ಕೆಜಿಎಫ್ ತಾರೆ ಮೌನಿರಾಯ್ಯ ವಿಚಿತ್ರ ಸ್ವಭಾವವನ್ನು ಬಹಿರಂಗಗೊಳಿಸಿದ ನಿರ್ದೇಶಕ: ನಟಿ ಶಾಕ್ ಆಗುವಂಥದ್ದು ಹೇಳಿದ್ದೇನು?
ಕೆಜಿಎಫ್ ಖ್ಯಾತಿಯ ನಟಿ ಮೌನಿ ರಾಯ್ ರಾಯ್ (Mouni Roy) ಖ್ಯಾತ ಕಿರುತೆರೆ ನಟಿ. ಈಕೆ ಬಾಲಿವುಡ್ ತಾರೆ ಕೂಡ. ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮೌನಿ ಹೆಚ್ಚಾಗಿ ಫೇಮಸ್ ಆಗಿರುವುದು ಹಿಂದಿ ಧಾರಾವಾಹಿಗಳ ಮೂಲಕ. ಪಶ್ಚಿಮ ಬಂಗಾಳದ ಮೂಲದ ಮೌನಿ 2007 ರ ಹಿಂದಿ ಸೀರಿಯಲ್ `ಕ್ಯೂಂಕಿ ಸಾಸ್ ಭಿ ಕಬಿ ಬಹು ಥಿ' ಮೂಲಕ ನಟನೆ ಆರಂಭಿಸಿದವರು. ಆದರೆ ಇವರಿಗೆ ಮೊದಲ ಖ್ಯಾತಿ ಕೊಟ್ಟಿದ್ದು ದೇವೋಂಕೆ ದೇವ ಮಹಾದೇವ ಸೀರಿಯಲ್ನ ಪೌರಾಣಿಕ ಪಾತ್ರದಲ್ಲಿ. ಇದರಲ್ಲಿ ಈಕೆ ಸತಿ ಪಾತ್ರ ವಹಿಸಿದ್ದರು. ನಂತರ ನಾಗಿಣಿ ಧಾರಾವಾಹಿ ಮೂಲಕ ಮತ್ತಷ್ಟು ಖ್ಯಾತಿ ಪಡೆದರು. 2018 ರಲ್ಲಿ ತೆರೆಕಂಡ ಅಕ್ಷಯ ಕುಮಾರ್ ಅಭಿನಯದ `ಗೋಲ್ಡ್' ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದರು ಮೌನಿ. ನಂತರ ಕನ್ನಡದ ಕೆಜಿಎಫ್ ಚಿತ್ರದಲ್ಲಿ ಯಶ್ ಜೊತೆ ಒಂದು ಗೀತೆಯಲ್ಲಿ ಕಾಣಿಸಿಕೊಂಡರು. 2019 ರಲ್ಲಿ ತೆರೆಕಂಡ ಜಾನ್ ಅಬ್ರಾಹಂ ನಟನೆಯ `ರಾ' ಚಿತ್ರದಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ‘ಕೆಜಿಎಫ್: ಚಾಪ್ಟರ್ 1’ ಸಿನಿಮಾದ ‘ಗಲಿ ಗಲಿ ಮೇ..’ ಹಾಡಿನಲ್ಲಿ ಯಶ್ ಜೊತೆ ಸಕತ್ ಸ್ಟೆಪ್ ಹಾಕಿದ್ದಾರೆ. ಇದೀಗ ಮೌನಿ ರಾಯ್ ಸುಲ್ತಾನ್ ಆಫ್ ದೆಹಲಿ ವೆಬ್ ಸೀರಿಸ್ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಕೆಯ ಕೆಟ್ಟ ನಡವಳಿಕೆಯ ಕುರಿತು ನಿರ್ದೇಶಕ ಮಿಲನ್ ಲುಥ್ರಿಯಾ ಮಾತನಾಡಿದ್ದಾರೆ.
