಹುಡುಗಿಯೊಂದಿಗೆ ಅವರಿಗೆ ಲವ್ ಆಗಿತ್ತು. ಈ ಸಂಗತಿ ಭಾರತಿಯವರಿಗೂ ಗೊತ್ತಿತ್ತು. ಬಳಿಕ ಅವರು ಭಾರತಿಯವರನ್ನು ಮದುವೆಯಾಗಿ ಸುಸೂತ್ರವಾಗಿ ಸಂಸಾರ ಮಾಡಿಕೊಂಡಿದ್ದರು.

ನಾನೇನೂ ಹೇಳಲ್ಲ ಅಂತ ಹೇಳಿ 'ಸಲಾರ್ 2' ಕಥೆ ಸೀಕ್ರೆಟ್ ಎಲ್ಲಾನೂ ಹೇಳ್ಬಿಟ್ರಾ ಪ್ರಥ್ವಿರಾಜ್ ಸುಕುಮಾರನ್? 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್