'ಚಾರ್ಲಿ 777' ಹಲವು ಕಾರಣಗಳಿಂದ ಸಿನಿ ಪ್ರೇಮಿಗಳ ಕುತೂಹಲ ಕೆರಳಿಸಿದೆ. ಒಂದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಸಿನಿಮಾ ಎಂಬುದಕ್ಕೆ. ಮತ್ತೊಂದು ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಶ್ವಾನವೊಂದು ಪ್ರಮುಖ ಪಾತ್ರವಹಿಸಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ಅಷ್ಟಕ್ಕೂ ಈ ಶ್ವಾನಕ್ಕೆ ಆ್ಯಕ್ಟಿಂಗ್ ಹೇಳಿ ಕೊಟ್ಟಿದ್ಹೇಗೆ? ರಕ್ಷಿತ್ ಹೇಳಿದ್ದೇನು?
‘ದಯಮಾಡಿ ಹಿಂದೆ ನಡೆದ ಸಂಗತಿಗಳನ್ನು ಮತ್ತೆ ಮತ್ತೆ ಕೆದಕಬೇಡಿ. ಇತರರ ಬಗ್ಗೆ ಕೆಟ್ಟದಾಗಿ ಮಾತನಾಡೋದನ್ನು ನಿಲ್ಲಿಸಿ. ನಾವೆಲ್ಲ ಮನುಷ್ಯರಂತೆ ವರ್ತಿಸೋಣ.’
- ಹೀಗನ್ನುವ ಮೂಲಕ ರಕ್ಷಿತ್ ಶೆಟ್ಟಿ ಮತ್ತೊಮ್ಮೆ ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತಿದ್ದಾರೆ. ಜನ್ಮದಿನಕ್ಕೆ ಶುಭ ಕೋರಿದವರಿಗೆ ಥ್ಯಾಂಕ್‌ಸ್ ಹೇಳಲಿಕ್ಕೆಂದು ಸೋಷಿಯಲ್ ಮೀಡಿಯಾದಲ್ಲಿ ಲೈವ್‌ಗೆ ಬಂದ ರಕ್ಷಿತ್, ರಶ್ಮಿಕಾ ಹೆಸರು ಹೇಳದೆಯೇ ಅವರನ್ನು ಬೆಂಬಲಿಸಿ ಮಾತನಾಡಿದರು.
‘ಕೆಲವೊಂದು ಕಮೆಂಟ್‌ಸ್ ಕೇಳೋದಕ್ಕೆ ಬೇಜಾರಾಗುತ್ತೆ. ಆ ಕಮೆಂಟ್ ನನ್ನ ಬಗ್ಗೆ ಅಲ್ಲ, ಬೇರೆಯವರ ಬಗ್ಗೆ. ಮುಗಿದು ಹೋಗಿರುವುದರ ಬಗ್ಗೆ ಮಾತನಾಡಿ ಪ್ರಯೋಜನ ಇಲ್ಲ. ದಯಮಾಡಿ ಇತರರ ಬಗ್ಗೆ ಕೆಟ್ಟದಾಗಿ ಮಾತನಾಡೋದು ನಿಲ್ಲಿಸಿ. ನಾವು ನಮ್ಮ ಬಗ್ಗೆ ಅಸಹ್ಯ ಪಟ್ಟುಕೊಳ್ಳಬಾರದು. ಆ ಥರ ಬೇರೆಯವರ ಬಗೆಗೂ ಕಮೆಂಟ್ ಮಾಡಬಾರದು. ಎಲ್ಲರಲ್ಲಿ ನನ್ನ ಮನವಿ, ದಯಮಾಡಿ ನಾವೆಲ್ಲ ಮನುಷ್ಯರಂತೆ ವರ್ತಿಸೋದನ್ನು ಕಲಿಯೋಣ. ಪ್ರತಿಯೊಬ್ಬರಿಗೂ ಗೌರವ ಕೊಡೋಣ. ಪ್ರತಿಯೊಬ್ಬರಿಗೂ ಅವರದೇ ಆದ ಬದುಕಿದೆ’ ಎಂದೂ ರಕ್ಷಿತ್ ಈ ಸಂದರ್ಭ ಹೇಳಿದರು.
