ಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ಡಿಫರೆಂಟಾಗಿ ಗರ್ಭಿಣಿ ವಿಷ್ಯ ತಿಳಿಸಿದ ನಟಿ ಅದಿತಿ: ವಿಡಿಯೋ ನೋಡಿ ಆಹಾ ಎಂದ ಫ್ಯಾನ್ಸ್​

Published : Jan 01, 2024, 03:35 PM ISTUpdated : Jan 03, 2024, 11:09 AM IST
ಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ಡಿಫರೆಂಟಾಗಿ ಗರ್ಭಿಣಿ ವಿಷ್ಯ ತಿಳಿಸಿದ ನಟಿ ಅದಿತಿ: ವಿಡಿಯೋ ನೋಡಿ ಆಹಾ ಎಂದ ಫ್ಯಾನ್ಸ್​

ಸಾರಾಂಶ

ನಟಿ ಅದಿತಿ ಪ್ರಭುದೇವ ಅವರು ಗರ್ಭಿಣಿಯಾಗಿದ್ದು, ಈ ವಿಷಯವನ್ನು ಪತಿ ಯಶಸ್​ ಅವರಿಗೆ ಡಿಫರೆಂಟ್​ ಆಗಿ ತಿಳಿಸಿದ್ದಾರೆ. ಅವರು ತಿಳಿಸಿದ್ದು ಹೇಗೆ?  

‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ಅದಿತಿ ಪ್ರಭುದೇವ ಅವರು  ಸದ್ಯ ಅಲೆಕ್ಸಾ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಇದೇ ತಿಂಗಳಾಂತ್ಯದಲ್ಲಿ ಅಂದರೆ ಜನವರಿ 26ರಂದು ಚಿತ್ರ ಬಿಡುಗಡೆಯಾಗಲಿದೆ. ವಿ.ಚಂದ್ರು ನಿರ್ಮಾಣದ, ಜೀವ ನಿರ್ದೇಶನದ ಅಲೆಕ್ಸಾ ಚಿತ್ರ  ಡಿಸೆಂಬರ್ 29 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ದರ್ಶನ್ ಅವರ ಕಾಟೇರ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದೆ. ಆದರೆ ಹೊಸ ವರ್ಷಕ್ಕೆ ನಟಿ ಅದಿತಿ ಪ್ರಭುದೇವ ಅಭಿಮಾನಿಗಳಿಗೆ ಗುಡ್​​ ನ್ಯೂಸ್​​ ಒಂದನ್ನು ನೀಡಿದ್ದಾರೆ. ತಾವು ಗರ್ಭಿಣಿಯಾಗುತ್ತಿರುವುದಾಗಿ ಹೇಳಿದ್ದಾರೆ.  ಅಂದಹಾಗೆ, ಸ್ಯಾಂಡಲ್​ವುಡ್​ ನಟಿ  ಅದಿತಿ ಪ್ರಭುದೇವ  , ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ,  ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. 

ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್​ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.  ಇದಾಗಲೇ ಹಲವಾರು ರೀತಿಯ ಟಿಪ್ಸ್​ ಕೊಟ್ಟಿದ್ದು, ಕೇಕ್​ ಮಾಡುವುದನ್ನು ತಿಳಿಸಿಕೊಡುತ್ತಿರುತ್ತಾರೆ. ಇದೀಗ ಸ್ವಲ್ಪ ಡಿಫರೆಂಟ್​ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಅದೇನೆಂದರೆ, ತಾವು ಗರ್ಭಿಣಿಯಾಗುತ್ತಿರುವ ವಿಷಯವನ್ನು ಪತಿ ಯಶಸ್​ ಅವರಿಗೆ ಹೇಗೆ ತಿಳಿಸಿದೆ ಎನ್ನುವ ಬಗ್ಗೆ ವಿವರಿಸಿದ್ದಾರೆ. ನಂತರ ಪತಿಯ ಕಣ್ಣಿಗೆ ಬಟ್ಟೆ ಕಟ್ಟಿದ್ದಾರೆ. ಮಗುವಿನ ಚಿಕ್ಕ ಡ್ರೆಸ್​ ಕೊಟ್ಟಿದ್ದಾರೆ.

