
ಬೆಂಗಳೂರು (ನ.24) ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾಗಿ 8 ವರ್ಷಗಳು ಉರುಳಿದೆ. 2018ರ ನವೆಂಬರ್ 24ರಂದು ದಿಢೀರ್ ಅಸ್ವಸ್ಥಗೊಂಡ ಅಂಬರೀಶ್ ಹೃದಯಾಘಾತದಿಂದ ನಿಧರಾಗಿದ್ದಾರೆ. ಅಂಬರೀಷ್ ಇಲ್ಲದ ಕನ್ನಡ ಚಿತ್ರರಂಗ ಹಲವು ಸವಾಲುಗಳನ್ನು ಎದರಿಸಿದೆ. ಅಂಬರೀಶ್ ಇಲ್ಲದ ರಾಜಕೀಯ ಕ್ಷೇತ್ರ ಕೂಡ ಹಲವು ಬದಲಾವಣೆ ಕಂಡಿದೆ. ಅಂಬರೀಶ್ ಭಾರತೀಯ ಸಿನಿಮಾ ರಂಗದಲ್ಲೇ ಗುರುತಿಸಿಕೊಂಡಿದ್ದ ಕಲಾವಿದ. ಅಂಬರೀಷ್‌ಗೆ ಲೈಫ್ ಸ್ಟೈಲ್ ಕುರಿತು ಹಲವು ಬಾರಿ ಖುದ್ದು ಅಂಬರೀಶ್ ಹೇಳಿದ್ದಾರೆ. ಜೊತೆಗೆ ರೆಬೆಲ್ ಸ್ಟಾರ್ ಆಪ್ತರು ಹೇಳಿದ್ದಾರೆ. ಈ ಪೈಕಿ ಅಂಬರೀಶ್‌ಗೆ ಕುದುರೆ ರೇಸ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಹೀಗಾಗಿ ಬೆಂಗಳೂರು ಟರ್ಫ್ ಕ್ಲಬ್ ಹಾಗೂ ಮೈಸೂರು ರೇಸ್ ಕ್ಲಬ್‌ನಲ್ಲಿ ಸಕ್ರಿಯವಾಗಿದ್ದರು. ವಿಶೇಷ ಅಂದರೆ ಅಂಬರೀಶ್ ನಿಧನಕ್ಕೂ ಒಂದು ದಿನ ಮೊದಲು ಬೆಂಗಳೂರಿನ ರೇಸ್ ಕ್ಲಬ್‌ಗೆ ಹಾಜರಾಗಿದ್ದರು. ಆದರೆ ಅಂಬರೀಶ್ ಬೇಸರಗೊಂಡಿದ್ದರು.
ನವೆಂಬರ್ 24, 2018ರ ಸಂಜೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ದಾಖಲಾದ ಅಂಬರೀಶ್, ರಾತ್ರಿ 10.15ಕ್ಕೆ ನಿಧನರಾದರು. ಆದರೆ ನವೆಂಬರ್ 23, 2018ರಂದು ಅಂದರೆ ಸಾವಿಗೂ ಒಂದು ದಿನ ಮೊದಲು ಅಂಬರೀಶ್ ರೇಸ್ ಕ್ಲಬ್‌ಗೆ ಹಾಜರಾಗಿದ್ದರು. ರೇಸ್ ವೀಕ್ಷಿಸುವುದು, ರೇಸ್ ಕೋರ್ಸ್‌ನಲ್ಲಿ ತಮ್ಮ ಕುದುರೆ ರೇಸ್ ನೋಡುವುದು ಅಂಬರೀಶ್ ನೆಚ್ಚಿನ ಹವ್ಯಾಸವಾಗಿತ್ತು. ಹೀಗೆ ನವೆಂಬರ್ 23ರಂದು ಅಂಬರೀಷ್ ಉಸಿರಾಟದ ಸಮಸ್ಯೆ ಇದ್ದರೂ ರೇಸ್ ಕ್ಲಬ್‌ಗೆ ಹಾಜರಾಗಿದ್ದರು. ಅಂಬರೀಶ್ ರೇಸ್ ಕ್ಲಬ್‌ಗೆ ಹಾಜರಾಗುತ್ತಿದ್ದಂತೆ ಹಲವು ಆಪ್ತರು