ಅಪ್ಪು ಹಾಡಿಗೆ ನಾಚುತ್ತಲೇ ಹೆಜ್ಜೆ ಹಾಕಿದ ಅಶ್ವಿನಿ ಪುನೀತ್ ರಾಜಕುಮಾರ್… ವೀಡಿಯೋ ವೈರಲ್

Published : Jan 20, 2025, 02:48 PM ISTUpdated : Jan 20, 2025, 02:53 PM IST
ಅಪ್ಪು ಹಾಡಿಗೆ ನಾಚುತ್ತಲೇ ಹೆಜ್ಜೆ ಹಾಕಿದ ಅಶ್ವಿನಿ ಪುನೀತ್ ರಾಜಕುಮಾರ್…  ವೀಡಿಯೋ ವೈರಲ್

ಸಾರಾಂಶ

ತಾರಾ ಅನುರಾಧರ ಮನೆಯಲ್ಲಿ ನಡೆದ ಗೆಟ್ ಟುಗೆದರ್ ಪಾರ್ಟಿಯಲ್ಲಿ ಚಂದನವನದ ಹಿರಿಯ, ಕಿರಿಯ ತಾರೆಯರು ಭಾಗವಹಿಸಿ ಸಂಭ್ರಮಿಸಿದರು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಅಪ್ಪು ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋ ವೈರಲ್ ಆಗಿದೆ. ಭಾರತಿ ವಿಷ್ಣುವರ್ಧನ್, ಮಾಲಾಶ್ರೀ, ಶ್ರುತಿ ಸೇರಿದಂತೆ ಹಲವು ನಟಿಯರು ತಮ್ಮದೇ ಹಾಡುಗಳಿಗೆ ನೃತ್ಯ ಮಾಡಿದರು.

ಇತ್ತೀಚೆಗೆ ಚಂದನವನದ ಹಿರಿಯ ನಟಿ ತಾರಾ ಅನುರಾಧ (Thara Anuradha) ತಮ್ಮ ಮನೆಯಲ್ಲಿ ಗೆಟ್ ಟು ಗೆದರ್ ಪಾರ್ಟಿ ಇಟ್ಟುಕೊಂಡಿದ್ದರು. ಈ ಕಾರ್ಯಕ್ರಮದ ಚಂದನವನ ಹಿರಿಯ ಕಿರಿಯ ತಾರೆಯರು, ಗಣ್ಯರು ಎಲ್ಲರೂ ಭಾಗಿಯಾಗಿ ಸಂಭ್ರಮಿಸಿದ್ದರು. ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಮೆರೆದಿದ್ದ ಜನಪ್ರಿಯ ನಟಿಯರನ್ನೆಲ್ಲಾ ಜೊತೆಯಾಗಿ ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದರು. ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಗೆಟ್ ಟು ಗೆದರ್ ಸಂಭ್ರಮದ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಇದೀಗ ವಿಶೇಷವಾದ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar)ಅವರು ಅಪ್ಪು ಹಾಡಿಗೆ ಹೆಜ್ಜೆ ಹಾಕಿದ್ದು, ಸಖತ್ ಕ್ಯೂಟ್ ಆಗಿದ್ದು ವೈರಲ್ ಆಗುತ್ತಿದೆ. 