2023ರ ದೊಡ್ಡ ಫ್ಲಾಪ್​ ಚಿತ್ರವಿದು: 33 ಕೋಟಿ ಬಜೆಟ್​ನಲ್ಲಿ ತೆಗೆದ ಚಿತ್ರ ಗಳಿಸಿದ್ದು ಕೇವಲ 10 ಕೋಟಿ ರೂ!

ಆದರೆ ಪತಿಗೆ ಅದೇನು ಎಂದು ಅರ್ಥವಾಗಲಿಲ್ಲ. ನಂತರ ಪತಿಯ ಕಣ್ಣಿಗೆ ಕಟ್ಟಿದ ಬಟ್ಟೆ ಬಿಚ್ಚಿ ಒಂದು ಬಾಕ್ಸ್​ ನೀಡಿದ್ದಾರೆ. ಅದರಲ್ಲಿ ಪ್ರೆಗ್ನೆನ್ಸಿ ಕಿಟ್​ ಇಟ್ಟಿದ್ದರು. ಅದರಲ್ಲಿ ಗರ್ಭಿಣಿ ಎನ್ನುವುದನ್ನು ತೋರಿಸಿರುವುದನ್ನು ನೋಡಿದ ಪತಿ ಖುಷಿಯಿಂದ ಕುಣಿದಾಡಿದ್ದಾರೆ. ಪತ್ನಿಗೆ ಕಿಸ್​ ಕೊಟ್ಟಿದ್ದಾರೆ. ಹೀಗೆ ಈ ವಿಶೇಷ ದಿನವನ್ನು ವಿಶೇಷ ರೀತಿಯಲ್ಲಿ ಹೊಸ ವರ್ಷದ ಸರ್​ಪ್ರೈಸ್​ ನೀಡಿದ್ದಾರೆ. 

ಮೊದಲಿಗೆ ಹೊಸ ವರ್ಷಕ್ಕೆ ಒಂದು ಗಿಫ್ಟ್​ ಕೊಡುವುದಾಗಿ ಹೇಳಿದ್ದಾರೆ. ಅದೇನೆಂದು ಯಶಸ್​ ಕೇಳಿದಾಗ ಇದೇನು ಬೇರೆ ಗಿಫ್ಟ್​ ಥರ ಅಲ್ಲ. ಗಿಫ್ಟ್​ ತಂದು ಓಪನ್​ ಮಾಡುವ ರೀತಿಯದ್ದು ಅಲ್ಲ ಎನ್ನುತ್ತಲೇ ಒಂದು ಟಾಸ್ಕ್​ ಇದೆ. ಅದನ್ನು ನೀವು ಕಂಪ್ಲೀಟ್​ ಮಾಡಬೇಕು ಎಂದಿದ್ದಾರೆ. ಟಾಸ್ಕ್​ ಮುಗಿಯುವಷ್ಟರಲ್ಲಿ ಆ ಗಿಫ್ಟ್​ ಏನು ಅಂತ ಹೇಳಬೇಕು ಎಂದಿದ್ದಾರೆ. 

ಮಗನೇ ಬೇಕಂತ ಹರಕೆ ಹೊತ್ತುಕೊಳ್ಳೋ ಅಮ್ಮಂದಿರೇ ಈ ಡೈಲಾಗ್​ ಸ್ವಲ್ಪ ಕೇಳಿಬಿಡಿ ಅಂತಿದ್ದಾರೆ ಭಾಗ್ಯಲಕ್ಷ್ಮಿ ಫ್ಯಾನ್ಸ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬರ್ತಾ ಬರ್ತಾ ಸಖತ್ Bold ಆಗ್ತಿದ್ದಾರೆ ಬಿಗ್ ಬಾಸ್ ಸಿಂಹಿಣಿ Sangeetha Sringeri
ಮದ್ವೆ ಬಗ್ಗೆ ಡಾಲಿ ಧನಂಜಯ್​ ಒಂದೇ ಒಂದು ಮಾತು: 67% Gen Z ಮದ್ವೆಗೆ ರೆಡಿ! ಅಂಥದ್ದೇನು ಹೇಳಿದ್ರು ನಟ?