ಆಗಮಿಸಿದ್ದರು. ಆದರೆ ಅಂದು ಭಾರಿ ಮಳೆ ಕಾರ ಬೆಂಗಳೂರಿನ ರೇಸ್ ಕೋರ್ಸ್‌ನಲ್ಲಿ ರೇಸ್ ನಡೆಯಲಿಲ್ಲ. ಎಲ್ಲಾ ರೇಸ್ ರದ್ದು ಮಾಡಲಾಗಿತ್ತು. ಮಳೆ ನಿಂತು ರೇಸ್ ಆರಂಭವಾಗುವ ನಿರೀಕ್ಷೆಯಲ್ಲಿ ಅಂಬರೀಷ್ ಕೆಲ ಹೊತ್ತು ಆಪ್ತರು, ಸ್ನೇಹಿತರ ಜೊತೆ ಮಾತನಾಡುತ್ತಾ ಕಳೆದಿದ್ದಾರೆ. ಆದರೆ ಮಳೆ ತೀವ್ರಗೊಂಡ ಕಾರಣ ರೇಸ್ ರದ್ದಾಗಿತ್ತು. ಇದು ಅಂಬರೀಶ್ ಬೇಸರಕ್ಕೆ ಕಾರಣವಾಗಿತ್ತು. ಅನಾರೋಗ್ಯದ ನಡುವೆ ತಾನು ರೇಸ್ ವೀಕ್ಷಿಸಲು ಆಗಮಿಸಿದರೆ, ರೇಸ್ ನಡೆಯಲಿಲ್ಲ ಅನ್ನೋ ಬೇಸರ ಹೊರಹಾಕಿದ್ದರು.
ನವೆಂಬರ್ 23ರಂದು ದಿಢೀರ್ ರೇಸ್ ಕ್ಲಬ್‌ಗೆ ಅಂಬರೀಶ್ ಭೇಟಿ ನೀಡಿದ್ದರು. ಆದರೆ ಇದು ಅವರ ಕೊನೆಯ ಭೇಟಿಯಾಗಿತ್ತು. ಮರು ದಿನ ಅಂಬರೀಶ್ ಆರೋಗ್ಯದಲ್ಲಿ ಏರುಪೇರಾಗಿ ನಿಧನರಾಗಿದ್ದರು. ಆದರೆ ಅಂಬರೀಶ್ 1978ರಲ್ಲಿ ಮೈಸೂರಿ ರೇಸ್ ಕ್ಲಬ್ ಸದಸ್ಯರಾಗಿದ್ದರು. ಇನ್ನು ಬೆಂಗಳೂರು ರೇಸ್ ಕೋರ್ಸ್ ಸದಸ್ಯರು ಆಗಿದ್ದರು. ಕುದುರೆ ರೇಸ್ ವೀಕ್ಷಿಸುವುದು ಮಾತ್ರವಲ್ಲ, ಅಂಬರೀಶ್ ಸ್ವತಃ ರೇಸ್ ಕುದರೆ ಮಾಲೀಕರಾಗಿದ್ದರು. ಐರ್ಲೆಂಡ್‌ನಿಂದ ತರಿಸಿದ್ದ ಸ್ಪೀಡ್ ಹಾಕ್ ಹಾಗೂ ಜಾಕಿ ಅನ್ನೋ ಎರಡು ಕುದರೆ ಮಾಲೀಕರಾಗಿದ್ದರು. ಈ ಪೈಕಿ ಸ್ಪೀಡ್ ಹಾಕ್ 6 ಬಾರಿ ಟ್ರೋಫಿ ಗೆದ್ದು ದಾಖಲೆ ಬರೆದಿತ್ತು.
ಅಂಬರೀಶ್ ನಿಧನರಾದ ಬಳಿಕ ಅಂಬರೀಶ್‌ಗೆ ಗೌರವ ಸೂಚಿಸಲು ಬೆಂಗಳೂರಿನ ರಸ್ತೆಗೆ ಅಂಬರೀಶ್ ಹೆಸರು ಇಡಬೇಕು ಅನ್ನೋ ಆಗ್ರಹ ಕೇಳಿಬಂದಿತ್ತು. ಇದರಂತೆ 2023ರಲ್ಲಿ ಕರ್ನಾಟಕ ಸರ್ಕಾರ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ರೆಬೆಲ್ ಸ್ಟಾರ್ ಡಾ.ಎಂ.ಹೆಚ್ ಅಂಬರೀಶ್ ರಸ್ತೆ ಎಂದು ಮರುನಾಮಕರಣ ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.