ಹಿಂದಿಗೆ ರಂಗಿತರಂಗ ರಿಮೇಕ್; ಅಕ್ಷಯ್ ಕುಮಾರ್ ಅಥವಾ ಶಾಹಿದ್ ಯಾರಾಗ್ತಾರೆ ನಾಯಕ?

Published : Jul 06, 2022, 03:23 PM IST
ಹಿಂದಿಗೆ ರಂಗಿತರಂಗ ರಿಮೇಕ್; ಅಕ್ಷಯ್ ಕುಮಾರ್ ಅಥವಾ ಶಾಹಿದ್ ಯಾರಾಗ್ತಾರೆ ನಾಯಕ?

ಸಾರಾಂಶ

ಬಾಲಿವುಡ್‌ನಲ್ಲಿ ರಂಗಿತರಂಗ ರಂಗು ಹೆಚ್ಚಿಸಲು ಅಕ್ಷಯ್ ಕುಮಾರ್ ಬರ್ತಾರಾ ಅಥವಾ ಶಾಹಿದ್ ಕಪೂರ್ ಬರ್ತಾರಾ?

ರಂಗಿತರಂಗ ಕನ್ನಡ ಸಿನಿಲೋಕದಲ್ಲಿ ಹೊಸ ಅಲೆ ಎಬ್ಬಿಸಿದ್ದ ಸಿನಿಮಾ. ಸಂಪೂರ್ಣ ಹೊಸಬರ ತಂಡ ಸೇರಿಕೊಂಡು ಮಾಡಿದ್ದ ಈ ಚಿತ್ರ ಗೆದ್ದ ಪರಿ ಕಂಡು ಇಡೀ ಇಂಡಸ್ಟ್ರೀ ಒಮ್ಮೆ ದಂಗ್ ಆಗಿತ್ತು. ನಿರ್ದೇಶಕ ಅನೂಪ್‌ ಭಂಡಾರಿ ಅವರ ಚೊಚ್ಚಲ ಪ್ರಯತ್ನ ಅದಾಗಿತ್ತು. ಅವರ ಸಹೋದರ ನಿರೂಪ್‌ ಭಂಡಾರಿ ಹೀರೋ ಆಗಿ ಆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು. 

ನಟಿಯರಾದ ರಾಧಿಕಾ ನಾರಾಯಣ್‌ ಮತ್ತು ಆವಂತಿಕಾ ಶೆಟ್ಟಿ ಕೂಡ ಇದು ಮೊದಲ ಸಿನಿಮಾ. ಮೊದಲ ಹೆಜ್ಜೆಯಲ್ಲಿಯೇ ಇವರೆಲ್ಲರೂ ಸಕ್ಸಸ್ ಸಿಕ್ಸರ್ ಬಾರಿಸಿದ್ದರು. ಈಗ ರಂಗಿತರಂಗ ಬಿಡುಗಡೆಯಾಗಿ ಏಳು ವರ್ಷ ಗತಿಸಿದೆ. ಚಿತ್ರತಂಡ ಆ ನೆನಪುಗಳ ಯಾನವನ್ನು ನೆನೆದು ಸಂಸತಪಟ್ಟಿದೆ. ಇದೇ ಸಂಭ್ರಮದಲ್ಲಿರುವ ಸಿರಿಗನ್ನಡಂ ಪ್ರೇಕ್ಷಕ ಕಾಲರ್ ಮೇಲೆತ್ತುವ ಸುದ್ದಿ ರಂಗಿತರಂಗ ಬಳಗದಿಂದ ರಿವೀಲ್ ಆಗಿದೆ. 

ಅರೇ! ರಂಗಿತರಂಗ ಒಂದೇ ಅಲ್ಲ ರಾಧಿಕಾ ನಾರಾಯಣ್ ಈ ಸಿನಿಮಾಗಳನ್ನೂ ನೋಡಲೇ ಬೇಕು!

