ಇತ್ತೀಚೆಗೆ 'ದರ್ಶನ್-ಪುನೀತ್' ಮಧ್ಯೆ ನಡೆದ ಆ ಒಂದು ಘಟನೆ ಸೀಕ್ರೆಟ್ ಹೇಳಿದ ನಿರ್ದೇಶಕ ಮಹೇಶ್ ಬಾಬು!

Published : Jan 17, 2026, 01:50 PM ISTUpdated : Jan 17, 2026, 02:02 PM IST
Puneeth Rajkumar Darshan Thoogudeepa

ಸಾರಾಂಶ

ನಟ ದರ್ಶನ್ ಅವರು ದೊಡ್ಮನೆಯ ಸಿನಿಮಾಗಳಲ್ಲಿ ಕ್ಯಾಮೆರಾ ವಿಭಾಗಗಳಲ್ಲಿ ಕೆಲಸ ಮಾಡಿದ್ದರು. ದರ್ಶನ್ ತಂದೆ ನಟ ತೂಗುದೀಪ ಶ್ರೀನಿವಾಸ್ ಅವರು, ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಹಾಗೂ ಡಾ ರಾಜ್‌ಕುಮಾರ್ ಅಭಿನಯದ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಈ ಸ್ಟೋರಿ ನೋಡಿ..

ದರ್ಶನ್-ಪುನೀತ್ ಸಂಬಂಧದ ಬಗ್ಗೆ ಮಹೇಶ್ಬಾಬು ಮಾತು!

ರ್ನಾಟಕ ರತ್ನ, 'ಅಪ್ಪು' ಖ್ಯಾತಿಯ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಈಗ ನೆನಪು ಮಾತ್ರ. ಆದರೆ ಅವರು ಬಿಟ್ಟುಹೋದ ನೆನಪುಗಳೂ ಶಾಶ್ವತ ಎನ್ನಬಹುದು. ನಟ ದರ್ಶನ್ (Darshan Thoogudeepa) ಹಾಗೂ ಪುನೀತ್ ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ನಿರ್ದೇಶಕ ಮಹೇಶ್ ಬಾಬು ಮಾತನ್ನಾಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನ್ನಾಡಿರುವ ನಿರ್ದೇಶಕ ಮಹೇಶ್ ಬಾಬು ಅವರು ದರ್ಶನ್ ನಟನೆಯ 'ಅಭಯ್' ಸಿನಿಮಾ ನೋಡಿ ಅಪ್ಪು ಮೆಚ್ಚಿಕೊಂಡಿದ್ದರು ಎಂಬ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ.

ಪುನೀತ್ ನಟನೆಯ ಆಕಾಶ್ ಸಿನಿಮಾ ನಿರ್ದೇಶಕ ಮಹೇಶ್ ಬಾಬು ಅವರು 'ಪಿಆರ್‌ಕೆಸ್ಟಾರ್‌ಫ್ಯಾನ್‌ಡಂ' (prkpanstardom) ಸಂದರ್ಶನದಲ್ಲಿ ಪುನೀತ್ ಹಾಗೂ ದರ್ಶನ ಒಡನಾಟದ ಹಲವು ಘಟನೆಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ, ಮಹೇಶ್ ಬಾಬು ನಿರ್ದೇಶನ ಹಾಗೂ ದರ್ಶನ್ ನಟನೆಯ 'ಅಭಯ್' ಸಿನಿಮಾ ನೋಡಿದ್ದ ಪುನೀತ್ ಅವರು, ಅದರಲ್ಲಿನ ದರ್ಶನ್ ನಟನೆಯನ್ನು ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದರಂತೆ.

ಈ ಬಗ್ಗೆ ಮಹೇಶ್ ಬಾಬು ಅವರು 'ಅಭಯ್' ಸಿನಿಮಾದ ಹಾಡುಗಳನ್ನು ನೋಡಿದ್ದ ಅಪ್ಪು ಅವರು ನನ್ನ ನಿರ್ದೇಶನ ಹಾಗೂ ದರ್ಶನ್ ನಟನೆಯ ಬಗ್ಗೆ ಹೊಗಳಿದ್ದರು. ಅಷ್ಟೇ ಅಲ್ಲದೆ ನಟ ದರ್ಶನ್ ಅವರಿಗೂ ಫೋನ್ ಮಾಡಿ ಅವರ ನಟನೆ ಪ್ರತಿಭೆ ಬಗ್ಗೆ ಹೊಗಳಿದ್ದರು' ಎಂದಿದ್ದಾರೆ.

ನಟ ದರ್ಶನ್ ಅವರು ದೊಡ್ಮನೆಯ ಸಿನಿಮಾಗಳಲ್ಲಿ ಕ್ಯಾಮೆರಾ ವಿಭಾಗಗಳಲ್ಲಿ ಕೆಲಸ ಮಾಡಿದ್ದರು. ದರ್ಶನ್ ತಂದೆ ನಟ ತೂಗುದೀಪ ಶ್ರೀನಿವಾಸ್ ಅವರು, ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಹಾಗೂ ಡಾ ರಾಜ್‌ಕುಮಾರ್ ಅಭಿನಯದ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ತೂಗುದೀಪ ಶ್ರೀನಿವಾಸ್ ಕುಟುಂಬ ಡಾ ರಾಜ್‌ಕುಮಾರ್ ಕುಟುಂಬ ಹಾಗೂ ಕುಟುಂಬದ ಜನರೊಟ್ಟಿಗೆ ಅವಿನಾಭಾವ ಸಂಬಂಧ ಹೊಂದಿತ್ತು ಎಂಬದು ಬಹುತೇಕ ಕನ್ನಡಿಗರಿಗೆ ಗೊತ್ತಿರುವ ಸಂಗತಿ.

ಕಾಲಾನಂತರದಲ್ಲಿ ನಟ ದರ್ಶನ್ ಅವರು ಸ್ವತಂತ್ರವಾಗಿ ನಟರಾಗಿ, ಕನ್ನಡದ ಸ್ಟಾರ್ ನಟರಾಗಿ ಬೆಳೆದಿದ್ದು ಈಗ ಇತಿಹಾಸ. ಸದ್ಯಕ್ಕೆ ನಟ ದರ್ಶನ್ ತೂಗುದೀಪ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಒಟ್ಟಿನಲ್ಲಿ, ನಟ ಪುನೀತ್ ರಾಜ್‌ಕುಮಾರ್ ಅವರು ಬದುಕಿದ್ದ ಸಮಯದಲ್ಲಿ ದರ್ಶನ್ ಹಾಗೂ ಪುನೀತ್ ಅವರಿಬ್ಬರೂ ಅನ್ಯೋನ್ಯವಾಗಿಯೇ ಇದ್ದರು ಎಂಬ ಸಂಗತಿಯನ್ನು ನಿರ್ದೇಶಕರಾದ ಮಹೇಶ್ ಬಾಬು ಅವರು ಸಂದರ್ಶನದಲ್ಲಿ ಹಂಚಿಕೊಳ್ಳುವ ಮೂಲಕ ಹಲವು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ ಎನ್ನಬಹುದು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Kichcha Sudeep: ರಣಹದ್ದಿನ ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು? ನಿಜ ಏನು?
BBK 12 ಫಿನಾಲೆ ಬೆನ್ನಲ್ಲೇ ಹೊಸ ವಿವಾದ, ಗಿಲ್ಲಿ ನಟ ಅಶ್ವಿನಿ ಗೌಡ ಫ್ಯಾನ್ಸ್ ನಡುವೆ ಭಾಷೆ ಜೊತೆ ಜಾತಿ ಜಗಳ..!