ಸರ್ಕಾರಿ ಶಾಲೆ ದತ್ತು ಪಡೆದ ಆ್ಯಂಕರ್ ಅಕುಲ್ ಬಾಲಾಜಿ

By Web DeskFirst Published Mar 18, 2019, 4:25 PM IST
Highlights

ರಿಷಬ್ ಶೆಟ್ಟಿಯವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ನೋಡಿ ನಟ ಅಕುಲ್ ಬಾಲಾಜಿ ಸ್ಫೂರ್ತಿ ಪಡೆದಿದ್ದಾರೆ. ಸರ್ಕಾರಿ ಶಾಲೆಯೊಂದನ್ನು ಅಕುಲ್ ದತ್ತು ಪಡೆದಿದ್ದಾರೆ. 

ಬೆಂಗಳೂರು (ಮಾ. 18): ರಿಷಬ್ ಶೆಟ್ಟಿಯವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ನೋಡಿ ನಟ ಅಕುಲ್ ಬಾಲಾಜಿ ಸ್ಫೂರ್ತಿ ಪಡೆದಿದ್ದಾರೆ.

ತಂದೆಯಿಂದಲೇ ಅಭಿಷೇಕ್‌ ಸಿನಿಮಾಗೆ ಎದುರಾಯ್ತು ಸಂಕಷ್ಟ! 

ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಅಕುಲ್ ಬಾಲಾಜಿ ಕುಟುಂಬದವರು, ಸ್ನೇಹಿತರ ಬಳಿ ಚರ್ಚೆ ನಡೆಸಿದ್ದಾರೆ. ನಂತರ ನಗರದ ಹೊರ ವಲಯದಲ್ಲಿರುವ ಲಗುಮೇನಹಳ್ಳಿಯಲ್ಲಿರುವ ಶಾಲೆಯನ್ನು ದತ್ತು ಪಡೆದಿದ್ದಾರೆ. 

ಮತ್ತೆ ಶುರುವಾಗಲಿದೆ ’ವೀಕೆಂಡ್ ವಿತ್ ರಮೇಶ್’

"ನಾನು ಲಗುಮೇನಹಳ್ಳಿ ಸರ್ಕಾರಿ ಶಾಲೆಯನ್ನು ದತ್ತು ಪಡೆಯಲು ರಿಷಬ್ ಶೆಟ್ಟಿಯವರ ಸರ್ಕಾರಿ ಶಾಲೆ ಸಿನಿಮಾವೇ ಸ್ಫೂರ್ತಿ. ಲಗುಮೇನಹಳ್ಳಿ ಶಾಲೆ ನನಗೆ ಹತ್ತಿರವಿರುವುದರಿಂದ ಆಗಾಗ ಬಂದು ಹೋಗಲು ಸುಲಭವಾಗುತ್ತದೆ. ಶಾಲೆಯ ಕಡೆ ಹೆಚ್ಚು ಗಮನ ಕೊಡಲು, ಅಗತ್ಯವಿರುವ ಸೌಲಭ್ಯವನ್ನು ಒದಗಿಸಲು ಸುಲಭವಾಗುತ್ತದೆ ಎನ್ನುವ ಕಾರಣಕ್ಕೆ ನಾನು ಈ ಶಾಲೆಯನ್ನು ಆರಿಸಿಕೊಂಡಿದ್ದೇನೆ. ನಾನು ಈ ಶಾಲೆಗೆ ಹೋಗಿದ್ದೇನೆ. ಅಲ್ಲಿ 66 ಮಕ್ಕಳು ಕಲಿಯುತ್ತಿದ್ದು ಕೇವಲ ಇಬ್ಬರು ಟೀಚರಿದ್ದಾರೆ. ಅದರಲ್ಲೂ ವೈಯಕ್ತಿಕ ಕಾರಣದಿಂದ ಒಬ್ಬ ಶಿಕ್ಷಕರು ಬಿಟ್ಟು ಹೋಗಿದ್ದಾರೆ. ಟಾಯ್ಲೆಟ್ ಇಲ್ಲ ಅಂತ ಎಷ್ಟೋ ಮಕ್ಕಳು ಬರುತ್ತಿಲ್ಲ. ಸದ್ಯದಲ್ಲೇ ಶಿಕ್ಷಕರೊಬ್ಬರನ್ನು ನೇಮಕ ಮಾಡುತ್ತೇವೆ. ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇವೆ " ಎಂದು ಅಕುಲ್ ಬಾಲಾಜಿ ಹೇಳಿದ್ದಾರೆ. 

 

click me!