ರಂಗಿತರಂಗ ಬಾಲಿವುಡ್ ಗೆ ರಿಮೇಕ್ ಆಗ್ತಿದೆ ಎಂಬ ಬಡಾ ಖಬರ್ ವೊಂದು ಸೌತ್ ಟು ನಾರ್ತ್ ಚರ್ಚೆಯಲ್ಲಿದೆ. ಬಿಟೌನ್ ಸ್ಟಾರ್ ನಟರೊಬ್ಬರು ರಂಗಿತರಂಗ ರಿಮೇಕ್ ನಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ. ಅದ್ರಲ್ಲಿಯೂ ಪ್ರಮುಖವಾಗಿ ಕಿಲಾಡಿ ಅಕ್ಷಯ್ ಕುಮಾರ್ ಅಥವಾ ಶಾಹಿದ್ ಕಪೂರ್ ಹೀರೋ ಆಗಿ ನಟಿಸಲಿದ್ದಾರೆ ಎನ್ನಲಾಗ್ತಿದೆ. ಸ್ವತಃ ನಿರ್ದೇಶಕ ಅನೂಪ್ ಭಂಡಾರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ವದಂತಿ ಹಬ್ಬಿದೆ.

ರಂಗಿತರಂಗ ಸಿನಿಮಾದ ಹಿಂದಿ ರಿಮೇಕ್ ಬಗ್ಗೆ ಮೊದಲಿನಿಂದಲೂ ದೊಡ್ಡ ಚರ್ಚೆ ನಡೆಯುತ್ತಲೇ ಇದೆ. ಇದೀಗ ದೊಡ್ಡ ನಿರ್ಮಾಪಕರೊಬ್ಬರು ರಂಗಿತರಂಗವನ್ನು ಹಿಂದಿಯಲ್ಲಿ ಹೊರತರಲು ಉತ್ಸುಕರಾಗಿದ್ದಾರಂತೆ. ಮುಂಬೈನ ಕಾರ್ಪೊರೇಟ್ ಸ್ಟುಡಿಯೋಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ರಂಗಿತರಂಗದಂತೆಯೇ ಮತ್ತೊಂದು ಥ್ರಿಲ್ಲರ್ ಚಿತ್ರ ’ಅನುಕ್ತಾ’

2015 ಜುಲೈ 3 ರಂದು ರಂಗಿತರಂಗ ರಾಜ್ಯದಾದ್ಯಂತ ತೆರೆಗೆ ಬಂದಿತ್ತು. ಒಂದು ವರ್ಷ ಥಿಯೇಟರ್ ನಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಚಿತ್ರ, ಆ ಬಳಿಕ ವಿದೇಶಗಳಲ್ಲೂ ರಂಗಿತರಂಗ ಅಬ್ಬರ ಜೋರಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಊಹೆಗೂ ನಿಲುಕದಂತೆ ಇತಿಹಾಸ ಸೃಷ್ಟಿಸಿದ ಈ ಚಿತ್ರಕ್ಕೆ ಅನೂಪ್ ಆಕ್ಷನ್ ಕಟ್ ಹೇಳಿದ್ದರು. ನಿರೂಪ್ ನಾಯಕನಾಗಿ ಆವಂತಿಕ ಹಾಗೂ ರಾಧಿಕಾ ನಾಯಕಿಯರಾಗಿ ಕಮಾಲ್ ಮಾಡಿದ್ದರು. ಅಜನೀಶ್ ಸಂಗೀತದ ಕಂಪು ಇರುವ ಈ ಚಿತ್ರ ಬಾಲಿವುಡ್ ಅಂಗಳದಲ್ಲೂ ರಂಗು‌ ಮೂಡಿಸಲಿದೆ ಎನ್ನಲಾಗ್ತಿದೆ. ಸದ್ಯಕ್ಕೆ ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಚಿತ್ರ ವಿಕ್ರಾಂತ್ ರೋಣ ರಿಲೀಸ್ ಗೆ ಎದುರು‌ ನೋಡುತ್ತಿದ್ದಾರೆ. ಇದಾದ ಬಳಿಕ ಕಿಚ್ಚ ಅನೂಪ್ ಜೊತೆಯಾಗಿ ಬಿಲ್ಲರಂಗ ಭಾಷಾ ಸಿನಿಮಾಕ್ಕೆ ಮುನ್ನುಡಿ ಬರೆಯಲಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾರಕ ಕಾಯಿಲೆಯಿಂದಾಗಿ ಜೀವವನ್ನು ಕಳೆದುಕೊಂಡ ಚಂದನವನದ ತಾರೆಯರು
ನಟ ಸುದೀಪ್‌ಗೆ ಮತ್ತೊಂದು ಪೋಸ್ಟ್ ಮೂಲಕ ಉತ್ತರಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮೀ..!