ನಟ ದರ್ಶನ್ ಜಾಮೀನು ಅರ್ಜಿ ಹಾಕಿಲ್ಲ, ಪೆರೋಲ್ ಪಡೆದು ಶೂಟಿಂಗ್ ಮುಗಿಸಲು ಪ್ಲಾನ್ ಮಾಡಿದಾರಾ ಹೇಗೆ?

By Shriram Bhat  |  First Published Sep 11, 2024, 5:21 PM IST

ನಟ ದರ್ಶನ್ ಪೆರೋಲ್ ಮೇಲೆ ಹೊರ ಬರಬಹುದಾ.? ಬಾಲಿವುಡ್ ನಟ ಸಂಜಯ್ ದತ್​ಗೆ ಸಿಕ್ಕ ಮಾರ್ಗ ದರ್ಶನ್ ಅವರಿಗೂ ಸಿಗುತ್ತಾ..? ಉತ್ತರ ಗೊತ್ತಿಲ್ಲ. ನಟ ಸಂಜಯ್ ದತ್ ಟಾಡಾ ಕೇಸ್'ನಲ್ಲಿ ಜೈಲಿಗೆ ಹೋಗಿದ್ದ ವಿಷ್ಯ ನಿಮ್ಗೆಲ್ಲಾ ಗೊತ್ತು. ಆ ಕೇಸ್​ನಲ್ಲಿ ಸಂಜಯ್​ದತ್​ಗೆ ಐದು ವರ್ಷ ಶಿಕ್ಷೆ ಆಗಿತ್ತು...


ನಟ ದರ್ಶನ್ ಡೆವಿಲ್​ (Devil) ಸಿನಿಮಾಗೆ ಕೊಟ್ಟಿದ್ದ 70 ದಿನದ ಕಾಲ್ ಶೀಟ್ ಮುಗೀತು.. ಕೊಲೆ ಕೇಸ್​ನಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ನಟ ದರ್ಶನ್‌ಗೆ (Darshan) ಜಾಮೀನು ಸಿಗುತ್ತಾ? ದರ್ಶನ್​​ರನ್ನ ಪೆರೋಲ್​ ಮೇಲೆ ಹೊರ ತರೋದಕ್ಕೆ ನಡೆಯುತ್ತಿದೆ ದೊಡ್ಡ ಪ್ಲ್ಯಾನು ಎನ್ನಲಾಗುತ್ತಿದೆ. ಇನ್ನೂ ಜಾಮೀನಿಗೆ ಅರ್ಜಿ ಹಾಕಿಲ್ಲ, ಆದರೆ ಪೆರೋಲ್​ ಬಗ್ಗೆ ಈಗ್ಯಾಕೆ ಚರ್ಚೆ..?ಈ ಇಂಟ್ರೆಸ್ಟಿಂಗ್ ಸಂಗತಿ ಈ ಸ್ಟೋರಿಯಲ್ಲಿ ರಿವೀಲ್ ಆಗಿದೆ ನೋಡಿ!.

ನಟ ದರ್ಶನ್​​ ಇನ್ನೂ ಜಾಮೀನು ಅರ್ಜಿ ಸಲ್ಲಿಸಿಲ್ಲ. ದರ್ಶನ್ ಕೃತ್ಯದ ಬಗ್ಗೆ ಚಾರ್ಜ್ ಶೀಟ್​​ ಸಲ್ಲಿಕೆ ಆಗಿದೆ. ಜಾರ್ಜ್'ಶೀಟ್'ನಲ್ಲಿರೋ ಅಂಶಗಳನ್ನು ನೋಡಿದ್ರೆ, ಆ ಕೊಲೆ ಕೇಸ್'ನ ಚಕ್ರವ್ಯೂಹ ಭೇದಿಸಿ ಜೈಲಿಂದ ನಟ ದರ್ಶನ್ ಹೊರ ಬರೋಕೆ ಸಮಯ ಹಿಡಿಯಬಹುದು ಎನ್ನಲಾಗುತ್ತಿದೆ. ಆದ್ರೆ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರೋ ದರ್ಶನ್​ ಕಡೆಯವರು ಪೆರೋಲ್​ ಬಗ್ಗೆ ಮಾತಾಡ್ತಿದ್ದಾರೆ. 

Tap to resize

Latest Videos

ಮತ್ತೆ ಬರಲಿದೆ ಅಮೆರಿಕಾ ಅಮೆರಿಕಾ ಸಿನಿಮಾ; ರಮೇಶ್ ಬದಲು ಪಾರ್ಟ್-2ದಲ್ಲಿ ಯಾರಿದ್ದಾರೆ?