ನಿಮಗೆ ಈ ಸೀರಿಸ್ನಲ್ಲಿ ಕೆಲಸ ಮಾಡುವಾಗ ಯಾರಿಂದಾದರೂ ಸಮಸ್ಯೆ ಎದುರಾಗಿತ್ತೆ ಎಂದು ಮಿಲನ್ ಅವರನ್ನು ಪ್ರಶ್ನಿಸಿದ್ದಾಗ, ಹೌದು ನನಗೆ ತುಂಬಾ ಸಮಸ್ಯೆಯಾಗಿದ್ದು ಮೌನಿ ಅವರಿಂದಲೇ ಎಂದು ಉತ್ತರಿಸಿದ್ದಾರೆ. ಇತ್ತೀಚೆಗೆ ಮೌನಿ ರಾಯ್ ವಿಚಿತ್ರ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ನನಗೆ ಹುಷಾರಿಲ್ಲ. ನಾನು ಈ ದೃಶ್ಯವನ್ನು ಈ ರೀತಿ ಮಾಡುವುದಿಲ್ಲ. ದಯವಿಟ್ಟು ಬೆಳಕನ್ನು ಕಡಿಮೆ ಮಾಡಿ, ಬೆಳಕು ತುಂಬಾ ಪ್ರಕಾಶಮಾನವಾಗಿದೆ... ಇತ್ಯಾದಿಯಾಗಿ ಏನೇನೋ ಹೇಳುತ್ತಾರೆ. ಇದರಿಂದ ತುಂಬಾ ತೊಂದರೆಯಾಗುತ್ತಿದೆ ಎಂದ ಮಿಲನ್, ನಾನು ಮೌನಿಗೆ ಹೇಳುವುದು ಇಷ್ಟೇ. ನೀವು ಎಲ್ಲವನ್ನೂ ಚೆನ್ನಾಗಿ ಮಾಡುತ್ತಿರಿ, ಆದರೆ ಸ್ವಲ್ಪ ಹೆಚ್ಚು ವೃತ್ತಿಪರರಾದರೆ ಒಳ್ಳೆಯದು ಎಂದು ಹೇಳುವೆ ಎಂದಿದ್ದಾರೆ.
ಅಬ್ಬಬ್ಬಾ! ಮೈತುಂಬಾ ಲಕಲಕ ಚಿನ್ನದ ಆಭರಣ.. ರಮೇಶ್ ಅರವಿಂದ್ ಬಂಗಾರದ ಮನುಷ್ಯ ಆಗಿದ್ದೇಕೆ?
ಇದನ್ನು ಕೇಳಿ ಅಲ್ಲಿಯೇ ಇದ್ದ ಮೌನಿ ರಾಯ್ ಶಾಕ್ ಆಗಿದ್ದಾರೆ. ಆದರೆ ಅವರ ಎದುರೇ ಮಿಲನ್ ಅವರು ಈ ವಿಷಯವನ್ನು ಹೇಳಿದ್ದಾರೆ. ಸುಲ್ತಾನ್ ಆಫ್ ದೆಹಲಿ ಅಪರಾಧ ಥ್ರಿಲ್ಲರ್ ಸರಣಿಯಾಗಿದ್ದು , ಇದನ್ನು ಸುಪರ್ಣ್ ವರ್ಮಾ ಬರೆದಿದ್ದಾರೆ ಮತ್ತು ಮಿಲನ್ ಲುಥ್ರಿಯಾ ನಿರ್ದೇಶಿಸಿದ್ದಾರೆ. ರಿಲಯನ್ಸ್ ಎಂಟರ್‌ಟೈನ್‌ಮೆಂಟ್‌ನ ಬ್ಯಾನರ್ ಅಡಿಯಲ್ಲಿ ನಮಿತ್ ಶರ್ಮಾ ನಿರ್ಮಿಸಿದ್ದಾರೆ . ಇದರಲ್ಲಿ ತಾಹಿರ್ ರಾಜ್ ಭಾಸಿನ್ , ಮೌನಿ ರಾಯ್ , ಅಂಜುಮ್ ಶರ್ಮಾ ಸೇರಿದಂತೆ ಹಲವರು ನಟಿಸಿದ್ದಾರೆ. ಇದು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಇದೇ 13ರಂದು ಬಿಡುಗಡೆಯಾಗಿದೆ.
ಯುವಕ ಅರ್ಜುನ್ ಭಾಟಿಯಾ ಲಾಹೋರ್‌ನಲ್ಲಿ ವಾಸಿಸುತ್ತಿರುತ್ತಾನೆ. ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ನಂತರ ಗಲಭೆಗಳು ಪ್ರಾರಂಭವಾದಾಗ ಜನರು ಒಬ್ಬರನ್ನೊಬ್ಬರು ಕೊಲ್ಲಲು ಪ್ರಾರಂಭಿಸುತ್ತಾರೆ. ಇದೆಲ್ಲದರಿಂದ ತಪ್ಪಿಸಿಕೊಂಡು, ಅರ್ಜುನ್ ಭಾಟಿಯಾ ಲಾಹೋರ್‌ನಿಂದ ದೆಹಲಿಗೆ ಬರುತ್ತಾನೆ ಮತ್ತು ಅವನ ಭಯಾನಕ ಪರಿಸ್ಥಿತಿಯನ್ನು ನಿವಾರಿಸುತ್ತಾನೆ. ಇದರ ಹಿನ್ನೆಲೆಯ ಕಥಾವಸ್ತುವನ್ನು ಈ ವೆಬ್ ಸೀರಿಸ್ ಹೊಂದಿದೆ.
ಗಟ್ಟಿಮೇಳ- ಪಾರು ಸೀರಿಯಲ್ ದಂಪತಿಯ ಕ್ಯೂಟ್ ವಿಡಿಯೋ: ಕಣ್ಣು ಬೀಳತ್ತೆ ಹುಷಾರ್ ಅಂದ ಫ್ಯಾನ್ಸ್!