ರಕ್ಷಿತ್ ಶೆಟ್ಟಿ 777 ವೀಡಿಯೋಗೆ ಸೂಪರ್ ರೆಸ್ಪಾನ್ಸ್
777 ಚಾರ್ಲಿ ಸಿನಿಮಾದ ಹೀರೋ ಕಿರಣ್‌ರಾಜ್
‘777 ಚಾರ್ಲಿ ಚಿತ್ರದಲ್ಲಿ 10 ಹಾಡುಗಳಿವೆ. ಈ ಸಲ ಹಿಂದಿನ ಸಲದಂತೆ ಮಿಸ್ಟೀಕ್‌ಗಳನ್ನು ಮಾಡದೇ ಅಚ್ಚುಕಟ್ಟಾಗಿ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಮಾಡ್ತೀವಿ’ ಎಂದಿದ್ದಾರೆ ರಕ್ಷಿತ್.
‘ಮನುಷ್ಯರಿಂದಲೇ ಆ್ಯಕ್ಟಿಂಗ್ ಮಾಡಿಸೋದು ಕಷ್ಟ. ಇನ್ನು ಪ್ರಾಣಿಗಳಿಂದ ನಟನೆ ತೆಗೆಸೋದು ಹೇಗಿರಬಹುದು ಕಲ್ಪಿಸಿಕೊಳ್ಳಿ. ಚಾರ್ಲಿ ಜೊತೆಗಿನ ಸೀನ್‌ಗಳಲ್ಲಿ 30 ರಿಂದ 40 ಟೇಕ್‌ಗಳು ಕಾಮನ್ ಆಗಿದ್ದವು. ನಲವತ್ತನೇ ಶಾಟ್‌ನಲ್ಲಿ ಚಾರ್ಲಿ ಚೆನ್ನಾಗಿ ಮಾಡಿ, ನಾನು ಚೆನ್ನಾಗಿ ಮಾಡದಿದ್ರೆ ಅಲ್ಲಿ ನಲವತ್ತೊಂದನೇ ಶಾಟ್‌ಗೆ ಅವಕಾಶ ಇರಲಿಲ್ಲ. ಚಾರ್ಲಿ ತರಬೇತುದಾರ ಪ್ರಮೋದ್ ನಾಲ್ಕು ವರ್ಷಗಳಿಂದ ಈ ಸಿನಿಮಾಕ್ಕಾಗಿಯೇ ಎರಡು ನಾಯಿಗಳನ್ನು ರೆಡಿ ಮಾಡಿದ್ದಾರೆ. ಪ್ರತೀ ಸೀನ್‌ಗೂ ಒಂದೊಂದು ತಿಂಗಳ ತರಬೇತಿ ಬೇಕಿತ್ತು. ನಮ್ಮ ನಿರ್ದೇಶಕ ಕಿರಣ್ ರಾಜ್ ಅವರು ಏನೆಲ್ಲ ಮಾಡಬೇಕು ಅನ್ನುವ ಲಿಸ್‌ಟ್ ಕೊಟ್ಟರೆ ಅವರು ಅದಕ್ಕೆ ತಕ್ಕ ಹಾಗೆ ಪಳಗಿಸುತ್ತಿದ್ದರು. ಇದರಲ್ಲಿ ಕಿರಣ್ ರಾಜ್ ಅವರ ಕೆಲಸವೂ ದೊಡ್ಡದಿದೆ. ಹಾಗೆ ನೋಡಿದರೆ ಇಲ್ಲಿ ಅವರೇ ಎಲ್ಲರಿಗಿಂತ ದೊಡ್ಡ ಹೀರೋ’ ಎನ್ನುತ್ತಾರೆ ರಕ್ಷಿತ್.