ದರ್ಶನ್​ನ್ನ ಪೆರೋಲ್​ ಮೇಲೆ ಹೊರ ತರುತ್ತಾರಾ ನಿರ್ಮಾಪಕರು.? ನಟ ದರ್ಶನ್ ಅವರ ಸಿನಿಮಾ ಕಾಲ್‌ಶೀಟ್ ಪಡೆದು 50 ಕೋಟಿಗು ಹೆಚ್ಚು ಹಣವನ್ನ ಕನ್ನಡದ ಪ್ರೊಡ್ಯೂಸರ್ಸ್​ ಇನ್ವೆಸ್ಟ್ ಮಾಡಿದ್ದಾರೆ. ದಚ್ಚು ಬೇಗ ಹೊರಗೆ ಬರಲಿ, ಶೂಟಿಂಗ್ ಶುರು ಮಾಡೋಣ ಅಂತ ಕಾಯುತ್ತಿದ್ದಾರೆ. ಅದ್ರೆ, ನಟ ದರ್ಶನ್ ಇನ್ನೂ ಬೇಲ್ ಪಡೆಯೋಕೆ ಅರ್ಜಿಯನ್ನೇ ಹಾಕಿಲ್ಲ. ಹೀಗಾಗಿ, ನಟ ದರ್ಶನ್​​ ನಂಬಿ ಸಿನಿಮಾಗೆ ದುಡ್ಡು ಹಾಕಿದವರೆಲ್ಲಾ ಪೆರೋಲ್ ಮೇಲೆ ದರ್ಶನ್​ರನ್ನ ಕರಸಿಕೊಳ್ಳೋ ಪ್ಲ್ಯಾನ್ ಮಾಡುತ್ತಿದ್ದಾರಂತೆ.. 

ನಟ ದರ್ಶನ್ ಪೆರೋಲ್ ಮೇಲೆ ಹೊರ ಬರಬಹುದಾ.? ಬಾಲಿವುಡ್ ನಟ ಸಂಜಯ್ ದತ್​ಗೆ ಸಿಕ್ಕ ಮಾರ್ಗ ದರ್ಶನ್ ಅವರಿಗೂ ಸಿಗುತ್ತಾ..? ಉತ್ತರ ಗೊತ್ತಿಲ್ಲ. ನಟ ಸಂಜಯ್ ದತ್ ಟಾಡಾ ಕೇಸ್'ನಲ್ಲಿ ಜೈಲಿಗೆ ಹೋಗಿದ್ದ ವಿಷ್ಯ ನಿಮ್ಗೆಲ್ಲಾ ಗೊತ್ತು. ಆ ಕೇಸ್​ನಲ್ಲಿ ಸಂಜಯ್​ದತ್​ಗೆ ಐದು ವರ್ಷ ಶಿಕ್ಷೆ ಆಗಿತ್ತು. ಸಂಜಯ್ ದತ್ ಪೆರೋಲ್​ ಮೇಲೆ ಆಗಾಗ ಹೊರ ಬಂದು ಸಿನಿಮಾ ಶೂಟಿಂಗ್​ನಲ್ಲಿ ಭಾಗಿ ಆಗುತ್ತಿದ್ರು. ಈಗ ನಟ ದರ್ಶನ್ ಕೂಡ ಸಂಜಯ್​ ದತ್​ ಅವರಂತೆ ಪೆರೋಲ್​ ಮೇಲೆ ಹೊರ ಬಂದು ಒಪ್ಪಿಕೊಂಡಿರೋ ಸಿನಿಮಾ ಕೆಲಸ ಮುಗಿಸಲು ಅವಕಾಶ ಸಿಗಬಹುದು. 

ಅಣ್ಣಾವ್ರಿಗಿತ್ತು ಬಾಲಿವುಡ್ ನಂಟು, ಡಾ ರಾಜ್‌ ಚಿತ್ರಕ್ಕೆ ಕೆಲಸ ಮಾಡಿದ್ರು ಸಲ್ಲೂ ತಂದೆ ಸಲೀಮ್!

ನಟ ದರ್ಶನ್ ಬೇಲ್​​ಗೆ ಅರ್ಜಿ ಹಾಕಿಲ್ಲ. ಯಾಕಂದ್ರೆ ಚಾರ್ಜ್ ಶೀಟ್​ ಸ್ಟಡಿ ಮಾಡಿ ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಬೇಕು. ಈ ಕೆಲಸಕ್ಕೆಲ್ಲಾ ಸಾಕಷ್ಟು ಸಮಯ ಹಿಡಿಯಲಿದೆ. ಆದರೆ, ದರ್ಶನ್ ಅವರನ್ನು ನಂಬಿ ಕುಳಿತಿರುವ ನಿರ್ಮಾಪಕರಿಗೆ ಕಾಲ ಕಳೆದಷ್ಟು ಆತಂಕ ಜಾಸ್ತಿ ಆಗಬಹುದು. ಹೀಗಾಗಿ, ಮುಂದೇನಾಗುತ್ತೋ ಎಂಮ ಕುತೂಹಲ ಕ್ರಿಯೇಟ್ ಆಗಿದೆ. 

click me!