ತಮ್ಮದೇ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದ ನಟಿಯರು
ಗುರುಕಿರಣ ಪತ್ನಿ ಪಲ್ಲವಿ ಗುರುಕಿರಣ್ ಕೂಡ ಈ ಗೆಟ್ ಟು ಗೆದರ್ ನಲ್ಲಿ ಭಾಗಿಯಾಗಿದ್ದು, ಇವರು ಅಲ್ಲಿ ನಡೆದ ಡ್ಯಾನ್ಸ್ ವಿಡೀಯೋ ಹಂಚಿಕೊಂಡಿದ್ದಾರೆ. ಮೊದಲಿಗೆ ಸೋನು ಗೌಡ ಮತ್ತು ಕಾರುಣ್ಯ ರಾಮ್ (KArunya Ram) ಜೊತೆಯಾಗಿ ಹೆಜ್ಜೆಹಾಕಿದ್ದಾರೆ. ಇದಾದ ಬಳಿಕ ಭಾವನಾ ರಾವ್ ಹಾಗೂ ಸುಧಾರಾಣಿ ಪುತ್ರಿ ನಿಧಿ ಜೊತೆಯಾಗಿ ನಧೀಂ ಧೀಂ ತನ ಹಾಡಿಗೆ ಭರತನಾಟ್ಯ ಮಾಡಿದ್ದರು. ಬಳಿಕ ಪ್ರಿಯಾಂಕ ಉಪೇಂದ್ರ ಡ್ಯಾನ್ಸ್ ಮಾಡಿದ್ರೆ, ಇದಾದ ನಂತರ ಭಾರತಿ ವಿಷ್ಣುವರ್ಧನ್ (Bharathi Vishnuvardhan) ಹಾಗೂ ತಾರಾ ಬಾಳ ಬಂಗಾರ ನೀನು ಹಣೆಯ ಸಿಂಗಾರ ನೀನು ಎಂದು ಮುದ್ದಾಗಿ ನೃತ್ಯ ಮಾಡಿದ್ದಾರೆ. ಈ ವಯಸ್ಸಲ್ಲೂ ಭಾರತಿಯವರ ಎನರ್ಜಿ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಬಳಿಕ ಹಿರಿಯ ನಟಿ ಹೇಮಾ ಚೌಧರಿ ಕೂಡ ತಮ್ಮ ನನ್ನ ನೋಡಿ ಓಡ ಬೇಡ ನಿಲ್ಲಯ್ಯ ಹಾಡಿಗೆ ತಾರಾ ಜೊತೆ ಹೆಜ್ಜೆ ಹಾಕಿದ್ದಾರೆ. 

ಅಶ್ವಿನಿ ಪುನೀತ್ ರಾಜಕುಮಾರ್ ಡ್ಯಾನ್ಸ್
ಈ ಕಾರ್ಯಕ್ರಮದಲ್ಲಿ ನಿನ್ನಿಂದಲೇ ನಿನ್ನಿಂದಲೇ ಹಾಡು ಕೂಡ ಪ್ಲೇ ಆಗಿದೆ. ಈ ಹಾಡಿನಲ್ಲಿ ಪುನೀತ್ ರಾಜಕುಮಾರ್ ಜೊತೆ ಪೂಜಾ ಗಾಂಧಿ (Pooja Gandhi) ನಟಿಸಿದ್ದರು. ಹಾಗಾಗಿ ಪೂಜಾ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ನಟಿ ತಾರಾ, ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಕರೆದು ಡ್ಯಾನ್ಸ್ ಮಾಡುವಂತೆ ತಿಳಿಸಿದ್ದಾರೆ. ಅಶ್ವಿನಿಯವರು ನಾಚುತ್ತಲೇ ಇಲ್ಲ, ಇಲ್ಲ ಎಂದಿದ್ದಾರೆ. ಕೊನೆಗೆ ಪೂಜಾ ಗಾಂಧಿ ಅಶ್ವಿನಿಯವರ ಕೈಯನ್ನು ಹಿಡಿದು, ತಾವೇ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಕ್ಯೂಟ್ ಆಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸದ್ದು ಮಾಡುತ್ತಿದೆ. 

ಹಿರಿಯ ನಟಿಯ ನೃತ್ಯಕ್ಕೆ ಸೋತ ಫ್ಯಾನ್ಸ್
ಇನ್ನು ಮಾಳವಿಕಾ ಅವಿನಾಶ್, ಜಯಮಾಲ, ಮಾಲಾಶ್ರೀ, ಶ್ರುತಿ, ಸುಧಾರಾಣಿ, ಅನುಪ್ರಭಾಕರ್ ಎಲ್ಲರೂ ಕೂಡ ತಮ್ಮ ತಮ್ಮ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿ ರಂಜಿಸಿದ್ದಾರೆ. ಮಾಲಾಶ್ರೀಯವರ (Malashree) ಜಟಕಾ ಕುದುರೆ ಹತ್ತಿ ಹಾಡಿಗೆ ಎಲ್ಲಾ ನಟಿಯರು ಜೋಶಲ್ಲಿ ಹೆಜ್ಜೆ ಹಾಕಿದ್ರೆ, ಸುಧಾರಾಣಿಯವರ (Sudharani) ಇವ ಯಾವ ಸೀಮೆ ಗಂಡು ಕಾಣಮ್ಮೊ ಹಾಡಿಗೆ ನಟಿ ತಾರಾ ಜೊತೆಗೆ ಮುದ್ದಾಗಿ ಹೆಜ್ಜೆ ಹಾಕಿ ಎಲ್ಲರನ್ನೂ ರಂಜಿಸಿದ್ದಾರೆ. ನಟಿ ಶ್ರುತಿ ನವಿಲೇನೋ ಕುಣೀಬೇಕು ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?